Connect with us

Districts

ಮಾದರಿ OMR ಶೀಟ್‍ನಲ್ಲಿ ಬಿಎಸ್‍ವೈ ಒಡೆತನದ ಶಾಲೆಯ ಜಾಹೀರಾತು ಆರೋಪ

Published

on

Share this

– ಕಾಂಗ್ರೆಸ್ ಮುಖಂಡರ ವಿರೋಧ, ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತ

ಶಿವಮೊಗ್ಗ: ಸಿಎಂ ಒಡೆತನದ ಶಾಲಾ ಮತ್ತು ಕಾಲೇಜು ಜಾಹೀರಾತು ಇರುವ ಮಾದರಿ ಒಎಂಆರ್ ಶೀಟ್‍ನ್ನು ಎಲ್ಲಾ ಶಾಲೆಗಳಿಗೆ ವಿತರಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕಾಂಗ್ರೆಸ್ ಮುಖಂಡರು, ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ನೀಡಲಾದ ಮಾದರಿ ಒಎಂಆರ್ ಶೀಟ್‍ನಲ್ಲಿ ಖಾಸಗಿ ಶಾಲೆ, ಕಾಲೇಜುಗಳಿಗೆ ಸಂಬಂಧಿಸಿದ ಜಾಹೀರಾತು ಇದ್ದು, ಖಾಸಗಿ ಶಾಲೆಯ ಜಾಹೀರಾತು ಸರ್ಕಾರವೇ ಪ್ರಕಟಿಸಿದಂತಾಗಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ಹೆಚ್.ಸಿ. ಯೋಗೀಶ್ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲಾದ್ಯಂತ ಸುಮಾರು 22 ಸಾವಿರ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿದ್ದು, ಈ ಬಾರಿ ಪರೀಕ್ಷೆಯಲ್ಲಿ ಮಲ್ಟಿಪಲ್ ಆಪ್ಷನಲ್ ಪರೀಕ್ಷೆ ಇರುತ್ತದೆ. ಒಎಂಆರ್ ಶೀಟ್ ನಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗಬಾರದು ಎಂಬ ಕಾರಣದಿಂದ ಪರೀಕ್ಷೆಗೆ ಮೊದಲೇ ಮಾದರಿ ಒಎಂಆರ್ ಶೀಟ್ ವಿತರಿಸಲಾಗಿದೆ. ಆದರೆ ಈ ಶೀಟ್‍ನ ಹಿಂಬದಿಯಲ್ಲಿ ಖಾಸಗಿ ಶಾಲೆ ಜಾಹೀರಾತು ಪ್ರಕಟಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದಿಂದ ನೀಡಲಾದ ಒಎಂಆರ್ ಶೀಟ್ ನಲ್ಲಿ ಖಾಸಗಿ ಶಾಲೆಯ ಜಾಹೀರಾತು ಕಾನೂನು ಬಾಹಿರವಾಗಿದ್ದು, ಸರ್ಕಾರದಿಂದಲೇ ಎಲ್ಲಾ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಒಎಂಆರ್ ಶೀಟ್ ನೀಡಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ:ಅನ್‍ಲಾಕ್ ಬಳಿಕ ಸಹಜ ಸ್ಥಿತಿಯತ್ತ ಸಾರಿಗೆ

Click to comment

Leave a Reply

Your email address will not be published. Required fields are marked *

Advertisement