Connect with us

ಮದುವೆ ದಿಬ್ಬಣ ಹೊರಟಿದ್ದ ಟಾಟಾ ಏಸ್ ಪೊಲೀಸರ ವಶಕ್ಕೆ

ಮದುವೆ ದಿಬ್ಬಣ ಹೊರಟಿದ್ದ ಟಾಟಾ ಏಸ್ ಪೊಲೀಸರ ವಶಕ್ಕೆ

ಧಾರವಾಡ: ಕೊರೊನಾ ಲಾಕ್‍ಡೌನ್ ನಡುವೆ ಮದುವೆ ದಿಬ್ಬಣ ಹೊರಟಿದ್ದ ಟಾಟಾ ಏಸ್ ಗೂಡ್ಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಧಾರವಾಡ ನಗರದ ಟೊಲ್ ನಾಕಾ ಬಳಿ ನಡೆದಿದೆ.

ಧಾರವಾಡ ಜಿಲ್ಲೆಯಲ್ಲಿ ಮದುವೆ ಸಮಾರಂಭಗಳಿಂದಲೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ ಎಂದು ಜಿಲ್ಲಾಡಳಿತ ಮದುವೆ ಕಾರ್ಯಕ್ರಮಗಳನ್ನು ನಿಷೇಧ ಮಾಡಿತ್ತು. ಆದರೆ ಇಂದು ಟಾಟಾ ಏಸ್ ವಾಹನದಲ್ಲಿ 15 ಜನರನ್ನು ತುಂಬಿಕೊಂಡು ಹುಬ್ಬಳ್ಳಿಯಿಂದ ಧಾರವಾಡಕ್ಕೆ ಮದುವೆಗೆ ಆಗಮಿಸುತ್ತಿದ್ದ ವೇಳೆ ಪೊಲೀಸರು ವಾಹನವನ್ನು ತಡೆದು ನಿಲ್ಲಿಸಿ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ:ದೇವಸ್ಥಾನದಲ್ಲಿ ಧರಣಿ ಕುಳಿತ ಮಹಿಳೆಯರು- ಮದ್ಯ ಮಾರಾಟ ನಿಷೇಧಿಸುವಂತೆ ಪಟ್ಟು

ಪೊಲೀಸರು ಮದುವೆಗೆ ಹೊರಟಿದ್ದ ಈ ವಾಹನ ತಡೆಯುತ್ತಿದ್ದಂತೆಯೇ ಅದರಲ್ಲಿ ಕುಳಿತಿದ್ದ ಜನ ಎಲ್ಲ ಇಳಿದು ಹೊರಟು ಹೋಗಿದ್ದಾರೆ. ಧಾರವಾಡ ವಿದ್ಯಾಗಿರಿ ಠಾಣಾ ಪೊಲೀಸರು ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆ ವಾಹನವನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ.

Advertisement
Advertisement