Connect with us

Bengaluru City

ಐತಿಹಾಸಿಕ ಕರಗ ರದ್ದು, ದೇವಸ್ಥಾನದಲ್ಲೇ ಸರಳವಾಗಿ ಆಚರಿಸಲು ಡಿಸಿ ಶಿಫಾರಸು

Published

on

ಬೆಂಗಳೂರು: ಈ ವರ್ಷವೂ ಕರಗ ಮಹೋತ್ಸಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದ್ದು, ಹಿಂದಿನ ವರ್ಷದಂತೆ ಈ ವರ್ಷ ಸಹ ಕರಗ ಮಹೋತ್ಸವನ್ನು ದೇವಸ್ಥಾನಕ್ಕೆ ಮಾತ್ರ ಸಿಮೀತಗೊಳಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಜಿಲ್ಲಾಧಿಕಾರಿ ಮಂಜುನಾಥ್ ಶಿಫಾರಸು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕರಗ ಮಹೋತ್ಸವವನ್ನು ರದ್ದುಪಡಿಸಿ, ದೇವಾಲಯದ ಪ್ರಾಂಗಣದಲ್ಲೇ ಅರ್ಚಕರು, ಸಿಬ್ಬಂದಿ, ಸಮುದಾಯದ ಹಿರಿಯರು ಮಾತ್ರ ಭಾಗಿಯಾಗಲು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟಿದ್ದಾರೆ. ದೇವಸ್ಥಾನದ ಒಳಪ್ರಾಂಗಣದಲ್ಲಿ ಮಾತ್ರ ವಿಧಿ ವಿಧಾನದಂತೆ ಕರಗ ಆಚರಿಸುವಂತೆ ತಿಳಿಸಿದ್ದಾರೆ.

ಇಂದು ಬಿಬಿಎಂಪಿ ಮುಖ್ಯ ಆಯುಕ್ತ, ಜಿಲ್ಲಾಧಿಕಾರಿ ಮಂಜುನಾಥ್, ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಇಂದಿನ ಸಭೆಯಲ್ಲಿ ಕರಗ ಉತ್ಸವ ಸಮಿತಿಯೂ ರಚನೆಯಾಗಿದೆ. ಈ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

ಕರಗಕ್ಕೆ ಬ್ರೇಕ್ ಹಾಕಲು ಕಾರಣ
ಕರಗ ನಡೆಯುವ ವಾರ್ಡ್ ನಲ್ಲೇ 105 ಪಾಸಿಟಿವ್ ದಾಖಲೆ ಕೇಸ್ ಗಳಿವೆ. ಉತ್ಸವ, ಮೆರವಣಿಗೆಗೆ ಅವಕಾಶ ನೀಡುವ ಸ್ಥಿತಿಯೇ ಇಲ್ಲ. ಮೆರವಣಿಗೆ ವೇಳೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಬಗ್ಗೆ ಜನ ನಿಯಮ ಪಾಲಿಸುವುದಿಲ್ಲ. ಕರಗ ನಡೆಯುವ ಧರ್ಮರಾಯ ಸ್ವಾಮಿ ವಾರ್ಡ್ ಕೊರೊನಾ ಹಾಟ್ ಸ್ಪಾಟ್ ಆಗಿದೆ. ಕರಗದಿಂದ ಕೊರೊನಾ ಹೆಚ್ಚಾದರೆ ಜವಾಬ್ದಾರಿ ಹೊರಲು ಯಾರೂ ಸಿದ್ಧರಿಲ್ಲ ಹೀಗಗಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಏ.19 ರಿಂದ ಏ.27 ರವರೆಗೆ ಬೆಂಗಳೂರು ಕರಗ ನಡೆಯಲಿದ್ದು, ಬಹುತೇಕ ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತವಾಗಲಿದೆ. ದೇವಾಲಯದ ಪ್ರಾಂಗಣದಲ್ಲೇ ನಡೆಸುವ ಸಾಧ್ಯತೆ ಹೆಚ್ಚಿದೆ. ಕರಗ ಆಚರಣೆ ಮೇಲೆ ಪೊಲೀಸರು, ಸಮಿತಿ ಹಾಗೂ ಮಾರ್ಷಲ್ ಕಣ್ಗಾವಲು ಇಡಲಿದ್ದಾರೆ. ಕರಗದಲ್ಲಿ ಭಾಗವಹಿಸುವ ಜನರ ಸಂಖ್ಯೆಯನ್ನೂ ಸಮಿತಿ, ಅಧಿಕಾರಿಗಳೇ ನಿರ್ಧರಿಸುತ್ತಾರೆ.

