Connect with us

Bengaluru City

ಬೆಂಗಳೂರು 1,848, ಬಳ್ಳಾರಿ 631, 3 ಜಿಲ್ಲೆಯಲ್ಲಿ ಕೊರೊನಾ ದ್ವಿಶತಕ

Published

on

-11 ಜಿಲ್ಲೆಯಲ್ಲಿ ಕೊರೊನಾ ಸೆಂಚೂರಿ
-ರಾಜ್ಯದಲ್ಲಿಂದು 5,619 ಮಂದಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿಂದು 5,619 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 1,51,449ಕ್ಕೆ ಏರಿಕೆಯಾಗಿದೆ. ಇಂದು 5,407 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇಂದು ಕೊರೊನಾಗೆ 100 ಜನರು ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 2804ಕ್ಕೆ ಬಂದು ತಲುಪಿದೆ. ಸದ್ಯ ಐಸಿಯುನಲ್ಲಿ 633 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, 73,958 ಸಕ್ರಿಯ ಪ್ರಕರಣಗಳಿವೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬೆಂಗಳೂರು ನಗರ 1848, ಬಳ್ಳಾರಿ 631, ಬೆಳಗಾವಿ 231, ಮೈಸೂರು 261, ದಾವಣಗೆರೆ 224, ಧಾರವಾಡ 199, ಕಲಬುರಗಿ 197, ಉಡುಪಿ 173, ಕೊಪ್ಪಳ 154, ದಕ್ಷಿಣ ಕನ್ನಡ 149, ಬಾಗಲಕೋಟೆ 149, ಹಾಸನ 137, ಚಿಕ್ಕಬಳ್ಳಾಪುರ 129, ಉತ್ತರ ಕನ್ನಡ 125, ಮಂಡ್ಯ 123, ಬೆಂಗಳೂರು ಗ್ರಾಮಾಂತರ 110, ರಾಯಚೂರು 91, ಗದಗ 78, ಯಾದಗಿರಿ 76, ಹಾವೇರಿ 71, ವಿಜಯಪುರ 66, ಬೀದರ್ 52, ಕೋಲಾರ 49, ಚಿಕ್ಕಮಗಳೂರು 48, ರಾಮನಗರ 45, ಚಾಮರಾಜನಗರ 38, ಶಿವಮೊಗ್ಗ 65, ತುಮಕೂರು 31, ಚಿತ್ರದುರ್ಗ 24 ಮತ್ತು ಕೊಡಗಿನಲ್ಲಿ 13 ಪ್ರಕರಣಗಳು ವರದಿಯಾಗಿವೆ.

 

Click to comment

Leave a Reply

Your email address will not be published. Required fields are marked *