ಹಣದಾಸೆಗೆ ವೃದ್ಧ ದಂಪತಿಯನ್ನು ಹತ್ಯೆಗೈದು ಮನೆಯೆಲ್ಲಾ ಹುಡುಕಿದ್ರು- ಆದ್ರೆ ಸಿಕ್ಕಿದ್ದು ಕೇವಲ 500 ರೂ!

Advertisements

ಅಹಮದಬಾದ್: ಹಣಕ್ಕಾಗಿ ಕಟ್ಟಡ ಕಾರ್ಮಿಕರು ಮನೆಯೊಂದಕ್ಕೆ ನುಗ್ಗಿ ಇಬ್ಬರು ವೃದ್ಧ ದಂಪತಿಯನ್ನು ಹತ್ಯೆ ಮಾಡಿರುವ ಘಟನೆ ಘಾಟ್‌ಲೋದಿಯಾದಲ್ಲಿ ನಡೆದಿದೆ.

Advertisements

ದಯಾನಂದ ಶಾನುಭೋಗ (90) ಮತ್ತು ವಿಜಯಲಕ್ಷ್ಮಿ ಶಾನುಭೋಗ (80) ಹತ್ಯೆಯಾದ ದಂಪತಿ. ಕೊಲೆ ಮಾಡಿದ ಏಮನ್‌ ಟೊಪ್ನೊ (26) ಮತ್ತು ಮುಕುತ್‌ ಹಪ್ಕಡದ (19) ಬಂಧಿತ ಆರೋಪಿಗಳು. ಇದನ್ನೂ ಓದಿ: ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೈಲಿನಿಂದ ಬಿಡುಗಡೆ

Advertisements

ಕಟ್ಟಡ ಕಾರ್ಮಿಕರಾಗಿದ್ದ ಏಮನ್‌ ಮತ್ತು ಮುಕುತ್‌ ತಮ್ಮ ಮನೆಯವರಿಗೆ ಕೂಲಿ ಹಣವನ್ನು ಕಳುಹಿಸಿದ್ದರು. ತಮಗೆ ಹಣದ ಅವಶ್ಯಕತೆ ಹೆಚ್ಚಿತ್ತು. ಹೀಗಾಗಿ ಸಂಪಾದನೆಗೆ ಸುಲಭ ದಾರಿ ಹುಡುಕಲು ಪ್ರಯತ್ನಿಸಿದರು. ಆಗ ಮನೆ ದರೋಡೆಯ ಯೋಜನೆ ಅವರಿಗೆ ಹೊಳೆಯಿತು.

ಈ ವೇಳೆ ಮನೆಯೊಂದಕ್ಕೆ ನುಗ್ಗಿದ ಆರೋಪಿಗಳು ವೃದ್ಧ ದಯಾನಂದ್‌ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಆತನ ಪತ್ನಿಯ ಕುತ್ತಿಗೆಯನ್ನೂ ಕೊಯ್ದಿದ್ದಾರೆ. ವೃದ್ಧ ದಂಪತಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಾಗ, ಆರೋಪಿಗಳು ಮನೆಯನ್ನು ಹುಡುಕಾಡಿದ್ದಾರೆ. ಎಷ್ಟು ಹುಡುಕಿದರೂ ಕೊನೆಗೆ ಅವರಿಗೆ ಸಿಕ್ಕಿದ್ದು ಕೇವಲ 500 ರೂಪಾಯಿ. ಕೊನೆಗೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ದಂಪತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ದೆಹಲಿ ವಿವಿ ಪ್ರೊಫೆಸರ್‌ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಕಾರು ಚಾಲಕ!

Advertisements

ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.

Advertisements
Exit mobile version