ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ ಮಾಡಲಿ: ಭೋಜೇಗೌಡ

1 Min Read

ಬೆಂಗಳೂರು: ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ (Congress High Command) ಮಧ್ಯಪ್ರವೇಶ ಮಾಡಬೇಕು ಅಂತ ಜೆಡಿಎಸ್ ಎಂಎಲ್‌ಸಿ ಭೋಜೇಗೌಡ (MLC Bhojegowda) ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಮಾತಾಡಿದ ಅವರು, ಸ್ಟಿಂಗ್ ಆಪರೇಷನ್‌ನಿಂದ (Sting Operation) ಕರ್ನಾಟಕದ ಮಾನ ಮರ್ಯಾದೆ ಹರಾಜಾಗಿದೆ. ಸರ್ಕಾರ ಇದರ ಹೊಣೆ ಹೊರಬೇಕು. ಕಾಂಗ್ರೆಸ್ ಹೈಕಮಾಂಡ್ ಕಣ್ಣು ಮುಚ್ಚಿ ಕುಳಿಯಿದೆಯಾ? ಸಿದ್ದರಾಮಯ್ಯ ಅವರನ್ನ ಹೇಗೆ ನಡೆಸಿಕೊಳ್ಳುವುದು ಅಂತ ಹೈಕಮಾಂಡ್‌ಗೆ ಗೊತ್ತಿಲ್ಲವಾ? ಕಾಂಗ್ರೆಸ್ ಹೈಕಮಾಂಡ್ ಆಕ್ಷನ್ ತಗೋಬೇಕು. ಹೈಕಮಾಂಡ್ (High Command) ತಾಕತ್ತು ಇದ್ದರೆ ಕ್ರಮ ಮಾಡಬೇಕು. ನಮ್ಮ ಸರ್ಕಾರ ಇಲ್ಲದೇ ಕಾಂಗ್ರೆಸ್ ಹೈಕಮಾಂಡ್ ನಡೆಯಲ್ಲ. ಅದಕ್ಕೆ ಕ್ರಮ ತೆಗೆದುಕೊಳ್ಳಲ್ಲ. ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಹೈಕಮಾಂಡ್ ಮಧ್ಯ ಪ್ರವೇಶ ಮಾಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಈ ವರ್ಷ 2 ಗಂಟೆ ಮಾತ್ರ VIP ದರ್ಶನ – ಶಿವಲಿಂಗೇಗೌಡ

ಸಿದ್ದರಾಮಯ್ಯ ಸಾಧಾರಣ ವ್ಯಕ್ತಿ ಅಲ್ಲ. ಕಾಂಗ್ರೆಸ್ ಅನ್ನು ಅಧಿಕಾರ ತಂದವರು. ಇಂತಹವರ ರಕ್ಷಣೆಗೆ ಕಾಂಗ್ರೆಸ್ ಬರಲಿಲ್ಲ. ಯಾರಿಗೇ ಆದ್ರು ಇಂತಹ ಸನ್ನಿವೇಶ ಬರಬಾರದು. ಮಾನ ಹರಾಜು ಹಾಕೋದು ಸರಿಯಲ್ಲ. ಕುಮಾರಸ್ವಾಮಿ ಅವರ ಬಳಿ ಮಾಹಿತಿ ಇದೆ ಅದಕ್ಕೆ ಡಿಕೆ ಶಿವಕುಮಾರ್ ಮೇಲೆ ಆರೋಪ ಮಾಡಿದ್ದಾರೆ. ಡಿಕೆ ಶಿವಕುಮಾರ್ ಇದನ್ನು ಮಾಡಿಲ್ಲ ಅಂದರೆ ಕೂಡಲೇ ಮಾಡಿರುವವರ ಮೇಲೆ ಆಕ್ಷನ್ ಮಾಡಲಿ ಎಂದು ಕಿಡಿಕಾರಿದರು.

 

Share This Article
Exit mobile version