Tuesday, 17th September 2019

Recent News

ಅನ್ನಭಾಗ್ಯದ ಅಕ್ಕಿಯನ್ನು 2 ಕೆ.ಜಿ ಇಳಿಸಿದ್ದಕ್ಕೆ ಕಾಂಗ್ರೆಸ್‍ನಲ್ಲೇ ವಿರೋಧ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ 2 ಕೆ.ಜಿ ಅಕ್ಕಿ ಕಡಿಮೆ ಮಾಡಿರುವುದು ಸರಿಯಲ್ಲ ಅಂತ ಚಿಕ್ಕಬಳ್ಳಾಪುರ ಶಾಸಕ ಕೆ ಸುಧಾಕರ್ ತಿಳಿಸಿದ್ದಾರೆ.

ಇಂದು ನಡೆದ ವಿಧಾನಸಭಾ ಕಲಾಪದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಅವರು, ಅನ್ನಭಾಗ್ಯ ಯೋಜನೆ ಕಾಂಗ್ರೆಸ್ ಸರ್ಕಾರವಿದ್ದಾಗಿನ ಕಾರ್ಯಕ್ರಮವಾಗಿದೆ. ಈ ರಾಜ್ಯವನ್ನು ಹಸಿವುಮುಕ್ತ ಮಾಡುವುದರಲ್ಲಿ ಅತ್ಯಂತ ಯಶಸ್ವಿಯಾಗಿದ್ದೇವೆ. ಆದ್ರೆ ಈ ಬಾರಿಯ ಬಜೆಟ್ ನಲ್ಲಿ 7 ಕೆ.ಜಿ ಕೋಡುತ್ತಿದ್ದ ಅಕ್ಕಿಯಲ್ಲಿ 2 ಕೆ.ಜಿ ಕಡಿಮೆ ಮಾಡಿದ್ದಾರೆ. ಸರ್ಕಾರದಿಂದ ಅನ್ನ ಕೊಡುವುದರ ಮೂಲಕ ಇಂದು ಗ್ರಾಮೀಣ ಭಾಗದ ಜನ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ದಯವಿಟ್ಟು ಇದನ್ನು ಕಡಿಮೆ ಮಾಡಬೇಡಿ ಅಂತ ಮನವಿ ಮಾಡಿಕೊಂಡರು.

ಈ ಅನ್ನಭಾಗ್ಯ ಯೋಜನೆಯಲ್ಲಿ 2 ಕೆ.ಜಿ ಅಕ್ಕಿ ಕಡಿಮೆ ಮಾಡೋದ್ರಿಂದ ಹೆಚ್ಚು ಹಣ ಉಳಿಯುದಿಲ್ಲ. 2 ಲಕ್ಷ 18 ಸಾವಿರ ಗಾತ್ರದ ಬಜೆಟ್ ನಲ್ಲಿ 500 ಅಥವಾ 600 ಕೋಟಿ ರೂ.ಗಳು ಖಂಡಿತವಾಗಿಯೂ ಹೊರೆಯಾಗಲ್ಲ ಅನಿಸುತ್ತೆ. ಈ ಹಿನ್ನೆಲೆಯಲ್ಲಿ ದಯವಿಟ್ಟು ಸಿಎಂ ಅವರು ಇದನ್ನು ಪುನರ್ ಪರಿಶೀಲಿಸಿ 2 ಕೆ.ಜಿ ಜೊತೆಗೆ ನಿಮ್ಮ ಹೆಸರಿನಲ್ಲಿ ಸ್ವಲ್ಪ ಜಾಸ್ತಿ ಮಾಡಿದ್ರೆ ಸ್ವಾಗತ. ಆದ್ರೆ ಹಿಂದೆ ಇದ್ದಂತಹ 7 ಕೆ.ಜಿಯನ್ನು ಮಾತ್ರ ಕಡಿಮೆ ಮಾಡಬೇಡಿ ಅಂತ ಪರಿ ಪರಿಯಾಗಿ ಬೇಡಿಕೊಂಡರು.

ಸ್ವಾತಂತ್ರ್ಯಾ ನಂತರ ಐದು ಜಿಲ್ಲೆಗಳಲ್ಲಿ ಒಂದೇ ಒಂದು ನೀರಾವರಿ ಯೋಜನೆಗಳನ್ನು ಮಾಡಿಲ್ಲ. ಎಲ್ಲಿ ನೀರಾವರಿ, ಜಲಾಶಯಗಳಿವೆಯೋ ಅಲ್ಲಿ ಆತ್ಮಹತ್ಯೆಗಳು ಆಗುತ್ತಿವೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ನಡೆಯಲ್ಲ. 1,200 ಅಥವಾ 1,500 ಅಡಿ ಆಳದಲ್ಲಿ ನೀರನ್ನು ತೆಗೆದು ಈ ರಾಜ್ಯದ ಜನರಿಗೆ ದೂರ ದೂರದ ನಗರಗಳಿಗೆ ಅತ್ಯಂತ ಒಳ್ಳೆಯ ಒಂದು ತರಕಾರಿ, ಹಣ್ಣು ಹಾಗೂ ಹೂಗಳನ್ನು ಬೆಳೆಯುವ ಪ್ರಗತಿದಾಯಕ ರೈತರು ನಮ್ಮ ಜಿಲ್ಲೆಯವರು ಎಂದು ಹೇಳಲು ಹೆಮ್ಮೆ ಪಡುತ್ತೇನೆ ಅಂತ ಹೇಳಿದ್ರು.

ಇಂತಹ ರೈತರನ್ನು ಸಾಲಗಾರರನ್ನಾಗಿ ಮಾಡುತ್ತಿರಾ ಎಂದು ಪ್ರಶ್ನಿಸಿದ ಅವರು, ಜಿಲ್ಲೆಯ ರೈತರು ಸರ್ಕಾರದ ಸವಲತ್ತುಗಳಿಗೆ ಹೆಚ್ಚು ಅವಲಂಬಿತರಾಗಿಲ್ಲ. ನೀರು ಒಂದಕ್ಕೆ ಮಾತ್ರ ಅವರು ಅವಲಂಬಿತರಾಗುತ್ತಿದ್ದಾರೆ ಅಂತ ಅವರು ಹೇಳಿದ್ರು.

Leave a Reply

Your email address will not be published. Required fields are marked *