Tuesday, 21st January 2020

Recent News

ಸಿದ್ದರಾಮಯ್ಯ, ಶೋಭಾ ಮಧ್ಯೆ `ಕೋ-ಜಾ’ ಸಮರ

ಬೆಂಗಳೂರು: ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಟ್ವಿಟರ್ ನಲ್ಲಿ `ಕೋ-ಜಾ’ ಸಮರ ನಡೆದಿದೆ.

ಬಿಜೆಪಿಯ ಅಹೋರಾತ್ರಿ ಪ್ರತಿಭಟನೆಯ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಅವರು ಮುಖ್ಯಮಂತ್ರಿ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಬಳಿಕ ಟ್ವೀಟ್ ಮಾಡಿದ್ದ ಶೋಭಾ ಕರಂದ್ಲಾಜೆ `ಕೋ-ಜಾ’ ಸರ್ಕಾರ ಜಿಂದಾಲ್‍ಗೆ ಪುಡಿಗಾಸಿಗೆ ಬೆಲೆ ಬಾಳುವ ಭೂಮಿ ಮಾರಾಟ ಮಾಡುತ್ತಿದೆ. ಈ ಕುರಿತು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮೌನ ವಹಿಸಿದ್ದಾರೆ. ನಿಮ್ಮ ಮೌನ ಯಾಕೆ ಅಂತ ರಾಜ್ಯ ಕೇಳುತ್ತಿದೆ ಎಂದು ಅಣಕವಾಡಿದ್ದರು.

ಇದಕ್ಕೆ ಕಿಡಿಕಾರಿರುವ ಸಿದ್ದರಾಮಯ್ಯ, “ಶೋಭಾ ಅವರೇ, ನಿಮ್ಮ ಯೋಜನೆ ರೂಪಿಸುವ ಕೌಶಲ್ಯ ನಿಮ್ಮ ಪದ ಬಳಕೆಯಷ್ಟೇ ಚೆನ್ನಾಗಿರುತ್ತಿದ್ರೆ, ನೀವು ಸಹ `ಮೈತ್ರಿ’ ಯೋಜನೆ ಜಾರಿ ಮಾಡುತ್ತಿದ್ದೀರಿ. ಅಸಾಂವಿಧಾನಿಕ ಪದಗಳ ಬಳಕೆಯನ್ನಾದ್ರೂ ಕಡಿಮೆ ಮಾಡಲು ಪ್ರಯತ್ನಿಸಿ. ನೀವು ಬಳಸುವ ಪದಗಳು ಒಂದು ವರ್ಗಕ್ಕೆ ನೋವುಂಟು ಮಾಡಿವೆ” ಎಂದಿದ್ದರು.

ಇದಕ್ಕೆ ಮತ್ತೆ ಪ್ರತಿಕ್ರಿಯಿಸಿರೋ ಶೋಭಾ ಕರಂದ್ಲಾಜೆ, ಜಿಂದಾಲ್ ಜೊತೆಗಿನ ಕೋ-ಜಾ ಸರ್ಕಾರದ ನಂಟಿನ ವಿರುದ್ಧ ಬಿಜೆಪಿ ನಾಯಕರು ಎರಡು ದಿನದ ಅಹೋರಾತ್ರಿ ಧರಣಿ ಆರಂಭಿಸಿದ್ದೇವೆ. ಜಿಂದಾಲ್‍ಗೆ ಭೂಮಿ ನೀಡುವ ಆದೇಶ ವಾಪಸ್ ಹಾಗೂ ಐಎಂಎ ಹಗರಣದ ಸಿಬಿಐ ತನಿಖೆಗೆ ಒತ್ತಾಯಿಸಿ ಹಿರಿಯ ನಾಯಕ ಯಡಿಯೂರಪ್ಪ ನೇತೃತ್ವದಲ್ಲಿ ನಮ್ಮ ನಾಯಕರು ರಸ್ತೆಯಲ್ಲಿ ಮಲಗಿದ್ದಾರೆ ಎಂದಿದ್ದಾರೆ.

Leave a Reply

Your email address will not be published. Required fields are marked *