Connect with us

Corona

ಕೊರೊನಾ ನಿಯಮ ಗಾಳಿಗೆ ತೂರಿ ವೇಣುಗೋಪಾಲ ಸ್ವಾಮಿ ಜಾತ್ರೆ

Published

on

– ಜಾತ್ರೆಯಲ್ಲಿ ಸಾವಿರಾರು ಜನ ಭಾಗಿ
– ಜಿಲ್ಲಾಧಿಕಾರಿಗಳ ಗಮನಕ್ಕೂ ತರದೆ ಜಾತ್ರೆ ಆಯೋಜನೆ

ಯಾದಗಿರಿ: ಕೊರೊನಾ ಭೀತಿಯ ನಡುವೆ ಜಿಲ್ಲೆಯ ಸುರಪುರದ ಐತಿಹಾಸಿಕ ಪ್ರಸಿದ್ಧ ವೇಣುಗೋಪಾಲ ಸ್ವಾಮಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ, ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದಿದೆ.

ಜಾತ್ರೆಯಲ್ಲಿ ಪಾಲ್ಗೊಂಡ ಜನ ಮುಖಕ್ಕೆ ಮಾಸ್ಕ್ ಧರಿಸಿದೆ, ಸಾಮಾಜಿಕ ಅಂತರವಿಲ್ಲದೆ ಪಾಲ್ಗೊಂಡಿದ್ದರು. ಪೊಲೀಸರು ಎದುರಿಗೆ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೊರೊನಾ ನಿಯಮಗಳು ಇದ್ದರೂ ಪೊಲೀಸ್ ಇಲಾಖೆ ಜಾತ್ರೆಗೆ ಹೇಗೆ ಅನುಮತಿ ನೀಡಿದೆ ಎಂಬ ಅನುಮಾನ ಮೂಡಿದೆ.

Advertisement
Continue Reading Below

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6 ಸಾವಿರ ಗಡಿ ದಾಟಿದೆ. 40ಕ್ಕೂ ಅಧಿಕ ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಒಂದು ಕಡೆ ಪ್ರವಾಹ ಮತ್ತೊಂದು ಕಡೆ ಕೊರೊನಾ ವಿರುದ್ಧ ಜಿಲ್ಲಾಡಳಿತ ಹಗಲು-ರಾತ್ರಿ ಹೋರಾಟ ನಡೆಸಿದೆ. ಕೊರೊನಾ ಅನ್‍ಲಾಕ್ ನಿಯಮಗಳ ಪ್ರಕಾರ ಯಾವುದೇ ಜಾತ್ರೆ, ಸಭೆ ಸಮಾರಂಭಕ್ಕೆ ಅನುಮತಿ ಸಿಕ್ಕಿಲ್ಲ. ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ನೀಡಿದೆಯಾದರೂ 50ಕ್ಕೂ ಅಧಿಕ ಜನರಿಗೆ ಅವಕಾಶವಿಲ್ಲ. ಆದರೆ ಯಾದಗಿರಿಯಲ್ಲಿ ಸರ್ಕಾರದ ಆದೇಶಕ್ಕೆ ಕಿಮ್ಮತ್ತು ಇಲ್ಲದಂತಾಗಿದೆ. ನಿಯಮಗಳನ್ನು ಗಾಳಿಗೆ ತೂರಿ ಸಾವಿರಾರು ಜನ ಜಾತ್ರೆ ಮಾಡಿದ್ದಾರೆ.

ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಯುವ ವೇಳೆ ಪೊಲೀಸರ ವಾಹನಗಳು ಮತ್ತು ಅಧಿಕಾರಿಗಳು ಸ್ಥಳದಲ್ಲೇ ಇದ್ದರು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಜಿಲ್ಲಾಧಿಕಾರಿ ರಾಗಪ್ರಿಯ ಅವರನ್ನು ಪಬ್ಲಿಕ್ ಟಿವಿ ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ, ವಿಚಾರಿಸುತ್ತೇನೆ ಎಂದರು. ಜಿಲ್ಲಾಡಳಿತದ ಗಮನಕ್ಕೆ ಇಲ್ಲದೆ ಜಾತ್ರೆ ನಡೆದಿದೆಯೇ ಎಂಬ ಅನುಮಾನ ಇದೀಗ ಮೂಡುತ್ತಿದೆ.

Click to comment

Leave a Reply

Your email address will not be published. Required fields are marked *