Connect with us

Cinema

ಆಸೀಸ್‍ನಿಂದ ಕೊಹ್ಲಿ ಕಳುಹಿಸಿದ ದೀಪಾವಳಿ ಸಂದೇಶಕ್ಕೆ ಭಾರೀ ವಿರೋಧ

Published

on

Share this

ನವದೆಹಲಿ: ಆಸ್ಟ್ರೇಲಿಯಾದಿಂದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕಳುಹಿಸಿದ ದೀಪಾವಳಿ ಸಂದೇಶಕ್ಕೆ ಇಂಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಸದ್ಯ ಟೀಂ ಇಂಡಿಯಾ ಆಸೀಸ್ ಪ್ರವಾಸಕ್ಕೆ ಆಸ್ಟ್ರೇಲಿಯಾಗೆ ತೆರಳಿದೆ. ಐಪಿಎಲ್ ಮುಗಿದ ನಂತರ ನೇರವಾಗಿ ಕೊಹ್ಲಿ ಪಡೆ ಆಸೀಸ್‍ಗೆ ಹಾರಿದೆ. ಈ ನಡುವೆ ದೀಪಾವಳಿ ಹಬ್ಬದ ಸಲುವಾಗಿ ತನ್ನ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿಯವರು ಪಟಾಕಿ ಸಿಡಿಸದೇ ಶಾಂತಿಯುತವಾದ ದೀಪಾವಳಿ ಆಚರಿಸಿ ಎಂದು ಟ್ವಿಟ್ಟರ್ ಸಂದೇಶ ರವಾನೆ ಮಾಡಿದ್ದರು.

ವಿರಾಟ್ ಕೊಹ್ಲಿಯವರ ಈ ಮಾತಿಗೆ ಕೆಲ ಭಾರತೀಯರು ಟ್ವಿಟ್ಟರಿನಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಳೆದ ನವೆಂಬರ್ 5ರಂದು ಯುಎಇನಲ್ಲಿ ನಡೆದ ವಿರಾಟ್ ಕೊಹ್ಲಿ ಹುಟ್ಟುಹಬ್ಬದಂದು ಪಟಾಕಿ ಸಿಡಿಸಲಾಗಿತ್ತು ಈ ಫೋಟೋವನ್ನು ಬಳಸಿಕೊಂಡು ಕೊಹ್ಲಿಯವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇದರ ಮಧ್ಯೆ ಅನುಷ್ಕಾ ಶರ್ಮಾ ಅವರನ್ನು ಎಳೆದು ತಂದು ಪಟಾಕಿಗೆ ವಿರೋಧ ವ್ಯಕ್ತಪಡಿಸಿದವರ ವಿರುದ್ಧ ಕೆಲ ನೆಟ್ಟಿಗರು ಕಿಡಿಕಾರಿದ್ದಾರೆ.

ಕೊಹ್ಲಿ ಸಂದೇಶವೇನು?
ಶನಿವಾರ ತಮ್ಮ ಟ್ವಿಟ್ಟರಿನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದ ವಿರಾಟ್ ಕೊಹ್ಲಿ, ನನ್ನ ಕಡೆಯಿಂದ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ನಾನು ಕೇಳಿಕೊಳ್ಳುತ್ತೇನೆ. ಜೊತೆಗೆ ಈ ಬಾರಿ ದೀಪಾವಳಿಯಲ್ಲಿ ಪಟಾಕಿಯನ್ನು ಸಿಡಿಸಬೇಡಿ. ಪರಿಸರವನ್ನು ಸಂರಕ್ಷಿಸಿ ಜೊತೆಗೆ ನಿಮ್ಮ ಪ್ರೀತಿ ಪಾತ್ರರ ಜೊತೆ ಮನೆಯಲ್ಲೇ ದೀಪಾವಳಿಯನ್ನು ಆಚರಿಸಿ ಎಂದು ಕೇಳಿಕೊಂಡಿದ್ದರು.

ಭಾರತ-ಆಸ್ಟ್ರೇಲಿಯಾ ಸರಣಿಯು ನವೆಂಬರ್ 27ರಂದು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಏಕದಿನ ಪಂದ್ಯದ ನಂತರ ಉಭಯ ತಂಡಗಳು ಮೂರು ಪಂದ್ಯಗಳ ಟಿ-20 ಸರಣಿ ಆಡಲಿವೆ. ನಂತರ ಡಿಸೆಂಬರ್ 17ರಿಂದ ಇಂಡಿಯಾ ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರಾರಂಭವಾಗಲಿದೆ. ಅಡಿಲೇಡ್‍ನಲ್ಲಿ ಆಡಲಿರುವ ಡೇ/ನೈಟ್ ಪಂದ್ಯದ ನಂತರ ಕೊಹ್ಲಿ ಭಾರತಕ್ಕೆ ಮರಳಲಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement