Connect with us

Cinema

ಕೊರೊನಾ ಲಾಕ್‍ಡೌನ್- ಪತ್ನಿಗಾಗಿ ಕಾರ್ ರಸ್ತೆಗಿಳಿಸಿದ ಅಕ್ಷಯ್ ಕುಮಾರ್

Published

on

ನವದೆಹಲಿ: ಕೊರೊನಾ ವಿರುದ್ಧ ಹೋರಾಡಲು ಬರೋಬ್ಬರಿ 25 ಕೋಟಿ ರೂ.ಗಳ ಸಹಾಯ ಧನ ನೀಡುವ ಮೂಲಕ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮೆಚ್ಚುಗೆಗೆ ಪಾತ್ರರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಸಹ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದೀಗ ಅವರು ಪತ್ನಿಗಾಗಿ ಕಾರನ್ನು ರಸ್ತೆಗಿಳಿಸಿದ್ದಾರೆ.

ಅಕ್ಷಯ್ ಕುಮಾರ್ ಯಾವುದೇ ತುರ್ತು ಸಂದರ್ಭದಲ್ಲಿ ಸಹಾಯ ಮಾಡಲು ಎತ್ತಿದ ಕೈ. ಅದರಲ್ಲೂ ಯೋಧರ ವಿಚಾರದಲ್ಲಿ ಸಹಾಯ ಮಾಡಲು ಮುಂಚೂಣಿಯಲ್ಲಿರುತ್ತಾರೆ ಎಂಬುದು ತಿಳಿದೇ ಇದೆ. ಅದೇ ರೀತಿ ಈ ಬಾರಿ ಆರೋಗ್ಯ ತುರ್ತು ಪರಿಸ್ಥಿತಿ ಉಂಟಾಗಿದ್ದು, ಈ ವೇಳೆಯೂ ಅತಿ ದೊಡ್ಡ ಮೊತ್ತವನ್ನು ನೀಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಅವರ ಈ ಕಾಳಜಿ ಹಾಗೂ ಸಮಾಜದ ಕುರಿತು ಅವರಿಗಿರುವ ದೃಷ್ಟಿಕೋನಕ್ಕೆ ಇಡೀ ಭಾರತೀಯರೇ ಮನಸೋತಿದ್ದಾರೆ.

ಪ್ರಧಾನಿ ಟ್ವೀಟ್‍ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿ, ಈ ಸಮಯದಲ್ಲಿ ಜನರ ಪ್ರಾಣವೇ ಎಲ್ಲಕ್ಕಿಂತ ಮುಖ್ಯ. ಅದಕ್ಕಾಗಿ ಏನೆಲ್ಲ ಸಾಧ್ಯವೋ ಅದೆಲ್ಲವನ್ನು ನಾವು ಮಾಡಬೇಕು. ನನ್ನ ಉಳಿತಾಯದ ಹಣದಲ್ಲಿ 25 ಕೋಟಿ ರೂ. ಗಳನ್ನು ನರೇಂದ್ರ ಮೋದಿಯವರ ಪಿಎಂ-ಕೇರ್ಸ್ ಫಂಡ್‍ಗೆ ನೀಡುವುದಾಗಿ ಪ್ರಮಾಣಿಸುತ್ತಿದ್ದೇನೆ. ನಾವೆಲ್ಲ ಒಂದಾಗಿ ಜೀವ ಉಳಿಸೋಣ. ಜೀವ ಇದ್ದರೆ ಜಗತ್ತು’ ಎಂದು ಬರೆದುಕೊಂಡಿದ್ದರು.

ಇದೀಗ ಅವರು ತಮ್ಮ ಪತ್ನಿಯನ್ನು ಕಾರ್ ನಲ್ಲಿ ಕರೆದುಕೊಂಡು ಹೋಗಿದ್ದು, ಈ ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಯಾಕೆಂದರೆ ಅವರ ಪತ್ನಿ ಟ್ವಿಂಕಲ್ ಖನ್ನಾ ಅವರಿಗೆ ಕಾಲಿನ ಮೂಳೆಗೆ ಪೆಟ್ಟಾಗಿದ್ದು, ತುಂಬಾ ನೋವು ಅನುಭವಿಸುತ್ತಿದ್ದರು. ಹೀಗಾಗಿ ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಕುರಿತು ಹೆಚ್ಚು ಜನ ಆತಂಕಗೊಂಡಿದ್ದು, ಅವರ ಅಭಿಮಾನಿಗಳು ಹಾಗೂ ಸ್ನೇಹಿತರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಟ್ವಿಂಕಲ್ ಖನ್ನಾ ಅವರು ಈ ವಿಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ನಾವು ಆಸ್ಪತ್ರೆಯಿಂದ ಹಿಂದಿರುಗುವಾಗ ರಸ್ತೆ ಹೀಗಿದ್ದವು. ದಯವಿಟ್ಟು ಗಾಬರಿಯಾಗಬೇಡಿ ನಾನು ಬಕೆಟ್ ಒದಿಯುವ ಕುರಿತು ಮಾತನಾಡುತ್ತಿಲ್ಲ. ಏಕೆಂದರೆ ಈ ಸಂದರ್ಭದಲ್ಲಿ ಏನನ್ನೂ ಒದಿಯಲು ನನ್ನಿಂದ ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ಪೋಸ್ಟ್‍ನಲ್ಲಿ ಕರಣ್ ಕಪಾಡಿಯಾ ಅವರ ಸಲಹೆ ಮೇರೆಗೆ ನನ್ನ ಬಳಿ ಟಿಕ್-ಟಾಕ್-ಟೋ ಆಡಿದ್ದಾರೆ. ಕಾಲು ಮುರಿಯಲು ಎಂದಿಗೂ ಉತ್ತಮ ಸಮಯವಲ್ಲ. ಏಕೆಂದರೆ ನಾನಾದರೂ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.