Connect with us

Districts

ವೇಶ್ಯಾವಾಟಿಕೆಯ ತಾಣಕ್ಕೆ ವಿದ್ಯಾರ್ಥಿನಿಯರ ಫೋಟೋ ಹಾಕಿದ ಕಿಡಿಗೇಡಿಗಳು- ದೂರು ದಾಖಲು

Published

on

ಮೈಸೂರು: ಲೋಕ್ಯಾಟೋ ಎಂಬ ಅನ್‍ಲೈನ್ ವೇಶ್ಯಾವಾಟಿಕೆಯ ವೆಬ್‍ಸೈಟ್ ನಲ್ಲಿ ಕಿಡಿಗೇಡಿಗಳು ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಫೋಟೋ ಮತ್ತು ಮೊಬೈಲ್ ನಂಬರ್ ಹಾಕಿದ್ದಾರೆ.

ಪರಿಣಾಮ, ವೆಬ್‍ಸೈಟ್ ನೋಡುವ ಕಾಮುಕರು ಆ ನಂಬರ್‍ಗಳಿಗೆ ಕರೆ ಮಾಡಿ ಕೆಟ್ಟದಾಗಿ ಮಾತಾಡುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯ ವಿಜ್ಞಾನ ವಿಭಾಗದ 10 ವಿದ್ಯಾರ್ಥಿನಿಯರ ಫೋಟೋ ಮತ್ತು ಮೊಬೈಲ್ ನಂಬರ್ ಅನ್ನು ವೆಬ್‍ಸೈಟ್‍ನಲ್ಲಿ ಅಪ್ ಲೋಡ್ ಮಾಡಲಾಗಿದೆ.

ನಮ್ಮ ನಂಬರ್ ಬೇರೆಯವರಿಗೆ ಹೇಗೆ ಸಿಕ್ಕಿತು, ಅದರಲ್ಲೂ ಈ ರೀತಿ ಯಾಕೆ ಕೆಟ್ಟದಾಗಿ ಮಾತಾಡುತ್ತಿದ್ದಾರೆ ಅಂತಾ ವಿದ್ಯಾರ್ಥಿನಿಯರ ಪರಿಶೀಲಿಸಿದಾಗ ಅವರ ಫೋಟೋ ಮತ್ತು ನಂಬರ್ ಅನ್‍ಲೈನ್ ವೇಶ್ಯಾವಾಟಿಕೆಯ ವೆಬ್‍ಸೈಟ್‍ನಲ್ಲಿ ಇರುವುದು ಗೊತ್ತಾಗಿದೆ. ತಕ್ಷಣ ಈ ವಿಚಾರವನ್ನು ವಿಭಾಗದ ಮುಖ್ಯಸ್ಥರ ಗಮನಕ್ಕೆ ತಂದು ನಂತರ ವಿವಿಯ ಕುಲಸಚಿವರ ಗಮನಕ್ಕೆ ತರಲಾಗಿದೆ. ಅವರ ಅನುಮತಿಯಂತೆ ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ವಿದ್ಯಾರ್ಥಿನಿಯರ ಫೋಟೋ ಮತ್ತು ಮೊಬೈಲ್ ನಂಬರ್ ಅನ್ನು ವೆಬ್‍ಸೈಟ್‍ಗೆ ಹಾಕಿದವರು ಯಾರು? ಇದು ಸಹಪಾಠಿಗಳ ಕೃತ್ಯವಾ? ಅನ್ನೋದು ಸ್ಪಷ್ಟವಾಗಬೇಕಿದೆ.