Connect with us

ಕೊರೊನಾ ಸಾವಿನಲ್ಲೂ ಒಂದಾದ ತಾಯಿ-ಮಗ

ಕೊರೊನಾ ಸಾವಿನಲ್ಲೂ ಒಂದಾದ ತಾಯಿ-ಮಗ

ವಿಜಯಪುರ: ಕೊರೊನಾ ಮಹಾಮಾರಿಗೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ತಾಯಿ ಮತ್ತು ಮಗ ಒಂದೇ ದಿನ ಒಂದು ಗಂಟೆಯ ಅಂತರದಲ್ಲಿ ವಿಧಿಯ ಆಟಕ್ಕೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನಲ್ಲೂ ತಾಯಿ-ಮಗ ಒಂದಾಗಿದ್ದಾರೆ.

ನಿನ್ನೆ ಮದ್ಯಾಹ್ನ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರೌಢ ಶಾಲೆ ಶಿಕ್ಷಕರಾಗಿದ್ದ ದಶರಥ ಮ್ಯಾಗೇರಿ(54) ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದರು. ಮಗನ ಸಾವಿನ ಸುದ್ದಿ ತಿಳಿದು ಇತ್ತ ವಿಜಯಪುರದಲ್ಲಿ ತಾಯಿ ಲಲಿತಾಬಾಯಿ ಮ್ಯಾಗೇರಿ(80) ಕೂಡ ಮೃತಪಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ಲಲಿತಾಬಾಯಿ ಅವರಿಗೆ ಹುಷಾರಿಲ್ಲ ಎಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರೊಂದಿಗೆ ಆಸ್ಪತ್ರೆಯಲ್ಲಿ ದಶರಥ ಅವರಿದ್ದರು. ಬಳಿಕ ದಶರಥ ಅವರಿಗೂ ಅನಾರೋಗ್ಯ ಎದುರಾಗಿದೆ. ಅವರು ಶಿರಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದ ಒಂದೇ ದಿನ ಒಂದು ಗಂಟೆ ಅಂತರದಲ್ಲಿ ವಿಧಿಯ ಆಟಕ್ಕೆ ತಾಯಿ ಮತ್ತು ಮಗ ಇಬ್ಬರು ಬಲಿಯಾಗಿದ್ದಾರೆ.

Advertisement
Advertisement