Thursday, 17th October 2019

Recent News

ರಾಹುಲ್ ಗಾಂಧಿ ಯೋಗ ಮಾಡದೇ ಇರುವುದಕ್ಕೆ ಕಾಂಗ್ರೆಸ್ ಸೋತಿದೆ: ಬಾಬಾ ರಾಮ್‍ದೇವ್

ನವದೆಹಲಿ: ಕಾಂಗ್ರೆಸ್‍ನ ಅಧ್ಯಕ್ಷ ರಾಹುಲ್ ಗಾಂಧಿ ಯೋಗ ಮಾಡದೇ ಇರುವುದಕ್ಕೆ ಕಾಂಗ್ರೆಸ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋತಿದೆ ಎಂದು ಯೋಗ ಗುರು ಬಾಬಾ ರಾಮ್‍ದೇವ್ ಅವರು ಹೇಳಿದ್ದಾರೆ.

ಇದೇ ತಿಂಗಳು ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನ ನಡೆಯಲಿದ್ದು, ಇದಕ್ಕೆ ಬೇಕಾದ ತಯಾರಿಯನ್ನು ಬಾಬಾ ರಾಮ್‍ದೇವ್ ಅವರು ಮಾಡಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಅವರು ಯೋಗ ಮಾಡುವವರಿಗೆ ಅಚ್ಛೇ ದಿನ್ ಬರುತ್ತದೆ ಎಂದು ಹೇಳಿದ್ದಾರೆ.

ಯೋಗವನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ಅವರು ಮೋದಿ ಅವರನ್ನು ಶ್ಲಾಘಿಸಿದ್ದಾರೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಕಾರಣ ಅ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಯೋಗಾಭ್ಯಾಸ ಮಾಡದೆ ಇರುವುದು ಎಂದು ಹೇಳಿದ್ದಾರೆ.

“ಮೋದಿ ಜೀ ಅವರು ಸಾರ್ವಜನಿಕವಾಗಿ ಯೋಗ ಮಾಡುತ್ತಾರೆ. ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರೂ ಅವರು ಮತ್ತು ಇಂದಿರಾ ಗಾಂಧಿ ಅವರು ರಹಸ್ಯವಾಗಿ ಯೋಗ ಮಾಡುತ್ತಿದ್ದರು. ಆದರೆ ಅವರ ಉತ್ತರಾಧಿಕಾರಿಯಾದ ರಾಹುಲ್ ಗಾಂಧಿ ಅವರು ಯೋಗ ಮಾಡುವುದಿಲ್ಲ. ಈ ಕಾರಣದಿಂದ ಅವರ ರಾಜಕೀಯ ಜೀವನ ಉಲ್ಬಣವಾಗುತ್ತಿದೆ. ಯಾರು ಯೋಗ ಮಾಡುತ್ತಾರೆ ಅವರಿಗೆ ಅಚ್ಛೇ ದಿನ್ ಬರುತ್ತದೆ” ಎಂದು ರಾಮ್‍ದೇವ್ ಹೇಳಿದ್ದಾರೆ.

ಈ ಹಿಂದೆ ಯೋಗ ಆಚರಿಸುವ ಸಲುವಾಗಿ ಖಾಸಗಿ ಚಾನೆಲ್‍ನಲ್ಲಿ ಮಾತನಾಡಿದ್ದ ರಾಮ್‍ದೇವ್, ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರು ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಾರೆ ಎಂದು ಹೇಳಿದ್ದರು. ಈಗ ಇದಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ.

ಮೋದಿ ಅವರು ಯೋಗವನ್ನು ಬಹಳ ಇಷ್ಟಪಡುತ್ತಾರೆ. ಕಳೆದ ವರ್ಷ ಅವರು ತಮ್ಮ ಲೋಕ್ ಕಲ್ಯಾಣ್ ಮಾರ್ಗ್ ಮನೆಯ ಹುಲ್ಲುಹಾಸಿನ ಮೇಲೆ ಯೋಗ ಮಾಡುತ್ತಿರುವ 2 ನಿಮಿಷದ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬ ವೈರಲ್ ಆಗಿತ್ತು.

ಈ ವಿಡಿಯೋ ನೋಡಿದ ಕೆಲ ಜನರು ಮೋದಿ ಅವರನ್ನು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಹೋಲಿಕೆ ಮಾಡಿ ನೆಹರು ಅವರು ಶಿರಾಶಾಸನ ಮಾಡಿದ ಫೋಟೋವನ್ನು ಹಾಕಿದ್ದರು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Leave a Reply

Your email address will not be published. Required fields are marked *