ಈ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಉತ್ಸವ ಸಮಿತಿ ರಚನೆ ಆಗಿದೆ, ಉತ್ಸವ ಸಮಿತಿ ತನ್ನ ಶಿಫಾರಸುಗಳನ್ನು ಸಭೆ ಮುಂದೆ ಮಂಡಿಸಿದೆ. ಈಗಿನ ಸಂದರ್ಭದಲ್ಲಿ ಕರಗ ಕಷ್ಟ, ಬೆಂಗಳೂರು ಕರಗ ಆಚರಣೆ ಸಂಬಂಧ ಇಂದು ಹಲವು ಸಭೆ ನಡೆಯಲಿದೆ. ಏ.17 ರೊಳಗೆ ಸಭೆ ನಡೆಸಿ ಕರಗ ಆಚರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. 5 ರಿಂದ 7 ಜನರು ಸೇರಿ ಕರಗ ಹೇಗೆ ನಡೆಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿ ನೀಡಿರುವ ವರದಿ ಬಗ್ಗೆ ಸಹ ಚರ್ಚೆ ಆಗಿದೆ. ಉತ್ಸವ ಸಮಿತಿ ಅಭಿಪ್ರಾಯವೂ ಸೇರಿಸಿ 2 ದಿನಗಳೊಳಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕರಗ ಆಚರಣೆಗೆ ಶಾಸಕರು ತಮ್ಮದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೆರವಣಿಗೆಗೆ ಅವಕಾಶ ಕೊಡಲು ಆಗಲ್ಲ, ದೇವಾಲಯ ಮುಂದೆ ಸಣ್ಣ ಪ್ರಮಾಣದ ಮೆರವಣಿಗೆ ಮಾಡಲು ಅವಕಾಶ ನೀಡುವಂತೆ ಕೇಳುತ್ತಿದ್ದಾರೆ. ಸಂಪಿಗೆ ಕೆರೆ, ಪಾಲಿಕೆ ಆವರಣದಲ್ಲಿ ಕರಗ ಓಡಾಡಲು ಅವಕಾಶ ಕೊಡಿ ಎಂದು ಅಭಿಪ್ರಾಯ ಬಂದಿದೆ. ಆದರೆ ಕಳೆದ ವರ್ಷಕ್ಕಿಂತ ಈ ಬಾರಿ ಧರ್ಮರಾಯ ಸ್ವಾಮಿ ವಾರ್ಡ್‍ನಲ್ಲಿ ಕೇಸ್ ಗಳ ಸಂಖ್ಯೆ ಹೆಚ್ಚಿದೆ. ಈ ಹಂತದಲ್ಲಿ ಅದ್ಧೂರಿ ಆಚರಣೆಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬೆಡ್ ಕೊರತೆ ಇಲ್ಲ
ರಂಜಾನ್ ಸಂಬಂಧ ಸರ್ಕಾರ ಮಾರ್ಗಸೂಚಿ ನೀಡಿದೆ, ನಿಯಮ ಪಾಲಿಸಲಾಗುತ್ತಿದೆಯೇ ಎಂಬ ಬಗ್ಗೆ ಪೊಲೀಸರು ನಿಗಾ ಇಡುತ್ತಾರೆ. ಅಗತ್ಯ ಬಿದ್ದರೆ ಪಾಲಿಕೆ ಜತೆಗೆ ಇರುತ್ತದೆ. ಟೆಸ್ಟ್ ಆದ ಕೂಡಲೇ ನೆಗೆಟಿವ್, ಪಾಸಿಟಿವ್ ಎಂಬ ಎಸ್‍ಎಂಎಸ್ ಬರುವ ಬಗ್ಗೆ ವ್ಯವಸ್ಥೆ ಆಗುತ್ತಿದೆ. ಸಾರ್ವಜನಿಕ ಲ್ಯಾಬ್ ಗಳಲ್ಲಿ ರಿಸಲ್ಟ್ ತಡವಾಗುತ್ತಿತ್ತು. ಈಗ 24 ಗಂಡೆಯೊಳಗೆ ರಿಸಲ್ಟ್ ಬರುತ್ತೆ ಎಂಬ ಮಾಹಿತಿ ಸಿಕ್ಕಿದೆ. ಸಾರ್ವಜನಿಕರು ಸಾಧ್ಯವಾದಷ್ಟು ಮನೆಯಲ್ಲೇ ಇರಬೇಕಿದೆ. ಸರ್ಕಾರದ ಮಾರ್ಗಸೂಚ ಪಾಲನೆ ಮಾಡಿ ಎಂದು ಮನವಿ ಮಾಡಿದರು.

ಕೆಲ ಪಬ್, ಬಾರ್ ಗಳಲ್ಲಿ ಶೇ.50ರಷ್ಟು ಸೀಮಿತಕ್ಕೆ ಅವಕಾಶ ಕೊಟ್ಟಿದೆ. ಟ್ರೇಡ್ ಬಿಸಿನೆಸ್ ಗಳಲ್ಲಿ ಯಾವುದೇ ನಿರ್ಬಂಧ ಇಲ್ಲ. ರಾಷ್ಟ್ರೀಯ ವ್ಯವಸ್ಥೆ ಪ್ರಕಾರ ಜೀವ – ಜೀವನ ಎಲ್ಲವೂ ನಡೆಯಬೇಕಿದೆ. 6 ಸಾವಿರ ಬೆಡ್ ಗಳಲ್ಲಿ 2,500 ಬೆಡ್ ಗಳು ರಿಸರ್ವ್ ಆಗಿದೆ. ಕೆಲ ಆಸ್ಪತ್ರೆಗಳಲ್ಲಿ ಇನ್ನು ಬೆಡ್ ಕೊಡುವ ಬಗ್ಗೆ ಹೇಳುತ್ತಿದ್ದಾರೆ ಎಂದರು.

