Connect with us

Latest

ಝಾಕೀರ್ ಗಡಿಪಾರಿಗೆ ಮುಂದಾದ ಮಲೇಷ್ಯಾ!

Published

on

ನವದೆಹಲಿ: ದ್ವೇಷ ಭಾಷಣ, ಭಯೋತ್ಪಾದನೆಗೆ ಪ್ರೇರಣೆ, ಹಣಕಾಸು ನೆರವು ಆರೋಪ ಹಿನ್ನೆಲೆಯಲ್ಲಿ ವಿವಾದಿತ ಧರ್ಮ ಪ್ರಚಾರಕ ಝಾಕೀರ್ ನಾಯಕ್‍ಗೆ ಗೇಟ್ ಪಾಸ್ ನೀಡಲು ಮಲೇಷ್ಯಾ ನಿರ್ಧರಿಸಿದೆ.

ಝಾಕೀರ್ ಭಾಷಣದಿಂದ ಪ್ರಚೋದಿತನಾಗಿದ್ದ ಐಸಿಸ್ ಉಗ್ರನೋರ್ವ 2016ರಲ್ಲಿ ಢಾಕಾದ ಮೇಲೆ ದಾಳಿ ಮಾಡಿದ್ದನು. ಈ ಘಟನೆಯಿಂದಾಗಿ ತಕ್ಷಣವೇ ಬಳಿಕ ಝಾಕೀರ್ ಭಾರತ ಬಿಟ್ಟು ಮಲೇಷ್ಯಾದಲ್ಲಿ ಆಶ್ರಯ ಪಡೆದಿದ್ದರು.

ಸದ್ಯ ಮಲೇಷ್ಯಾ ಸರ್ಕಾರ ಝಾಕೀರ್ ನನ್ನು ಭಾರತಕ್ಕೆ ಗಡಿ ಪಾರು ಮಾಡಲು ಮುಂದಾಗಿದೆ. “ಇದೆಲ್ಲಾ ಆಧಾರರಹಿತ, ನಾನು ಭಾರತಕ್ಕೆ ಬರಲ್ಲ. ಅಲ್ಲಿ ನನಗೆ ಭದ್ರತೆ ಇಲ್ಲ ಎಂದು ಝಾಕೀರ್ ಪಟ್ಟು ಹಿಡಿದಿದ್ದಾನಂತೆ.