Sunday, 25th August 2019

Recent News

ಶೂ ಹಾಕುವ ಮುನ್ನ ಎಚ್ಚರ – 7 ಇಂಚು ಶೂ ಒಳಗೆ 5 ಅಡಿಯ ನಾಗರಹಾವು

ಬೆಂಗಳೂರು: ಶೂ ಹಾಕುವ ಮುನ್ನ ಎಚ್ಚರವಾಗಿರಿ.. ಯಾಕೆಂದರೆ ಮನೆಯ ಮುಂದೆ ಬಿಟ್ಟಿರುವ ಶೂ ಒಳಗೆ ನಾಗರಹಾವು ಇರುವುದು ನೆಲಮಂಗಲ ಸಮೀಪದ ನಾರಾಯಣಪ್ಪನ ಪಾಳ್ಯದಲ್ಲಿ ಕಂಡು ಬಂದಿದೆ.

ಗ್ರಾಮದ ಮೂರ್ತಿ ಎಂಬವವರ ಮನೆಯಲ್ಲಿ ನಾಗರ ಹಾವು ಪತ್ತೆಯಾಗಿದೆ. ಮನೆಯ ಮುಂದೆ ಬಿಟ್ಟಿದ್ದ ಶೂ ಒಳಗೆ ಸುಮಾರು 5 ಅಡಿಯ ನಾಗರಹಾವು ಪತ್ತೆಯಾಗಿದ್ದು, ನಾಗರಹಾವು ಕಂಡು ಮನೆಯವರು ಗಾಬರಿಯಾಗಿದ್ದು, ತಕ್ಷಣ ನೆಲಮಂಗಲದ ಉರಗ ರಕ್ಷಕ ಸ್ನೇಕ್ ಲೋಕೇಶ್‍ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

ಮಾಹಿತಿ ತಿಳಿದ ಲೋಕೇಶ್ ಬಂದು ಹಾವನ್ನು ರಕ್ಷಣೆ ಮಾಡಿದ್ದಾರೆ. 7 ಇಂಚು ಶೂ ಒಳಗೆ 5 ಅಡಿ ಉದ್ದದ ಹಾವು ಕಂಡು ಜನರು ಆತಂಕಗೊಂಡಿದ್ದರು. ಬಳಿಕ ದೈತ್ಯ ನಾಗರಹಾವು ರಕ್ಷಣೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಅವಸರದಿಂದ ಕೆಲಸಕ್ಕೆ ಹೋಗುವ ವೇಳೆ ಒಮ್ಮೆ ನಿಮ್ಮ ಶೂಗಳ ಬಗ್ಗೆ ಎಚ್ಚರ ವಹಿಸಲೇಬೇಕು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *