Connect with us

ಲಾಕ್‍ಡೌನ್ ಉಲ್ಲಂಘಿಸಿ ರೋಡಿಗಿಳಿದು ಕಿರಿಕ್- ಪೊಲೀಸರು ಬೈಕ್, ಕಾರು ತಡೆದಿದ್ದಕ್ಕೆ ಅವಾಜ್

ಲಾಕ್‍ಡೌನ್ ಉಲ್ಲಂಘಿಸಿ ರೋಡಿಗಿಳಿದು ಕಿರಿಕ್- ಪೊಲೀಸರು ಬೈಕ್, ಕಾರು ತಡೆದಿದ್ದಕ್ಕೆ ಅವಾಜ್

ಬೆಂಗಳೂರು: ಲಾಕ್‍ಡೌನ್ ಇದೆ ರಸ್ತೆಗೆ ಬರ್ಬೇಡಿ ಅಂದ್ರೆ ಜನ ಕೇಳಲ್ಲ.. ರೋಡಿಗೆ ಬರೋದು ಮಾತ್ರವಲ್ಲದೇ ಒಂದಷ್ಟು ಕಿರಿಕ್‍ಗಳನ್ನು ಮಾಡ್ತಾರೆ. ಅವಾಜ್ ಕೂಡ ಹಾಕ್ತಾರೆ. ಇಂತಹ ಕೆಲ ಕಿರಿಕ್ ಪಾರ್ಟಿಗಳ ಕಥೆ ಇಲ್ಲಿದೆ.

ಲಾಕ್‍ಡೌನ್ ರೂಲ್ಸ್ ಮಾಡಿರೋದೇ ಕೊರೊನಾದಿಂದ ಬಚಾವ್ ಆಗಲಿ ಅಂತಾ. ಆದರೆ ಕೆಲವರಿಗೆ ಈ ರೂಲ್ಸ್‍ನ್ನು ಉಲ್ಲಂಘಿಸಿದ್ರೇನೇ ಸಮಾಧಾನ ಅನಿಸತ್ತೆ. 10 ಗಂಟೆ ನಂತ್ರ ರೋಡಿಗೆ ಇಳಿಬೇಡಿ ಅಂದ್ರೆ ಇಳಿದ್ರೇ ಏನಾಗುತ್ತೆ ಅಂತಾನೇ ಕೇಳೋ ದುರಂಕಾರ ಕೆಲವರದ್ದು. ನೋಡಿ ಇದು ಯಾದಗಿರಿಯಲ್ಲಿ ನಡೆದ ಘಟನೆ. ಇಲ್ಲಿನ ಸುಭಾಷ್ ವೃತ್ತದಲ್ಲಿ ಈ ದಂಪತಿ ಮಾಸ್ಕ್ ಹಾಕದೇ ಸ್ಕೂಟಿಯಲ್ಲಿ ರೌಂಡ್ ಹೊಡೀತಿದ್ರು. ಪೊಲೀಸರು ಹಿಡಿದು ಕೇಳಿದ್ರೆ, ನಮ್ಮನ್ನಾ ಯಾಕೆ ಹಿಡಿತೀರಿ.. ದೇಶ ಲೂಟಿ ಮಾಡೋರನ್ನಾ ಹಿಡಿಯಿರಿ.. ಮಾಸ್ಕ್ ಹಾಕಿದ್ರೆ ಮೂಗೂ ನೋವು ಆಗುತ್ತೆ ಅಂತಾರೆ. ಪೊಲೀಸರು ಕೇಳಿದ್ರೆ ನಾನು ಗರ್ಭಿಣಿ, ಸ್ಕೂಲ್ ಟೀಚರ್, ಇನ್ನೊಂದು ಸಲ ಸ್ಟೂಡೆಂಟ್ ಅಂತೆಲ್ಲಾ ಹೈಡ್ರಾಮಾ ಕೂಡ ಮಾಡಿದ್ದಾಳೆ.

