Recent News

ಡಿಕೆಶಿ ಸಮ್ಮುಖದಲ್ಲೇ ಜಗಳ – ಬಳ್ಳಾರಿ ಕಾಂಗ್ರೆಸ್ಸಿನಲ್ಲಿ ಮುಗಿಯದ ಕಿತ್ತಾಟ

ಬಳ್ಳಾರಿ: ಕಾಂಗ್ರೆಸ್ ಶಾಸಕರಿಬ್ಬರ ಬಡಿದಾಟ ಇನ್ನೂ ಜನಮಾನಸದಿಂದ ಮರೆಯಾಗಿಲ್ಲ. ರೆರ್ಸಾಟಿನಲ್ಲಿ ಕುಡಿದು ತೂರಾಡಿದ ಶಾಸಕ ಗಣೇಶ ಹಾಗೂ ಆನಂದ್ ಸಿಂಗ್ ಗಲಾಟೆ ಬಗೆಹರಿಯುವ ಮುನ್ನವೇ ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕರ ಜಗಳ ಮತ್ತೆ ಮುಂದುವರಿದಿದೆ.

ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ನಾಮಪತ್ರ ಸಲ್ಲಿಕೆ ನಂತರ ಸಚಿವ ಡಿಕೆ ಶಿವಕುಮಾರ್ ಮಾಧ್ಯಮಗಳ ಜೊತೆ ಮಾತನಾಡುವ ವೇಳೆಯಲ್ಲೇ ಶಾಸಕ ಭೀಮಾನಾಯ್ಕ್ ಹಾಗೂ ಮಾಜಿ ಶಾಸಕ ಶಿರಾಜ್ ಶೇಖ್ ಬೈದಾಡಿಕೊಂಡು ಜಗಳ ಮಾಡಿಕೊಂಡಿದ್ದಾರೆ.

ಮಾಜಿ ಶಾಸಕ ಶಿರಾಜಶೇಖ್ ಅವರಿಗೆ ಶಾಸಕ ಭೀಮಾನಾಯ್ಕ್,”ಲೇ ನೋಡ್ಕೋತ್ತೀನಿ. ನಾಳೆ ಸಿಗು ಇದೆ” ಎಂದು ಹೇಳಿದರೆ “ಏನು ನೋಡ್ಕೋತ್ತಿಯಾ” ಎಂದು ಶಿರಾಜ್ ಶೇಖ್ ತಿರುಗೇಟು ನೀಡಿದರು.

ಪಕ್ಷ ವಿರೋಧಿ ಚಟುವಟಿಕೆ ಮಾಡಿ ಬಿಜೆಪಿ ಪರ ಪ್ರಚಾರ ಮಾಡಿದ್ದ ಶಿರಾಜ ಶೇಖ್ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಿದಕ್ಕೆ ಭೀಮಾನಾಯ್ಕ್ ಗರಂ ಆಗಿ ಬೈದಿದ್ದರು. ಅಲ್ಲದೇ ಶೀರಾಜ್ ಶೇಖ್ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಭೀಮಾನಾಯ್ಕ್ ಅಸಮಾಧಾನ ಸಹ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.

ನಾಮಪತ್ರ ಸಲ್ಲಿಕೆಯ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಮಂಗಳವಾರದ ಶುಭ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ. ದೇಶದಲ್ಲಿ ಬದಲಾವಣೆ ಆಗಬೇಕು. ಎಲ್ಲ ವರ್ಗದವರಿಗೂ ರಕ್ಷಣೆ ಸಿಗಬೇಕು. ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಮತದಾರರು ಜವಾಬ್ದಾರಿಯಿಂದ ಮತ ನೀಡಬೇಕು. ಬಳ್ಳಾರಿಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಆಗಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ನಾನು ಉಪಚುನಾವಣೆಯಲ್ಲೇ ಉಗ್ರಪ್ಪರ ಪರವಾಗಿ ನಾನು ಐದೂವರೆ ವರ್ಷಗಳಿಗೆ ಮತ ನೀಡುವಂತೆ ಮನವಿ ಮಾಡಿದ್ದೇನೆ. ನಮಗೆ ಚುನಾವಣೆಯಲ್ಲಿ ಹಣದ ಅವಶ್ಯಕತೆ ಇಲ್ಲ. ನಮಗೆ ಜನರ ಆರ್ಶಿವಾದ ಬೇಕು. ಬಿಜೆಪಿಯವರು ಬೇಕಾದಷ್ಟು ಹಣ ಹಂಚಿಕೆ ಮಾಡಲಿ ಎಂದು ಹೇಳಿದರು.

Leave a Reply

Your email address will not be published. Required fields are marked *