Connect with us

Davanagere

ಕೊರೊನಾ ಎಫೆಕ್ಟ್- ದಾವಣಗೆರೆಯಲ್ಲಿ ಮಾಸ್ಕ್ ದರ ದುಪ್ಪಟ್ಟು

Published

on

ದಾವಣಗೆರೆ: ವಿಶ್ವದೆಲ್ಲೆಡೆ ಮಹಾಮಾರಿ ಕೊರೊನಾ ಆವರಿಸುತ್ತಿದ್ದು, ದೇಶದಲ್ಲಿ ಈ ವರೆಗೆ 61 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿಯೂ ನಾಲ್ಕು ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ ಜನತೆ ಮುಂಜಾಗೃತಾ ಕ್ರಮಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದು, ಮಾಸ್ಕ್ ಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಮಾಸ್ಕ್ ಗಳ ಬೆಲೆ ದುಪ್ಪಟ್ಟಾಗಿದೆ.

ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಹೊರಗೆ ಹೋಗಬೇಕೆಂದರೂ ಜನ ಭಯಪಡುವಂತಾಗಿದೆ. ಎಲ್ಲಾದರೂ ಹೋಗಬೇಕು ಎಂದರೆ ಮಾಸ್ಕ್ ಹಾಕಿಕೊಂಡು ಹೋಗುವಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಔಷಧಿ ಅಂಗಡಿಯವರು, ಮಾಸ್ಕ್ ಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಐದು ರೂಪಾಯಿ ಇರುವ ಮಾಸ್ಕ್ ಗಳನ್ನು ದುಪ್ಪಟ್ಟು ಬೆಲೆಗೆ ಮಾರುತ್ತಿದ್ದಾರೆ. ಈ ಕುರಿತು ಸರ್ಕಾರ ಎಷ್ಟೇ ಎಚ್ಚರಿಕೆ ನೀಡಿದರೂ ಔಷಧಿ ಅಂಗಡಿಯವರು ಮಾತ್ರ ಮಾಸ್ಕ್ ದರ ಹೆಚ್ಚು ಮಾಡುವುದನ್ನು ನಿಲ್ಲಿಸಿಲ್ಲ.

60 ರೂಪಾಯಿ ಇರುವ ಮಾಸ್ಕ್ ಗಳನ್ನು ನೂರು, ಇನ್ನೂರು, ಮುನ್ನೂರು ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಕೆಲ ಮೆಡಿಕಲ್ ಸ್ಟೋರ್ ಗಳಲ್ಲಿ ನೋ ಸ್ಟಾಕ್ ಎಂದು ಹೇಳುತ್ತಿದ್ದು, ಜನರಿಕ್ ಮಳಿಗೆಗಳಲ್ಲಿ ನೂಕು ನುಗ್ಗಲು ಸಂಭವಿಸುತ್ತಿದೆ. ಬೇರೆ ದಾರಿ ಇಲ್ಲದೆ ಜನರು ದುಪ್ಪಟ್ಟು ಹಣ ನೀಡಿ ಕೊಂಡುಕೊಳ್ಳುತ್ತಾರೆ.

ಡೀಲರ್ಸ್ ಸಹ ಮೆಡಿಕಲ್ ಸ್ಟೋರ್ ಗಳಿಗೆ ದುಪ್ಪಟ್ಟು ಬೆಲೆಗೆ ಮಾಸ್ಕ್ ನೀಡುತ್ತಿದ್ದಾರೆ. ಇದರಿಂದಾಗಿ ಮೆಡಿಕಲ್ ಸ್ಟೋರಿನವರು ಕೂಡ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಸ್ವತಃ ಆರೋಗ್ಯ ಸಚಿವರು ಎಚ್ಚರಿಕೆ ನೀಡಿದ್ದು, ಮಾಸ್ಕ್ ಗಳನ್ನು ದುಪ್ಪಟ್ಟು ದರದಕ್ಕೆ ಮಾರಾಟ ಮಾಡದಂತೆ ತಿಳಿಸಿದ್ದಾರೆ. ಆದರೆ ಮೆಡಿಕಲ್ ಸ್ಟೋರ್ ಗಳು ಹಾಗೂ ಡೀಲರ್ಸ್ ಮಾತ್ರ ಇದಾವುದನ್ನು ಕೇಳದೆ ಮನಬಂದಂತೆ ಮಾಸ್ಕ್ ಮಾರಾಟ ಮಾಡುತ್ತಿದ್ದಾರೆ.