ತಲೆಯಲ್ಲಿ “ಗಂಧದಗುಡಿ” ಹೇರ್ ಸ್ಟೈಲ್ – ಪ್ರಚಾರಕ್ಕಿಳಿದ ಕಾಫಿನಾಡು ಚಂದು

By
1 Min Read

ಚಿಕ್ಕಮಗಳೂರು: ತನ್ನ ವಿಭಿನ್ನ ಶೈಲಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಗೀತೆಯನ್ನು ಹಾಡುವ ಮೂಲಕ ರಾಜ್ಯದಲ್ಲಿ ಫೇಮಸ್ ಆಗಿರುವ ಕಾಫಿನಾಡು ಚಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅಪ್ಪಟ ಅಭಿಮಾನಿ. ಸದ್ಯ ಅಪ್ಪು ಅಭಿನಯದ ಬಹುನಿರೀಕ್ಷಿತ ಗಂಧದ ಗುಡಿ ಸಿನಿಮಾ ಬಿಡುಗಡೆಗೆ ಇನ್ನೂ ಒಂದೇ ದಿನ ಬಾಕಿ. ಈ ನಡುವೆ ಕಾಫಿ ನಾಡು ಚಂದು (Coffee Nadu Chandu) ತಮ್ಮ ತಲೆಯ ಹಿಂಭಾಗದ ಕೂದಲಿನಲ್ಲಿ ಗಂಧದ ಗುಡಿ (Gandhad Gudi) ಎಂದು ಕೆತ್ತಿಸಿಕೊಂಡು ಚಿತ್ರದ ಪ್ರಚಾರಕ್ಕೆ ಮುಂದಾಗಿದ್ದಾರೆ.

ಹೌದು, ಕಾಫಿ ನಾಡು ಚಂದು ತಲೆಯ ಹಿಂದೆ ಗಂಧದಗುಡಿ ಎಂದು ಕೆತ್ತಿಸಿಕೊಂಡು, ಚಿಕ್ಕಮಗಳೂರು (Chikkamagaluru) ನಗರದಲ್ಲಿ ಓಡಾಡುತ್ತಾ ಚಿತ್ರಕ್ಕಾಗಿ ಪ್ರಚಾರ ನಡೆಸುತ್ತಿದ್ದಾರೆ. ರಸ್ತೆಯಲ್ಲಿ ಸಿಕ್ಕವರೆಗೆ ಚಿತ್ರವನ್ನು ನೋಡುವಂತೆ ಪ್ರೇರೆಪಿಸುತ್ತಿದ್ದಾರೆ. ಈಗಾಗಲೇ ಪುನೀತಣ್ಣ ಸಾಕಷ್ಟು ಬೆಳೆದಿದ್ದಾರೆ. ಅವರು ಮೇಲಿಂದ ನೋಡುತ್ತಿರುತ್ತಾರೆ. ನಾವು ಸಿನಿಮಾ ನೋಡಿದರೆ ಅವರಿಗೆ ಖುಷಿಯಾಗುತ್ತದೆ. ಹಾಗಾಗಿ ಎಲ್ಲರೂ ತಪ್ಪದೇ ಸಿನಿಮಾ ನೋಡಿ ಎಂದು ಮನವಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇಲ್ಲ: ಶ್ರೀರಾಮುಲು

ಓಂ, ಜನುಮದ ಜೋಡಿ ಚಿತ್ರ ವರ್ಷಗಳ ಕಾಲ ಓಡಿದೆ. ಈ ಚಿತ್ರ ಕೂಡ ವರ್ಷಗಳ ಕಾಲ ಓಡಬೇಕು. ಹಾಗಾಗಿ, ಎಲ್ಲರೂ ಸಿನಿಮಾ ನೋಡಿ ಎಂದು ನಿನಂತಿಸಿದ್ದಾರೆ. ಒಟ್ಟಾರೆ ಗಂಧದ ಗುಡಿ ಎಂದು ಬರೆಸಿಕೊಂಡು ಹೊಸ ಹೇರ್ ಸ್ಟೈಲ್‍ನಲ್ಲಿ ಕಾಫಿನಾಡು ಚಂದು ಓಡಾಡುತ್ತಿರುವ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನೂ ಓದಿ: ನನ್‌ ಗರ್ಲ್‍ಫ್ರೆಂಡ್ ಜೊತೆ ಮಾತಡ್ಬೇಡ – ಸ್ನೇಹಿತನನ್ನೇ ಹತ್ಯೆಗೈದು ಚರಂಡಿಗೆ ಎಸೆದ

Live Tv
[brid partner=56869869 player=32851 video=960834 autoplay=true]

Share This Article
Exit mobile version