Connect with us

ರಾಜ್ಯ ಸರ್ಕಾರಗಳಿಗೆ ವ್ಯಾಕ್ಸಿನ್ ಸಿಗ್ತಿಲ್ಲ- 18 ವರ್ಷ ಮೇಲ್ಪಟ್ಟವರಿಗೆ ನಾಳೆಯಿಂದ ವ್ಯಾಕ್ಸಿನ್ ನೀಡಲು ತಯಾರಾದ ಖಾಸಗಿ ಆಸ್ಪತ್ರೆಗಳು

ರಾಜ್ಯ ಸರ್ಕಾರಗಳಿಗೆ ವ್ಯಾಕ್ಸಿನ್ ಸಿಗ್ತಿಲ್ಲ- 18 ವರ್ಷ ಮೇಲ್ಪಟ್ಟವರಿಗೆ ನಾಳೆಯಿಂದ ವ್ಯಾಕ್ಸಿನ್ ನೀಡಲು ತಯಾರಾದ ಖಾಸಗಿ ಆಸ್ಪತ್ರೆಗಳು

– ಅಪೋಲೋ, ಮ್ಯಾಕ್ಸ್ ಆಸ್ಪತ್ರೆಗಳಲ್ಲಿ ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ

ನವದೆಹಲಿ: ದಾಸ್ತಾನು ಇಲ್ಲದ ಕಾರಣ ಬಹುತೇಕ ರಾಜ್ಯ ಸರ್ಕಾರಗಳು ನಾಳೆಯಿಂದ ಲಸಿಕೆ ನೀಡಲು ನಿರಾಕರಿಸಿವೆ. ಇದೆಲ್ಲದ ಮಧ್ಯೆ ಖಾಸಗಿ ಆಸ್ಪತ್ರೆಗಳಾದ ಅಪೋಲೋ ಹಾಗೂ ಮ್ಯಾಕ್ಸ್ ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ತಯಾರಿ ನಡೆಸಿವೆ.

ಹಲವು ರಾಜ್ಯ ಸರ್ಕಾರಗಳು ಪೂರ್ವ ನಿಗದಿಯಂತೆ ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ನಿರಾಕರಿಸಿದ್ದು, ದಾಸ್ತಾನು ಇಲ್ಲ ಎಂದು ಹೇಳಿವೆ. ಇದೆಲ್ಲದರ ನಡುವೆ ಖಾಸಗಿ ಆಸ್ಪತ್ರೆಗಳು ವ್ಯಾಕ್ಸಿನ್ ನೀಡಲು ಮುಂದಾಗಿರುವುದು ಅಚ್ಚರಿ ಮೂಡಿಸಿದೆ.

ಸೀಮಿತ ಪ್ರಮಾಣದಲ್ಲಿ ಲಸಿಕೆ ಕಾರ್ಯಕ್ರಮ ಆರಂಭವಾಗಲಿದ್ದು, ಮುಂದಿನ ವಾರಗಳಲ್ಲಿ ವೇಗ ನೀಡಲಾಗುವುದು. ಕಾರ್ಪೋರೇಟ್ಸ್ ಗಾಗಿ ಅಪೋಲೋ ಆಸ್ಪತ್ರೆಯಿಂದ ವಿಶೇಷ ಕ್ಯಾಂಪ್‍ಗಳನ್ನು ಸಹ ಆಯೋಜಿಸಲಾಗುತ್ತಿದೆ. ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗುವುದು ಎಂದು ಅಪೋಲೋ ಆಸ್ಪತ್ರೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

18 ವರ್ಷ ಮೇಲ್ಪಟ್ಟವರಿಗೆ ನಿಗದಿಯಂತೆ ನಾಳೆಯಿಂದಲೇ ಕೊರೊನಾ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮ್ಯಾಕ್ಸ್ ಆಸ್ಪತ್ರೆ ತಿಳಿಸಿದೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದೆ.

