Belgaum
ಮಣ್ಣು ತೆಗೆಯುವಾಗ ಗುಡ್ಡ ಕುಸಿತ – ಇಬ್ಬರು ಸಾವು

ಚಿಕ್ಕೋಡಿ: ಬೆಳಗಾವಿ ಜೆಲ್ಲೆಯ ಹುಕ್ಕೇರಿ ತಾಲೂಕಿನ ಬಿರನೋಳಿ ಗ್ರಾಮದ ಕೆಂಪಗುದ್ದಿ ಗುಡ್ಡದ ಬದಿಯಲ್ಲಿ ಮಣ್ಣು ಶೇಖರಣೆ ಮಾಡುವ ಸಮಯದಲ್ಲಿ ಗುಡ್ಡದ ಮಣ್ಣು ಕುಸಿದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಯಲ್ಲಪ್ಪಾ ಹರಿಜನ (22) ಹಾಗೂ ಹಾಲಪ್ಪಾ ಗುರವ (24) ಮೃತ ಯುವಕರಾಗಿದ್ದಾರೆ. ಬಿರನೋಳಿ ಗ್ರಾಮದ ಇವರು ಗುಡ್ಡದ ಬದಿಯಲ್ಲಿ ಮಣ್ಣು ಶೇಖರಣೆ ಮಾಡುವ ವೇಳೆ ಗುಡ್ಡ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ.
ಮೊದಲು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರಸ್ತೆಗೋಸ್ಕರ ಕೆಂಪು ಮಣ್ಣು ತೆಗೆದಿದ್ದು ಮಣ್ಣಿನ ದಣ್ಣೆಗಳು ಉಳಿದಕೊಂಡಿದ್ದವು. ಇದನ್ನು ತಮ್ಮ ಸ್ವಂತ ಕೆಲಸಕ್ಕೆ ಮಣ್ಣು ತೆಗೆಯುವಾಗ ಗುಡ್ಡ ಕತ್ತರಿಸಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಯಮಕನಮರಡಿ ಪಿಎಸ್ಐ ರಮೇಶ ಪಾಟೀಲ ಸ್ಥಳಕ್ಕೆ ಧಾವಿಸಿದ್ದು, ಓರ್ವ ಯುವಕನ ಶವ ಹೊರ ತೆಗೆದು ಮತ್ತೋರ್ವನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
