Connect with us

Districts

ಕೊರೊನಾ ನಿರ್ಬಂಧದ ಬೇಲಿಗೆ ಬೆಂಕಿ ಹಚ್ಚಿದ ಜೆಡಿಎಸ್ ಮುಖಂಡ

Published

on

ತುಮಕೂರು: ಗ್ರಾಮದ ಸುರಕ್ಷತೆ ಹಾಕಿಕೊಂಡಿದ್ದ ಬೇಲಿಗೆ ಜೆಡಿಎಸ್ ಮುಖಂಡ ಬೆಂಕಿ ಹಾಕಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ತಿಪ್ಲಾಪುರದಲ್ಲಿ ನಡೆದಿದೆ.

ಕಾಂತರಾಜು ಬೇಲಿಗೆ ಬೆಂಕಿ ಹಚ್ಚಿದ ಜೆಡಿಎಸ್ ಮುಖಂಡ. ಕೊರೊನಾ ಭೀತಿಯಿಂದ ಅನ್ಯ ವ್ಯಕ್ತಿಗಳು ಗ್ರಾಮ ಪ್ರವೇಶಿಸದಂತೆ ಗ್ರಾಮಸ್ಥರು ಮುಖ್ಯ ರಸ್ತೆಗೆ ಬೇಲಿ ಹಾಕಿಕೊಂಡಿದ್ದರು. ಊರಿನ ಮುಖ್ಯರಸ್ತೆಗೆ ಬೇಲಿ ಹಾಕಿದ್ದರಿಂದ ಕೋಪಗೊಂಡ ಕಾಂತರಾಜು ಗ್ರಾಮಸ್ಥರ ಮುಂದೆಯೇ ಬೆಂಕಿ ಹಚ್ಚಿದ್ದಾನೆ. ಜೆಡಿಎಸ್ ಮುಖಂಡನ ವರ್ತನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 14ರವರೆಗೆ ಭಾರತವೇ ಲಾಕ್‍ಡೌನ್ ಆಗಿದೆ. ಕೊರೊನಾ ಭೀತಿಯಿಂದ ನಗರ ನಿವಾಸಿಗಳು ಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ. ನಮ್ಮ ಗ್ರಾಮಗಳಿಗೆ ಬೇರೆಯವರು ಬರೋದು ಬೇಡ ಎಂದು ಗ್ರಾಮಸ್ಥರು ತಮಗೆ ತಾವೇ ದಿಗ್ಬಂಧನ ಹಾಕಿಕೊಂಡು ಪ್ರಮುಖ ರಸ್ತೆಗಳನ್ನು ಬಂದ್ ಮಾಡಿಕೊಳ್ಳುತ್ತಿದ್ದಾರೆ.