Friday, 19th July 2019

ಜನ ದೋಸ್ತಿ ನಾಯಕರನ್ನು ಕಲ್ಲಿನಿಂದ ಹೊಡೀತಾರೆ: ಶ್ರೀರಾಮುಲು

– ಕುಮಾರಸ್ವಾಮಿ ಲಾಟರಿ ಸಿಎಂ
– ಒಂದು ಆರೋಪ ಸಾಬೀತು ಪಡಿಸಿದರೆ ರಾಜೀನಾಮೆ

ಬಳ್ಳಾರಿ: ಮಾಜಿ ಸಿಎಂ ಸಿದ್ದರಾಮಯ್ಯ ಮುಂದೆ ನಾನೇ ಸಿಎಂ ಎಂದು ಹೇಳುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಈಗಾಗಲೇ ಸಿಎಂ ಆಗಿದ್ದು, ಇಂತಹ ಸಂದರ್ಭದಲ್ಲಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಅಲ್ಲದೇ ನಾನೇ ಮೋದಿಗಿಂತ ದೊಡ್ಡವ ಎಂದು ಹೇಳುತ್ತಾರೆ. ಆದರೆ ಸಿದ್ದರಾಮಯ್ಯ ಅವರು ಸರಿಯಾದ ಭಾಷೆ ಮಾತನಾಡುವುದನ್ನು ಕಲಿಯಬೇಕು ಎಂದು ಶಾಸಕ ಶ್ರೀರಾಮುಲು ಕಿಡಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ಶ್ರೀರಾಮುಲು, ರಾಜ್ಯದಲ್ಲಿ ಲೋಕಸಭೆ ಚುನಾವಣೆ ನಂತರ ಬಹಳಷ್ಟು ಬದಲಾವಣೆ ಆಗುತ್ತದೆ. ಸರಕಾರ ತಾನೇ ಬಿದ್ದು ಹೋಗುತ್ತದೆ. ಕುಮಾರಸ್ವಾಮಿ ಮಂಡ್ಯ ಗೆದ್ದರೆ, ಇಂಡಿಯಾ ಗೆದ್ದಂತೆ ಎಂದು ವರ್ತನೆ ಮಾಡುತ್ತಿದ್ದು, ಮಂಡ್ಯ ಕ್ಷೇತ್ರ ಬಿಟ್ಟು ಈಗ ಹೊರ ಬಂದಿದ್ದಾರೆ. ದೇಶಕ್ಕೆ ಬೇಕಾಗಿದ್ದು 24 ತಾಸು ಕೆಲಸ ಮಾಡುವ ಪಿಎಂ, ವಿನಃ ರಬ್ಬರ್ ಸ್ಟಾಂಪ್ ರೀತಿ ಕೆಲಸ ಮಾಡುವವರು ಅಗತ್ಯವಿಲ್ಲ ಎಂದರು.

ಇದೇ ವೇಳೆ ಶ್ರೀರಾಮುಲು ಗಣಿ ಕಳ್ಳ ಎಂಬ ಆರೋಪಕ್ಕೆ ಸಿಎಂ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಅವರು, ನನ್ನ ಮೇಲೆ ಒಂದೇ ಒಂದು ಆರೋಪ ತೋರಿಸಿದರೆ ರಾಜಕಾರಣದಿಂದ ನಿವೃತ್ತಿ ಪಡೆಯುವೆ ಎಂದು ಸವಾಲು ಎಸೆದರು. ಬುದ್ಧಿ ಇಲ್ಲದ ಸಿಎಂ, ಡಿಕೆಶಿ, ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎಂದು ಹೇಳುತ್ತಾರೆ. ಸಿಎಂ ಕುರ್ಚಿ ಆಟದ ವಸ್ತು ಅಲ್ಲ. ಮುಂದಿನ ದಿನಗಳಲ್ಲಿ ದೋಸ್ತಿ ನಾಯಕರನ್ನು ಪ್ರಚಾರ ನಡೆಸಿದರೆ ಜನ ಕಲ್ಲಿನಿಂದ ಹೊಡೀತಾರೆ ಎಂದರು.

ರಾಜ್ಯದ 24 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ಇದೆ. ಕಾಂಗ್ರೆಸ್ ಪಕ್ಷಕ್ಕೆ ಸೋಲಿನ ಭೀತಿ ಎದುರಾಗಿದ್ದು, ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ದೋಸ್ತಿ ಪಕ್ಷ ಮೇಲೆ ಮಾತ್ರ ಕೆಳಗಡೆ ಹಂತದ ಕಾರ್ಯಕರ್ತರಲ್ಲಿ ಇಲ್ಲ. ರಾಜ್ಯದಲ್ಲಿ ಲೋಕಸಭೆ ಚುನಾವಣೆ ನಂತರ ಬಹಳಷ್ಟು ಬದಲಾವಣೆ ಆಗುತ್ತದೆ. ಸರಕಾರ ತಾನೇ ಬಿದ್ದೋಗುತ್ತೆ. ಉಗ್ರಪ್ಪ ಅವರು ಚುನಾವಣೆಯಲ್ಲಿ ಮತದಾನ ಮಾಡಿಲ್ಲ, ಅವರಿಗೆ ಕಾಮನ್ ಸೆನ್ಸ್ ಕೂಡ ಇಲ್ಲ. ಜನರಿಗೆ ಉಗ್ರಪ್ಪ ವಿಚಾರವಾಗಿ ಇನ್ನು ಬಹಳ ತಿಳಿಯಬೇಕಾಗಿದೆ ಎಂದರು.

Leave a Reply

Your email address will not be published. Required fields are marked *