ಸಮಯಕ್ಕೆ ಸರಿಯಾಗಿ ಟೆಸ್ಟ್ ಮಾಡಿಸಿಕೊಳ್ಳಿ, ಹಲವು ಕೇಸ್ ಗಳು ಬರುತ್ತಿವೆ. ಕಡೇ ಕ್ಷಣದಲ್ಲಿ ಬಂದು ಬೆಡ್ ಕೇಳುತ್ತಾರೆ. ಇದರಿಂದ ಬೆಡ್ ಸಿಗದೇ ಒದ್ದಾಟ ಆಗುತ್ತಿದೆ. ನಮ್ಮಲ್ಲಿ ಬೆಡ್ ಗಳು ಇದೆ, ಯಾರಿಗೆ ಬೇಕಾದರೂ ನಾನು ಬೆಡ್ ಕೊಡಿಸುತ್ತೇನೆ ಎಂದರು.

ಐಸಿಯು ಬೆಡ್ ಗಳನ್ನು ಸಹ ಹೆಚ್ಚಳ ಮಾಡಲಾಗಿದೆ. ಶೇ.6ರಷ್ಟು ಬೆಡ್‍ಗಳ ಸಂಖ್ಯೆ ಹೆಚ್ಚಳ ಆಗಿದೆ. 1 ಸಾವಿರ ಐಸಿಯು, ವೆಂಟಿಲೆಟರ್ ಬೆಡ್ ಗಳು ಬರಲಿದೆ. ಕೋವಿಡ್ ಕೇರ್ ಗಳಲ್ಲೂ ಐಸಿಯು, ವೆಂಟಿಲೇಟರ್ ಬೆಡ್ ಗಳ ಸಿದ್ಧತೆ ಮಾಡಲಾಗುತ್ತದೆ. ಜನರು ಭಯಭೀತರಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅಗತ್ಯ ಇದ್ದರೆ ಮಾತ್ರ ಬೆಡ್ ಬಳಸಿ ಎಂದು ಮನವಿ ಮಾಡಿದರು.

4 ಕೋವಿಡ್ ಶವಗಾರ ಮೀಸಲಿಡಲಾಗಿದೆ, ಕಾರಣಾಂತರಗಳಿಂದ ಸಮಸ್ಯೆ ಎದುರಾಗಿದೆ. ಸಮಸ್ಯೆ ಬಗೆಹರಿಸಲಾಗುವುದು. ಸಂಬಳ, ಸುರಕ್ಷತೆ ವಿಷಯ ಎಲ್ಲವೂ ಚರ್ಚೆ ಆಗಿದೆ. ಕೂಡಲೇ ಎಲ್ಲ ಸರಿಪಡಿಸಲಾಗುತ್ತದೆ. ಅಡ್ವಾನ್ಸ್ ಲೈಪ್ ಸರ್ಪೋರ್ಟ್(ಎಎಲ್‍ಎಸ್) ಅಂಬುಲೆನ್ಸ್ ಲಭ್ಯ ಇದೆ. ನಗರದ 8 ವಲಯಗಳಿಗೆ ತಲಾ ಒಂದರಂತೆ ಅಂಬುಲೆನ್ಸ್ ಮೀಸಲಿರಿಸಲಾಗಿದೆ. 8 ವಲಯಗಳ ನಂಬರ್ ಸಹ ಎಲ್ಲರಿಗೂ ಪ್ರಚಾರ ಮಾಡಲಾಗುತ್ತದೆ. ಕಳೆದ ಬಾರಿ 6-10 ಸಾವಿರ ಬೆಡ್ ಗಳ ವ್ಯವಸ್ಥೆ ಮಾಡಲಾಗಿತ್ತು. 50-100 ಬೆಡ್ ಇರುವ ವಲಯಗಳ ಜಾಗದಲ್ಲಿ ಕೋವಿಡ್ ಕೇರ್ ಸೆಂಟರ್ ಓಪನ್ ಮಾಡಲಾಗುವುದು. ಮುಂದಿನ 3 ದಿನಗಳಲ್ಲಿ 10 ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು. 1,500 ಬೆಡ್ ಗಳ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಅಂಬುಲೆನ್ಸ್ ಗಳನ್ನು ಬಾಡಿಗೆ ಪಡೆಯಲು ಸಹ ಪ್ಲ್ಯಾನ್ ಮಾಡಲಾಗಿದೆ ಎಂದು ವಿವರಿಸಿದರು.

Click to comment

Leave a Reply

Your email address will not be published. Required fields are marked *