Connect with us

Bengaluru City

ನವೆಂಬರ್‌ನಿಂದ ಕಾಲೇಜು ಆರಂಭಕ್ಕೆ ಚಿಂತನೆ

Published

on

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ವಿದ್ಯಾಗಮ ಆರಂಭಿಸಿದ್ದ ಸರ್ಕಾರ ಮತ್ತದೇ ದುಡಿಕಿನ ನಿರ್ಧಾರಕ್ಕೆ ಮುಂದಾದಂತಿದೆ. ಪ್ರತಿ ದಿನ ಹೆಚ್ಚು ಕಡಿಮೆ 10 ಸಾವಿರ ಪ್ರಕರಣ ಬರುತ್ತಿದ್ದರೂ ರಾಜ್ಯದಲ್ಲಿ ನವೆಂಬರ್‌ ತಿಂಗಳಿನಿಂದ ಕಾಲೇಜು ಆರಂಭಿಸಲು ಚಿಂತನೆ ನಡೆದಿದೆ.

ನವೆಂಬರ್ 2-3ನೇ ವಾರದಲ್ಲಿ ಪಿಜಿ, ಡಿಗ್ರಿ, ಪಿಯುಸಿ ಕಾಲೇಜುಗಳ ಪ್ರಾರಂಭಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ. ಕಾಲೇಜು ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ತೆರೆ ಮರೆಯಲ್ಲೇ ಸಿದ್ಧತೆ ನಡೆಸಿದೆ. ಕೇಂದ್ರದ ಮಾರ್ಗಸೂಚಿ ಮತ್ತು ಆರೋಗ್ಯ ಇಲಾಖೆ ಮಾರ್ಗಸೂಚಿ ಅನ್ವಯಿಸಿ ಕಾಲೇಜು ಪ್ರಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.

.

ಕಾಲೇಜು ಪ್ರಾರಂಭದ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ ಸುಳಿವು ನೀಡಿದ್ದಾರೆ. ಶೀಘ್ರವೇ ಸಿಎಂ ಯಡಿಯೂರಪ್ಪ ಜೊತೆ ಸಭೆ ಮಾಡಿ ಕಾಲೇಜು ಪ್ರಾರಂಭದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳೋದಾಗಿ ಉನ್ನತ ಮೂಲಗಳು ತಿಳಿಸಿವೆ. ಸಿಎಂ ಓಕೆ ಅಂದ್ರೆ ಪ್ರಾರಂಭಿಕ ಹಂತವಾಗಿ ಕಾಲೇಜುಗಳನ್ನ ಪ್ರಾರಂಭಿಸಿ, ನಂತರ ಪರಿಸ್ಥಿತಿ ಅವಲೋಕನ ಮಾಡಿಕೊಂಡು ಹೈಸ್ಕೂಲ್ ತೆರೆಯುವ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ.

ಕಾಲೇಜು ಪ್ರಾರಂಭಿಸಬೇಕು ಎನ್ನುವ ಸರ್ಕಾರದ ನಿರ್ಧಾರಕ್ಕೆ ಕೆಲ ತಜ್ಞರು ಸುತರಾಂ ಒಪ್ಪುತ್ತಿಲ್ಲ. ಈ ವರ್ಷ ಕಾಲೇಜು ಓಪನ್ ಮಾಡುವುದು ಬೇಡವೇ ಬೇಡ ಎಂದು ತಜ್ಞರು ಹೇಳಿದ್ರೆ, ಇನ್ನೂ ಕೆಲ ತಜ್ಞರು ಕಾಲೇಜು ಆರಂಭಿಸಿ ಪರವಾಗಿಲ್ಲ. ಆದ್ರೆ ಸರ್ಕಾರ ಕಠಿಣವಾಗಿ ಎಚ್ಚರಿಕೆಯಿಂದ ಮುಂಜಾಗೃತಾ ಕ್ರಮ ವಹಿಸಬೇಕು  ಎಂದಿದ್ದಾರೆ.

Click to comment

Leave a Reply

Your email address will not be published. Required fields are marked *