Connect with us

Bellary

ಗಣಿಜಿಲ್ಲೆಯಲ್ಲಿ ಒಂದೇ ದಿನ ಕೊರೊನಾಗೆ ನಾಲ್ವರು ಬಲಿ

Published

on

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ದಿನ ಕೊರೊನಾ ಮಾಹಮಾರಿ ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ. ಹೀಗಾಗಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೇರಿಯಾಗಿದೆ.

ನೆರೆಯ ಆಂಧ್ರಪ್ರದೇಶ ಮೂಲದ ಕರ್ನೂಲ್ ಜಿಲ್ಲೆಯ ಆದೋನಿಯ 60 ವರ್ಷದ ಕೊರೊನಾ ಸೋಂಕಿತ, ಬಳ್ಳಾರಿ ತಾಲೂಕಿನ ರೂಪನ ಗುಡಿ ಹೋಬಳಿಯ 65 ವರ್ಷದ ಸೋಂಕಿತ, ಬಳ್ಳಾರಿ ನಗರದ ಕೋಟೆ ಪ್ರದೇಶದ 63 ವರ್ಷದ ಮಹಿಳೆ, ಬಳ್ಳಾರಿಯ ರಾಜೇಶ್ವರಿ ನಗರದ 58 ವರ್ಷದ ಸೋಂಕಿತ ಸೇರಿ ಒಟ್ಟು ನಾಲ್ಕು ಮಂದಿ ಮೃತಪಟ್ಟಿದ್ದಾರೆಂದು ಡಿಸಿ ನಕುಲ್ ತಿಳಿಸಿದ್ದಾರೆ.

ತೀವ್ರ ಉಸಿರಾಟದ ತೊಂದರೆ, ಜ್ವರ ಮತ್ತು ಕೆಮ್ಮು-ನೆಗಡಿಯಿಂದ ಬಳಲುತ್ತಿದ್ದ ಈ ನಾಲ್ವರನ್ನು ಶನಿವಾರ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ ಪರೀಕ್ಷೆಯ ಹಿನ್ನೆಲೆಯಲ್ಲಿ ಗಂಟಲು ದ್ರವ ತೆಗೆದುಕೊಳ್ಳಲಾಗಿತ್ತು. ವರದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಇಂದು ಅವರು ಸಾವನ್ನಪ್ಪಿದ್ದು, ಸರ್ಕಾರದ ಮಾರ್ಗಸೂಚಿಯ ಪ್ರಕಾರ ಈ ನಾಲ್ವರ ಅಂತ್ಯಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ಡಿಸಿ ಎಸ್.ಎಸ್.ನಕುಲ್ ಮಾಹಿತಿ ನೀಡಿದ್ದಾರೆ.