Friday, 17th August 2018

Recent News

ಬಿಜೆಪಿ ಶಾಸಕ ಯತ್ನಾಳ್ ಗಡಿಪಾರು ಮಾಡಿ: ಕೈ, ಡಿಎಸ್‍ಎಸ್ ನಾಯಕರ ಆಗ್ರಹ

ವಿಜಯಪುರ: ಬಿಜೆಪಿ ಶಾಸಕ ಬನವನಗೌಡ ಪಾಟೀಲ್ ಯತ್ನಾಳ್‍ರ ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್ ಮತ್ತು ದಲಿತ ಸಂಘರ್ಷ ಸಮಿತಿಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಶಾಸಕರ ಗಡಿಪಾರಿಗೆ ಪೊಲೀಸರಲ್ಲಿ ಮನವಿಯನ್ನು ಸಲ್ಲಿಸಿದ್ದಾರೆ.

ಕಾಂಗ್ರೆಸ್ ಮತ್ತು ಡಿಎಸ್‍ಎಸ್‍ನ ಮುಖಂಡರು ಜಂಟಿಯಾಗಿ ಇಂದು ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ, ರಂಜಾನ್ ಮುಗಿಯುವವರೆಗೂ ಶಾಸಕ ಯತ್ನಾಳ್‍ರವರನ್ನು ಗಡಿಪಾರು ಮಾಡುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.

ಕಾಂಗ್ರೆಸ್‍ನ ಜಿಲ್ಲಾ ವಕ್ತಾರರಾದ ಎಸ್ ಎಂ ಪಾಟೀಲ ಗಣಿಹಾರ ಮಾತನಾಡಿ, ಶಾಸಕರು ಸಂವಿಧಾನಬದ್ಧವಾಗಿ ಪ್ರಮಾಣವಚನ ಸ್ವೀಕರಿಸಿ, ಮುಸ್ಲಿಂಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಸಂವಿಧಾನಕ್ಕೆ ಕನಿಷ್ಠ ಗೌರವವನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಯತ್ನಾಳ್‍ರ ಶಾಸಕ ಸ್ಥಾನ ರದ್ದುಗೊಳಿಸುವಂತೆ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.

ಕಳೆದ ವಾರದ ನಡೆದ ಸಮಾರಂಭದಲ್ಲಿ ಯತ್ನಾಳ್ ನನ್ನ ಕಚೇರಿಗೆ ಬುರ್ಖಾಧಾರಿಗಳು ಹಾಗೂ ಟೋಪಿಧಾರಿಗಳು ಬರುವುದು ಬೇಡ ಎಂದ್ದಿದ್ದರು. ಅಲ್ಲದೆ ನಾನು ಶಾಸಕನಾಗಿರುವುದು ಕೇವಲ ಹಿಂದೂ ಮತಗಳಿಂದ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಯತ್ನಾಳ್‍ರ ಈ ಹೇಳಿಕೆಯು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದನ್ನೂ ಓದಿ: ಎಂ.ಬಿ ಪಾಟೀಲ್ ಪರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬ್ಯಾಟಿಂಗ್

Leave a Reply

Your email address will not be published. Required fields are marked *