Connect with us

ಕೊರೊನಾ ತೊಲಗಿಸುವಂತೆ ಚೌಡವ್ವನ ಬೇಡಿದ 5 ವರ್ಷದ ಕಂದಮ್ಮ

ಕೊರೊನಾ ತೊಲಗಿಸುವಂತೆ ಚೌಡವ್ವನ ಬೇಡಿದ 5 ವರ್ಷದ ಕಂದಮ್ಮ

ದಾವಣಗೆರೆ: ಪುಟ್ಟ ಬಾಲಕನೊಬ್ಬ ಕೊರೋನಾ ಹೋಗಲಾಡಿಸುವಂತೆ ದೇವತೆಯಲ್ಲಿ ಪ್ರಾರ್ಥನೆ ಮಾಡಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಹೊರ ವಲಯದಲ್ಲಿರುವ ಚೌಡಮ್ಮ ದೇವಿಯ ದೇವಸ್ಥಾನದಲ್ಲಿ ಐದು ವರ್ಷದ ಬಾಲಕ ಪುನೀತ್ ಕೊರೊನಾ ಓಡಿಸುವಂತೆ ದೇವರಯಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾನೆ. ಯವ್ವಾ ತಾಯಿ ಕೊರೊನಾ ಹೋಗ್ಲವ್ವ ತಾಯಿ, ಕೊರೊನಾ ಹೋಗಲಿ ಚೌಡವ್ವಾ ಎಂದು ಪ್ರಾರ್ಥನೆ ಸಲ್ಲಿಸಿದ್ದಾನೆ. ಈ ವೀಡಿಯೋವನ್ನು ಅಲ್ಲಿರುವ ಸ್ಥಳೀಯರು ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಹಲವರು ಹಲವು ರೀತಿ ಪೂಜೆ ಮಾಡುತ್ತಿದ್ದು, ದೇವರ ಮೊರೆ ಹೋಗುತ್ತಿದ್ದಾರೆ. ಇದೀಗ 5 ವರ್ಷದ ಬಾಲಕ ದೇವರ ಮೊರೆ ಹೋಗಿದ್ದು, ಈ ಮೂಲಕ ಗಮನ ಸೆಳೆದಿದ್ದಾನೆ.

Advertisement
Advertisement