Connect with us

ಕೊರೊನಾಗೆ ಮೃತಪಟ್ಟ ಗಂಡ – ಮನನೊಂದು ಹೆಂಡತಿ ಆತ್ಮಹತ್ಯೆ

ಕೊರೊನಾಗೆ ಮೃತಪಟ್ಟ ಗಂಡ – ಮನನೊಂದು ಹೆಂಡತಿ ಆತ್ಮಹತ್ಯೆ

ಮಂಡ್ಯ: ಗಂಡ ಕೊರೊನಾ ಸೋಂಕಿನಿಂದ ಮೃತಪಟ್ಟ ಕಾರಣ ಹೆಂಡತಿ ಗಂಡನ ಸಾವನ್ನು ನೋಡಲಾಗದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬೊಮ್ಮೇನಹಳ್ಳಿ ಗ್ರಾಮದ ಕಿರಣ್ ಮತ್ತು ಪೂಜಾ ದಂಪತಿ ಸಾವನ್ನಪ್ಪಿರುವ ದುರ್ದೈವಿಗಳು. ಕಳೆದ ಹನ್ನೊಂದು ತಿಂಗಳ ಹಿಂದೆ ಕಿರಣ್ ಹಾಗೂ ಪೂಜಾ ಅವರ ವಿವಾಹವಾಗಿತ್ತು. ಕಿರಣ್ ಅವರಿಗೆ ಕಳೆದ ಹತ್ತು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಕಿರಣ್ ಸಾವನ್ನಪ್ಪಿದ್ದಾರೆ.

ಕಿರಣ್ ಅವರ ಪಾರ್ಥಿವ ಶರೀರವನ್ನು ಕೋವಿಡ್ ನಿಯಮಗಳಂತೆ ಬೊಮ್ಮೇನಹಳ್ಳಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಅಂತ್ಯಸಂಸ್ಕಾರ ಮುಗಿಸಿಕೊಂಡು ಮನೆಗೆ ಬಂದ ಪೂಜಾ ಗಂಡನ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳು ಮದುವೆಯಾಗಿ ಸಂತೋಷವಾಗಿ ಜೀವನ ನಡೆಸಲಿ ಎಂದು ಮದುವೆ ಮಾಡಿದ್ದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.