ಹೈದರಾಬಾದ್: ಬಾಹುಬಲಿ ಪ್ರಭಾಸ್ ನಟನೆ ಸಾಹೋ ಸಿನಿಮಾಗೆ ಕೊನೆಗೂ ನಾಯಕಿ ಯಾರೆಂಬದನ್ನು ಚಿತ್ರತಂಡ ರಿವೀಲ್ ಮಾಡಿದೆ. ಅಭಿಮಾನಿಗಳ ಬಹು ದಿನಗಳ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ. ಬಾಹುಬಲಿಗೆ ಜೊತೆಯಾಗಿ ಬಾಲಿವುಡ್ನ ಆಶೀಕಿ ಬೆಡಗಿ ಶ್ರದ್ಧಾ ಕಪೂರ್ ನಟಿಸಲಿದ್ದಾರೆ.
ಈಗಾಗಲೇ ತಮ್ಮ ಸಹಜ ನಟನೆಯ ಮೂಲಕ ಬಾಲಿವುಡ್ನಲ್ಲಿ ಚಾಪು ಮೂಡಿಸಿರುವ ಶ್ರದ್ಧಾ `ಸಾಹೋ’ಗೆ ಜೋಡಿಯಾಗಲಿದ್ದಾರೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಭಾರೀ ನಿರೀಕ್ಷೆ ಹುಟ್ಟಿಸಿದೆ. ಶ್ರದ್ಧಾ ಈ ಸಿನಿಮಾಗೆ ಸೂಕ್ತ ನಟಿ ಮತ್ತು ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲಿದ್ದಾರೆ ಎಂದು ಸಾಹೋ ಸಿನಿಮಾದ ನಿರ್ಮಾಪಕ ವಂಶಿ ಕೃಷ್ಣ ತಿಳಿಸಿದ್ದಾರೆ.
ಸಾಹೋ ಗೆ ನಾಯಕಿಯಾಗಿ ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್ ನೊಂದಿಗೆ ಮಿಂಚಿದ್ದ ಕನ್ನಡದ ಬೆಡಗಿ ಅನುಷ್ಕಾ ಶೆಟ್ಟಿ ಹೆಸರು ಕೇಳಿಬಂದಿತ್ತು. ಆದರೆ ಕೊನೆ ಕ್ಷಣದಲ್ಲಿ ಶ್ರದ್ಧಾ ಹೆಸರನ್ನ ಚಿತ್ರತಂಡ ಅಂತಿಮಗೊಳಿಸಿದೆ. ಆ್ಯಕ್ಷನ್ ಮತ್ತು ರೋಮ್ಯಾಂಟಿಕ್ ಕಥೆಯನ್ನು ಹೊಂದಿರುವದರಿಂದ ಅನುಷ್ಕಾ ಶೆಟ್ಟಿ ಹೆಸರನ್ನು ಕೊನೆ ಗಳಿಗೆಯಲ್ಲಿ ಕೈ ಬಿಡಲಾಗಿದೆ. ಅನುಷ್ಕಾಳ ತೂಕ ಹೆಚ್ಚಾಗಿರುವ ಚಿತ್ರದಿಂದ ಕೈಬಿಡಲಾಗಿದೆ ಎಂದು ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.
ಸಿನಿಮಾ ಸುಜೀತ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ವಂಶಿ ಕೃಷ್ಣ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಶಂಕರ್-ಇಹಾಸನ್-ಲಾಯ್ ಸಂಗೀತವಿದೆ. ಸಾಹೋ ತೆಲಗು,ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿಬರಲಿದೆ.
Confirmed! #Prabhas to pair up with #ShraddhaKapoor in #Saaho https://t.co/DmLqr5m8Gw pic.twitter.com/ayUeBoChKi
— dna After Hrs (@dnaAfterHrs) August 15, 2017
#Saaho is becoming huge day-by day! #ShraddhaKapoor has been locked opposite #Prabhas, for the action-drama.https://t.co/2Gfuro2Qys pic.twitter.com/bjJqfUMmjs
— FilmyGalaxy (@FilmyGalaxy) August 15, 2017