ಜನವರಿಯಲ್ಲಿ ಮೊದಲ ಹಂತ ಲಸಿಕೆ ಅಭಿಯಾನ ಆರಂಭವಾಗಿದ್ದು, ಮೊದಲು ಕೊರೊನಾ ವಾರಿಯರ್ಸ್ ಹಾಗೂ ಫ್ರಂಟ್ ಲೈನ್ ವರ್ಕರ್ಸ್ ಗೆ ನೀಡಲಾಗಿತ್ತು. ಬಳಿಕ ಹಿರಿಯ ನಾಗರಿಕರಿಗೆ ಅವಕಾಶ ನೀಡಲಾಯಿತು. ಇದೀಗ 18 ವರ್ಷ ಮೇಲ್ಪಟ್ಟವರಿಗೆ ಅವಕಾಶ ನೀಡಲಾಗಿದೆ.

ರಾಜ್ಯ ಸರ್ಕಾರಗಳು ಹಾಗೂ ಖಾಸಗಿ ಕಂಪನಿಗಳಿಗೆ ನೇರವಾಗಿ ಉತ್ಪಾದಕರಿಂದ ಖರೀದಿಸಲು ಅವಕಾಶ ನೀಡಲಾಗಿದ್ದು, ಕಂಪನಿಗಳು ಒಟ್ಟು ಉತ್ಪಾದನೆಯ ಶೇ.50ರಷ್ಟು ಪ್ರಮಾಣದಲ್ಲಿ ರಾಜ್ಯ ಸರ್ಕಾರಗಳು ಹಾಗೂ ಖಾಸಗಿ ಕಂಪನಿಗಳಿಗೆ ನೀಡುತ್ತಿವೆ. ಉಳಿದ ಶೇ.50ರಷ್ಟು ಲಸಿಕೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಿವೆ.

ಹಲವು ರಾಜ್ಯಗಳು ಬೆಲೆ ವ್ಯತ್ಯಾಸದ ಕುರಿತು ಅಸಮಾಧಾನ ವ್ಯಕ್ತಪಡಿಸಿವೆ. ಅಲ್ಲದೆ ವ್ಯಾಕ್ಸಿನ್ ಸ್ಟಾಕ್ ನಂತರದಲ್ಲಿ ಬರುತ್ತದೆ ಎಂದು ಉತ್ಪಾದಕರು ಹೇಳುತ್ತಿರುವುದಾಗಿ ದೂರಿವೆ. ನಾವು ಮೊದಲು ಕೇಂದ್ರ ಸರ್ಕಾರಕ್ಕೆ ನೀಡುವುದಕ್ಕೆ ಆದ್ಯತೆ ಕೊಡುತ್ತಿದ್ದೇವೆ. ಅವರು 45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡುತ್ತಿದ್ದಾರೆ ಎಂದು ಕಂಪನಿಗಳು ಹೇಳುತ್ತಿವೆ. ಹೀಗಾಗಿ ಯುವಕರು ವ್ಯಾಕ್ಸಿನ್ ಪಡೆಯಲು ಇನ್ನೂ ಸ್ವಲ್ಪ ದಿನಗಳ ಕಾಲ ಕಾಯಬೇಕಿದೆ.

ಖಾಸಗಿ ಆಸ್ಪತ್ರೆಗಳು ಪ್ರತಿ ಡೋಸ್‍ಗೆ 1,200ರೂ ನೀಡಿ ಖರೀದಿಸಬೇಕಿದೆ. ಸೇರಂ ಇನ್‍ಸ್ಟಿಟಿಟ್ಯೂಟ್ ರಾಜ್ಯ ಸರ್ಕಾರಗಳಿಗೆ 400 ರೂ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ 600 ರೂ.ಗಳನ್ನು ನಿಗದಿಪಡಿಸಿದೆ. ಭಾರತ್ ಬಯೋಟೆಕ್ ಪ್ರತಿ ಡೋಸ್‍ಗೆ ರಾಜ್ಯ ಸರ್ಕಾರಗಳಿಗೆ 400 ರೂ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ 1,200 ರೂ. ನಿಗದಿಪಡಿಸಿದೆ.

Advertisement
Advertisement