Saturday, 25th May 2019

Recent News

`ಮುಸಲ್ಮಾನರು ಕಲಿಯುಗದ ರಾಕ್ಷಸರು’: ರಾಘವಲು ಪ್ರಚೋದನಕಾರಿ ಭಾಷಣ

`ಕುರಾನ್ ಒಂದು ಧರ್ಮ ಗ್ರಂಥವೇ ಅಲ್ಲ, ಅದು ಇಸ್ಲಾಮಿಕ್ ಮ್ಯಾನಿಫೆಸ್ಟೋ’: ಮಂಜುನಾಥ ಸ್ವಾಮಿ

ಉಡುಪಿ: ಮುಸಲ್ಮಾನರು, ಜಾತ್ಯಾತೀತರು ಕಲಿಯುಗದ ರಾಕ್ಷಸರು ಎಂದು ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಘವಲು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.

ನಗರದಲ್ಲಿ ನಡೆದ ರಾಮಮಂದಿರ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಅವರು, ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಪ್ರತಿ ಯುಗದಲ್ಲಿಯೂ ರಾಕ್ಷಸರ ವಧೆಗೆ ದೇವರು ಅವತಾರವೆತ್ತಿ ಬಂದರು. ಕಲಿಯುಗದ ರಾಕ್ಷಸರು ಸಂಸತ್ ಹಾಗೂ ಕೋರ್ಟ್ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಮುಸಲ್ಮಾನರಿಗೆ ಪ್ರಗತಿಪರರು ಬೆಂಬಲ ನೀಡುತ್ತಿದ್ದಾರೆ. ರಾಮಮಂದಿರ ನಿರ್ಮಾಣವಾದರೆ ಸಮಾಜ ಒಗ್ಗೂಡುತ್ತದೆ ಎಂಬ ಭಯ ಅವರಿಗೆ ಇದೆ. ಈವರೆಗೆ ದೇಶದಲ್ಲಿ 33 ಸಾವಿರ ಮಂದಿರ ನಾಶವಾಗಿದೆ ಎಂದು ಹೇಳಿದರು.

ಸಂಸತ್ತಿನಲ್ಲಿ ಜನಾಗ್ರಹ ಸಭೆಯ ಮನವಿ ಕೊಟ್ಟು ನಮ್ಮ ಅಭಿಪ್ರಾಯ ಸಲ್ಲಿಸದಿದ್ದರೆ ನಿಮ್ಮ ಸ್ಥಾನಕ್ಕೆ ಕುತ್ತು ಬರಬಹುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ರಾಘವಲು ಎಚ್ಚರಿಕೆ ನೀಡಿದರು. ಅಲಹಾಬಾದ್ ಕುಂಭಮೇಳದಲ್ಲಿ ಸಂತರು ಹಲವು ಘೋಷಣೆಗಳನ್ನು ಮಾಡಲಿದ್ದಾರೆ. ಜನವರಿಯ ಸಂತರ ಘೋಷಣೆ ಕಾರ್ಯರೂಪಕ್ಕೆ ಬರಲಿದೆ ಎಂದರು.

ಇದೇ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪ್ರಾಂತ ವಿಶೇಷ ಸಂಪರ್ಕ ಪ್ರಮುಖ ಮಂಜುನಾಥ ಸ್ವಾಮಿ, ಮಸೀದಿಗಳು ಉಗ್ರ ಚಟುವಟಿಕಾ ಕೇಂದ್ರವಾಗಿದೆ. ಮುಸಲ್ಮಾನರು ಸಾತ್ವಿಕರು ಎಂಬ ಭ್ರಮೆಯಿಂದ ಹೊರಗಡೆ ಬನ್ನಿ. ಈ ದೇಶದಲ್ಲಿ ಇಸ್ಲಾಮಿಕ್ ಟೆರರಿಸಂ ನಡೆಯುತ್ತಿದೆ. ಮುಸಲ್ಮಾನರು ಇಸ್ಲಾಮಿಕ್ ಉಗ್ರಗಾಮಿಗಳು ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ಜಗತ್ತಿನ ಅನೇಕ ದೇಶಗಳನ್ನು ಅವರು ಕೊಳ್ಳೆ ಹೊಡೆದರು. ಈಗ ಭಾರತವೇ ಅವರ ಟಾರ್ಗೆಟ್ ಆಗಿದೆ. ಇಸ್ಲಾಂ ಒಂದು ಧರ್ಮವೇ ಅಲ್ಲ. ಅದೊಂದು ಸಾಮ್ರಾಜ್ಯಶಾಹಿ ವಿಚಾರಧಾರೆ. ಕುರಾನ್ ಒಂದು ಧರ್ಮ ಗ್ರಂಥವೇ ಅಲ್ಲ- ಅದು ಇಸ್ಲಾಮಿಕ್ ಮ್ಯಾನಿಫೆಸ್ಟೋ ಎಂದು ಕಿಡಿಕಾರಿದರು.

ನಮಾಜ್‍ಗೆ ಮಸೀದಿಗಳ ಅವಶ್ಯಕತೆಯಿಲ್ಲ ಅಂತ ಕೋರ್ಟ್ ಮುಂದೆ ನೀವು ಒಪ್ಪಿದ್ದೀರಿ. ಮತ್ಯಾಕೆ ನೀವು ಮಸೀದಿ ಕಟ್ಟುತ್ತೀರಾ? ರೈಲ್ವೇ ಸ್ಟೇಷನ್, ಶೌಚಾಲಯ, ಬಸ್ ಸ್ಟಾಂಡ್, ವಿಮಾನ ನಿಲ್ದಾಣ ಎಲ್ಲಾದರೂ ನಮಾಜ್ ಮಾಡುತ್ತೀರಿ. ಮುಸ್ಲಿಮರಿಗೆ ಮಸೀದಿ ಯಾಕೆ ಬೇಕು ಎಂದು ಉಗ್ರ ಭಾಷಣ ಮಾಡಿದರು.

ರಾಮ ಮಂದಿರದ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ನಮಗೆ ಬೇಕು. ಮಂದಿರ್ ಭೀ ಚಾಹಿಯೇ- ಮೋದೀ ಬೀ ಚಾಹಿಯೇ. ಅವರನ್ನು ಕೆಳಗಿಳಿಸುವ ದುಷ್ಟಶಕ್ತಿಗಳನ್ನು ಗಮನಿಸಿಕೊಳ್ಳಬೇಕು ಎಂದು ಮಂಜುನಾಥ್ ಸ್ವಾಮೀಜಿ ಜನಾಗ್ರಹ ಸಮಾವೇಶದಲ್ಲಿ ಕರೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Leave a Reply

Your email address will not be published. Required fields are marked *