Connect with us

ಬೇಕಾ ಬಿಟ್ಟಿ ತಿರುಗಾಟ- ಬೈಕ್ ಸೀಜ್ ಆಗಿದ್ದಕ್ಕೆ ಶಾಸಕರ ಹೆಸರು ಹೇಳಿ ಪೊಲೀಸರಿಗೇ ಅವಾಜ್

ಬೇಕಾ ಬಿಟ್ಟಿ ತಿರುಗಾಟ- ಬೈಕ್ ಸೀಜ್ ಆಗಿದ್ದಕ್ಕೆ ಶಾಸಕರ ಹೆಸರು ಹೇಳಿ ಪೊಲೀಸರಿಗೇ ಅವಾಜ್

ಯಾದಗಿರಿ: ಕೊರೊನಾ ತಾಂಡವಾಡುತ್ತಿದ್ದು, ಜನ ಆಕ್ಸಿಜನ್, ಬೆಡ್ ಇಲ್ಲದೆ ನರಳಿ ಪ್ರಾಣ ಬಿಡುತ್ತಿದ್ದಾರೆ. ಮನೆ ಬಿಟ್ಟು ಹೊರಗೆ ಬರಬೇಡಿ ಎಂದು ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪುಂಡನೊಬ್ಬ ಬೇಕಾಬಿಟ್ಟಿ ತಿರುಗಾಡಿದ್ದು, ಬೈಕ್ ಸೀಜ್ ಮಾಡಿದ್ದಕ್ಕೆ ಶಾಸಕರ ಹೆಸರು ಹೇಳಿ ಪಿಎಸ್‍ಐಗೆ ನಡು ರಸ್ತೆಯಲ್ಲೇ ಅವಾಜ್ ಹಾಕಿದ್ದಾನೆ.

ನಗರದ ಡಿಗ್ರಿ ಕಾಲೇಜು ವೃತ್ತದಲ್ಲಿ ಈ ಘಟನೆ ನಡೆದಿದ್ದು, ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡಿ ಸಂಚಾರ ಮಾಡುತ್ತಿದ್ದವರ ಬೈಕ್ ಗಳನ್ನು ಟ್ರಾಫಿಕ್ ಪಿಎಸ್‍ಐ ಪ್ರದೀಪ್ ಮತ್ತು ಸಿಬ್ಬಂದಿ ಸೀಜ್ ಮಾಡುತ್ತಿದ್ದರು. ಈ ವೇಳೆ ಕೆಂಡಾಮಂಡಲವಾದ ಓರ್ವ ಬೈಕ್ ಸವಾರ ಪೊಲೀಸರಿಗೆ ಮನಬಂದಂತೆ ನಿಂಧಿಸಿದ್ದಾನೆ.

ಇಷ್ಟಕ್ಕೆ ಸುಮ್ಮನಾಗದ ಬೈಕ್ ಸವಾರ, ಯಾದಗಿರಿ ಶಾಸಕರ ಹೆಸರು ಹೇಳಿ ಅವಾಜ್ ಹಾಕಿದ್ದಾನೆ. ಶಾಸಕರಿಗೆ ಹೇಳುತ್ತೇನೆ ಎಂದು ಬೇಕಾಬಿಟ್ಟಿ ಮಾತನಾಡಿದ್ದಾನೆ. ಬೈಕ್ ಸವಾರನ ವರ್ತನೆಗೆ ಬೇಸತ್ತ ಸಿಬ್ಬಂದಿ ಆತನ ಜೊತೆಗೆ ವಾಗ್ವಾದಕ್ಕಿಳಿದ್ದಾರೆ. ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂಧಿಸಿಕೊಂಡಿದ್ದಾರೆ.

Advertisement
Advertisement