Connect with us

Karnataka

ಕುತೂಹಲಕ್ಕೆ ರಸ್ತೆಗಿಳಿಯುತ್ತಿರುವ ವಾಹನ ಸವಾರರು

Published

on

ಮಡಿಕೇರಿ: ವಾರಾಂತ್ಯದ ಲಾಕ್‍ಡೌನ್ ಗೆ ಜಿಲ್ಲೆಯ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಕೆಲವರು ಕುತೂಹಲಕ್ಕೆ ನಗರ ಪ್ರದೇಶದ ರಸ್ತೆಗಳಿಗೆ ಇಳಿಯುತ್ತಿರುವ ಪ್ರಕರಣಗಳು ನಗರದಲ್ಲಿ ಪತ್ತೆಯಾಗಿವೆ.

ಪೊಲೀಸರು ಎಷ್ಟೇ ಮನವರಿಕೆ ಮಾಡಿದರೂ ಆಟೋ ಚಾಲಕರು, ಬೈಕ್ ಸವಾರರು ರಸ್ತೆಗೆ ಇಳಿಯುತ್ತಿದ್ದಾರೆ. ಹೀಗಾಗಿ ನಗರದ ತಿಮ್ಮಯ್ಯ ವೃತ್ತದಲ್ಲಿ ಬೈಕ್, ಆಟೋಗಳನ್ನು ಸೀಜ್ ಮಾಡಲು ಪೊಲೀಸರು ಮುಂದಾಗಿದ್ದಾರೆ. ಕೆಲ ವಾಹನ ಸವಾರರು ಅನಾರೋಗ್ಯದ ಸಮಸ್ಯೆ ಹೇಳಿಕೊಂಡು ಹೋದರೆ. ಕೆಲ ಅಟೋ ಚಾಲಕರು ಕಾರಣವೇ ಇಲ್ಲದೆ ಆಸ್ಪತ್ರೆಯಲ್ಲಿ ರೋಗಿಗಳು ಇದ್ದಾರೆ. ಅವರನ್ನು ಕರೆದುಕೊಂಡು ಬರಲು ಹೋಗುತ್ತಿರುವುದಾಗಿ ನೆಪ ಹೇಳುತ್ತಿದ್ದಾರೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂದು ಜಿಲ್ಲೆಯಲ್ಲಿ 548 ಪಾಸಿಟಿವ್ ಪ್ರಕರಣಗಳು ಬಂದಿದೆ. ಆದರೂ ಕೆಲವರು ಗಂಭೀರವಾಗಿ ಪರಿಗಣಿಸದೆ. ಈ ರೀತಿ ಓಡಾಡುತ್ತಿರುವುದು ಎಷ್ಟು ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Click to comment

Leave a Reply

Your email address will not be published. Required fields are marked *