Connect with us

Bengaluru City

ಸೀಲ್‍ಡೌನ್ ಪ್ರದೇಶದಲ್ಲಿ ವಾಕಿಂಗ್- ಪೊಲೀಸರ ಎಚ್ಚರಿಕೆಗೂ ಕ್ಯಾರೆ ಎನ್ನದ ಜನ

Published

on

– ಮಹಾಲಕ್ಷ್ಮಿ ಲೇಔಟ್ ನಲ್ಲಿ ಜನರ ಓಡಾಟ ಜೋರು

ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್‍ನ ಮಾರಪ್ಪನ ಪಾಳ್ಯದಲ್ಲಿ ಶನಿವಾರ ಪೊಲೀಸ್ ಪೇದೆಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಮಾರಪ್ಪನ ಪಾಳ್ಯದ ಶಂಕರ್ ನಗರದ 4ನೇ ಹಂತದ 1ನೇ ಕ್ರಾಸ್‍ನ್ನು ಸೀಲ್‍ಡೌನ್ ಮಾಡಿದ್ದಾರೆ. ಈ ಕುರಿತು ಪೊಲೀಸರು ಎಚ್ಚರಿಕೆ ನೀಡಿದರೂ ಜನ ವಾಕಿಂಗ್ ಮಾಡುತ್ತಿದ್ದಾರೆ.

ಸೀಲ್‍ಡೌನ್ ಪ್ರದೇಶದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ವಾಕ್ ಮಾಡುತ್ತಿದ್ದು, ಮನೆಯಿಂದ ಹೊರಗಡೆ ಬರಬೇಡಿ ಎಂದು ಪೊಲೀಸರು ಕೂಗಿ ಹೇಳಿದರೂ, ಕ್ಯಾರೇ ಅನ್ನದೆ ಓಡಾಟ ನಡೆಸಿದ್ದಾನೆ. ಸೀಲ್‍ಡೌನ್ ಆದ ರೋಡಲ್ಲಿ ವಾಕಿಂಗ್ ವಾಕಿಂಗ್ ಮಾಡಿ ನಿರ್ಲಕ್ಷ್ಯದಿಂದ ವರ್ತಿಸಿದ್ದಾನೆ. ಶನಿವಾರವಷ್ಟೇ ಪೋಲೀಸ್ ಪೇದೆಗೆ ಪಾಸಿಟಿವ್ ಬಂದಿದ್ದು, ಮಾರಪ್ಪನ ಪಾಳ್ಯದ ಶಂಕರ್ ನಗರದ 4ನೇ ಹಂತದ 1ನೇ ಕ್ರಾಸ್ ರಸ್ತೆಯನ್ನು ಸೀಲ್‍ಡೌನ್ ಮಾಡಲಾಗಿದೆ.

ಸಂಪೂರ್ಣವಾಗಿ ಸೀಲ್‍ಡೌನ್ ಮಾಡಿ ಬ್ಯಾರಿಕೇಡ್ ಹಾಕಿದ್ದಾರೆ. ಆದರೆ ವ್ಯಕ್ತಿ ಓಡಾಟ ನಡೆಸಿದ್ದಾನೆ. ಮಹಾಲಕ್ಷ್ಮಿ ಲೇಔಟ್ ನಲ್ಲಿ ಜನರ ಓಡಾಟ ಜೋರಾಗಿದ್ದು, ಹಾಲು ಹಣ್ಣು, ತರಕಾರಿ ಹಾಗೂ ಅಗತ್ಯ ವಸ್ತುಗಳನ್ನು ಕೊಳ್ಳಲು ಗುಂಪಾಗಿ ಸೇರುತ್ತಿದ್ದಾರೆ. ಎಷ್ಟೇ ಬ್ಯಾರಿಕೇಡ್ ಹಾಕಿದರೂ ಜನ್ರ ಓಡಾಡೋದು ಬಿಡುತ್ತಿಲ್ಲ. ಲಾಕ್‍ಡೌನ್ 4.0 ಹಿನ್ನೆಲೆ ಮೇ ಅಂತ್ಯದವರೆಗೂ ಪ್ರತಿ ಭಾನುವಾರ ಬಂದ್ ಇರುತ್ತೆ. ಹಾಲು, ತರಕಾರಿ ಕೊಳ್ಳಲು ಅವಕಾಶವೂ ಇದೆ. ಆದರೆ ಮಾರ್ಕೆಟ್‍ನಲ್ಲಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ, ಮಾಸ್ಕ್ ಧರಿಸದೆ ಬರುತ್ತಿದ್ದಾರೆ. ಜೊತೆಗೆ ಚಿಕ್ಕ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದು, ಶನಿವಾರ ಪೇದೆಗೆ ಪಾಸಿಟಿವ್ ಬಂದರೂ ಜನರಿಗೆ ಭಯ ಇಲ್ಲದಂತಾಗಿದೆ.