Connect with us

ನಾಳೆಯಿಂದ ಶಿವಮೊಗ್ಗ ಫುಲ್ ಲಾಕ್, ರಂಜಾನ್‍ಗೆ ತೊಂದರೆ ಇಲ್ಲ: ಈಶ್ವರಪ್ಪ

ನಾಳೆಯಿಂದ ಶಿವಮೊಗ್ಗ ಫುಲ್ ಲಾಕ್, ರಂಜಾನ್‍ಗೆ ತೊಂದರೆ ಇಲ್ಲ: ಈಶ್ವರಪ್ಪ

ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಳೆಯಿಂದ ನಾಲ್ಕು ದಿನ ಸಂಪೂರ್ಣ ಲಾಕ್‍ಡೌನ್ ಜಾರಿಗೆ ಬರಲಿದೆ. ಆದರೆ ಲಾಕ್‍ಡೌನ್ ಸಮಯದಲ್ಲಿ ರಂಜಾನ್ ಹಬ್ಬಕ್ಕೆ ತೊಂದರೆ ಮಾಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯಿಂದ ನಾಲ್ಕು ದಿಬಗಳ ಕಾಲ ಸಂಪೂರ್ಣ ಲಾಕ್‍ಡೌನ್ ಜಾರಿಯಲ್ಲಿರುತ್ತದೆ. ರಂಜಾನ್ ಹಬ್ಬಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಕೆಲವರು ರಂಜಾನ್ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಅದನ್ನು ನಂಬಬೇಡಿ ಎಂದು ಈಶ್ವರಪ್ಪ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

ರೈಲ್ವೆ, ಡಿಫೆನ್ಸ್ ಗೆ ಸಂಬಂಧಿಸಿದ ಕೈಗಾರಿಕಾ ಉತ್ಪನ್ನ ತಯಾರಿಸಲು ಅವಕಾಶ ಕಲ್ಪಿಸಲಾಗಿದೆ. ಲಾಕ್‍ಡೌನ್ ಸಮಯದಲ್ಲಿ ತರಕಾರಿ, ಹಾಲು, ದಿನಸಿ ಮಾರಾಟಕ್ಕೆ ಬೆಳಗ್ಗೆ 10ರ ವರೆಗೆ ಅವಕಾಶ ಇರುತ್ತದೆ. ಈ ಕಠಿಣ ಲಾಕ್‍ಡೌನ್ ವೇಳೆಯಲ್ಲಿ ರಂಜಾನ್, ಬಸವ ಜಯಂತಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಬೆಂಗಳೂರು, ತುಮಕೂರು ಮೊದಲಾದ ಕಡೆಗಳಿಂದ ಕೊರೊನಾ ಸೋಂಕಿತರು ಜಿಲ್ಲೆಯನ್ನು ಪ್ರವೇಶಿಸುತ್ತಿದ್ದು, ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದರು.

ಹಾಪ್ ಕಾಮ್ಸ್ ಮೂಲಕ, ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮ್ಯಾನೇಜ್ ಮಾಡುತ್ತಿದ್ದೇವೆ. ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ನರೇಗಾ ಅಡಿಯಲ್ಲಿ ಕೆಲಸ ಕೊಡಲಾಗಿದೆ. ನರೇಗಾ ನಿಲ್ಲಿಸಬೇಕೆ, ಬೇಡವೇ ಎಂಬುದರ ಬಗ್ಗೆ ಸಿಎಂ ಜೊತೆಗೆ ತೀರ್ಮಾನ ಕೈಗೊಳ್ಳಲಾಗುವುದು. ಜನ ಶಿವಮೊಗ್ಗ ನಗರದಲ್ಲಿ ಟ್ರಯಾಜ್ ಸೆಂಟರ್ ಜಾಸ್ತಿ ಮಾಡಲಾಗಿದ್ದು, ಕೊರೊನಾ ಸೋಂಕಿತರನ್ನು ಪ್ರತ್ಯೇಕಿಸಲಾಗುವುದು.

Advertisement
Advertisement