ಚಿತ್ರದುರ್ಗದ ಮಹಿಳೆಯೊಬ್ಬರು ಗಾಂಧಿಸರ್ಕಲ್ ಬಳಿ ಬೆಳಗ್ಗೆ ವಾಹನದಲ್ಲಿ ರಸ್ತೆಗಿಳಿದಿದ್ರು. ಕೇಳಿದ್ರೆ ಪೊಲೀಸರಿಗೇ ಕಾನೂನಿನ ಪಾಠ ಮಾಡಿದ್ದಾರೆ. 10 ಗಂಟೆಯತನಕ ಓಡೋಡೋಕೆ ಸಮಯ ಇಲ್ವಾ…? ನಿಮ್ಗೆಲ್ಲಾ ದಿನಕ್ಕೆ 20 ಸಲ ಐಡಿ ಕಾರ್ಡ್ ತೋರಿಸ್ಕೊಂಡು ನಿಲ್ಲಬೇಕಾ ಅಂತ ಸಿಡಿಮಿಡಿ ಆಗಿದ್ದಾರೆ. ಬೆಂಗಳೂರಿನ ಶ್ರೀನಗರದಲ್ಲಿ ಹೆಲ್ಮೆಟ್ ಹಾಕದ್ದನ್ನ ಪ್ರಶ್ನಿಸಿದಕ್ಕೆ ಬೈಕ್ ಸವಾರ ಪೊಲೀಸರ ಜೊತೆಗೆ ಕಿರಿಕ್ ಮಾಡ್ಕೊಂಡಿದ್ದಾನೆ. ‘ನಾನು ಆಸ್ಪತ್ರೆಗೆ ಹೋಗ್ತಿದ್ದೀನಿ… ಯಾಕೆ ಫೋಟೋ ತೆಗೆಯುತ್ತಿರಿ.. ಅರ್ಜೆಂಟ್ ಇದೆ… ಹೋಗ್ತಾ ಇದ್ದೀನಿ ಅಷ್ಟೇ ಅಂತಾ ಅಬ್ಬರಿಸಿದ್ದಾನೆ.

ಬೆಂಗಳೂರಿನ ಮೈಸೂರು ರಸ್ತೆಯ ನೈಸ್‍ರೋಡ್ ಜಂಕ್ಷನ್ ಬಳಿ ಕುಟುಂಬಸ್ಥರು ಪೊಲೀಸರ ಕೈಗೆ ತಗ್ಲಾಕೊಂಡಿದ್ದರು. ಆಟೋದಲ್ಲಿ ಬಂದವರನ್ನು ತಡೆದಾಗ ಮದುವೆ ಕಾರ್ಡ್ ಕೊಡೋಕೆ ಹೋಗ್ತಿದ್ದೀವಿ.. ಬಿಟ್ಬಿಡಿ ಸರ್ ಅಂತಾ ಗೋಗರೆದ್ರು. ಆದರೆ ಇದಕ್ಕೆ ಒಪ್ಪದ ಪೊಲೀಸರು ಯಾವುದೇ ಕಾರಣಕ್ಕೂ ಹೊರಗಡೆ ಬಿಡಲ್ಲ ಅಂತಾ ವಾಪಸ್ ಕಳಿಸಿದರು. ಮಂಗಳೂರಿನ ಅಡ್ಯಾರು ಬಳಿ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಭರ್ಜರಿ ಮದುವೆ ಪಾರ್ಟಿ ಮಾಡಿದ್ದಾರೆ. ತಡರಾತ್ರಿವರೆಗೂ ಕುಣಿದು ಕುಪ್ಪಳಿಸಿದ್ದಾರೆ.

ಬೆಳಗಾವಿಯಲ್ಲಿ ಲಾಕ್‍ಡೌನ್‍ನ್ನೇ ಖದೀಮರು ಬಂಡವಾಳ ಮಾಡಿಕೊಂಡಿದ್ದಾರೆ. ಕಾರ್ಖಾನೆಗಳು, ಹಣಕಾಸು ಸಂಸ್ಥೆಗಳು, ಕೋ-ಆಪರೇಟಿವ್ ಸೊಸೈಟಿ, ಕ್ಯಾಟರಿಂಗ್ ಹೆಸರಲ್ಲಿ ನಕಲಿ ಐಡಿ ಕಾರ್ಡ್ ತಯಾರಿಸ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿಯಲ್ಲಿ ರೂಲ್ಸ್ ಉಲ್ಲಂಘಿಸಿ ರಸ್ತೆಗಿಳಿದವರಿಗೆ ಪೊಲೀಸರು ಮೊಣಕೈ ಮತ್ತು ಬೆರಳ ಮೇಲೆ ನಡೆಸಿದ್ದಾರೆ.

Advertisement
Advertisement