Connect with us

Bengaluru City

ಹಾಲಿ ಖಾತೆ ಬೇಡ, ಬೇರೆ ಖಾತೆ ಕೊಡಿ – ಹಳೆಯ ಬಯಕೆಗೆ ಮತ್ತೆ ಜೀವ

Published

on

– ಕೆಲವು ಹಿರಿಯ ಸಚಿವರಿಂದ ಮನವಿಗೆ ನಿರ್ಧಾರ
– ಬೇಡಿಕೆ ಈಡೇರಿಸಿಕೊಳ್ಳಲು ಮುಂದಾದ ಸೀನಿಯರ್ಸ್

ಬೆಂಗಳೂರು: ಹೈಕಮಾಂಡ್ ಅನುಮತಿ ನೀಡಿದರೆ ದೀಪಾವಳಿಯ ನಂತರ ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟಕ್ಕೆ ಹೊಸ ಮಂತ್ರಿಗಳು ಸೇರ್ಪಡೆಯಾಗಲಿದ್ದಾರೆ. ಸಂಪುಟ ಪುನಾರಚನೆಯೋ ಅಥವಾ ವಿಸ್ತರಣೆಯೋ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಆದರೆ ಸಂಪುಟ ಪುನಾರಚನೆ ಮಾಡುವಂತೆ ಹೈಕಮಾಂಡ್ ಸೂಚಿಸಿದರೆ ಬಿಎಸ್‍ವೈ ಧರ್ಮಸಂಕಟಕ್ಕೆ ಸಿಲುಕಲಿದ್ದಾರೆ.

ಸಂಪುಟದಲ್ಲಿ ಹಿರಿಯ ಕುರ್ಚಿಗೆ ಕೈ ಹಾಕುವಂತಿಲ್ಲ. ಆದರೆ ಹಿರಿಯರನ್ನು ಬಿಟ್ಟುಬಿಡಿ ಎನ್ನುವುದು ಯಡಿಯೂರಪ್ಪನವರ ಪ್ಲ್ಯಾನ್. ಸಾಫ್ಟ್ ಸಚಿವರನ್ನು ಮಾತ್ರ ಸಂಪುಟದಿಂದ ಕೈಬಿಟ್ಟು ಜಾತಿ ಆಧಾರಿತ, ಪ್ರಾದೇಶಿಕ ಲೆಕ್ಕಾಚಾರ ಹಾಕಿ ಸಂಪುಟ ಪುನಾರಚನೆ ಮಾಡಲು ಬಿಎಸ್‍ವೈ ಮುಂದಾಗಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.  ಇದನ್ನೂ ಓದಿ: ಸಂಪುಟ ಸರ್ಜರಿಗೆ ಸಿಎಂ ಬಳಿಯಿದೆ ಮೂರು ಸೂತ್ರ – ಯಾರು ಇನ್‌? ಯಾರು ಔಟ್‌?

ಹಿರಿಯರಿಗೆ ಕೊಕ್ ಕೊಡುವುದಾದರೆ `ಹೈ’ನಿಂದಲೇ ಲಿಸ್ಟ್ ರೆಡಿಯಾಗಬೇಕು. ಹೈಕಮಾಂಡ್ ಲಿಸ್ಟ್ ಕಳುಹಿಸಿದರೆ ಮಾತ್ರ ಹಿರಿಯರಿಗೆ ಕೊಕ್ ಕೊಡಬಹುದು. ಇಲ್ಲದಿದ್ದರೆ ಹಿರಿಯರ ಕೈಬಿಡುವ ಸಾಹಸಕ್ಕೆ ಯಡಿಯೂರಪ್ಪ ಕೈ ಹಾಕದೇ ಕಿರಿಯರು, ಸಾಫ್ಟ್ ಇರುವ ಸಚಿವರ ಕುರ್ಚಿಗೆ ಮಾತ್ರ ಹೈಹಾಕುವ ಸಾಧ್ಯತೆಯಿದೆ. ಸಂಪುಟ ಪುನಾರಚನೆಗಿಂತ ವಿಸ್ತರಣೆಯೇ ಸಾಕು ಅಂತಿದೆ ಬಿಜೆಪಿ ಮೂಲಗಳು.

ಈ ನಡುವೆ ಕೆಲ ಸಚಿವರಿಗೆ ಸಂಪುಟದಿಂದ ಔಟ್ ಆಗೋ ಟೆನ್ಶನ್ ಇದ್ದರೆ ಕೆಲ ಸಚಿವರು ಖಾತೆ ಬದಲಾವಣೆ ಮಾಡಲು ಬಯಸಿದ್ದಾರೆ. ಇದರ ಜೊತೆ ಕೆಲವರು ಹೆಚ್ಚುವರಿ ಖಾತೆಗೆ ಬೇಡಿಕೆ ಇಟ್ಟಿದ್ದಾರೆ. ಒಂದೂವರೆ ವರ್ಷದಿಂದ ಕೆಲ ಸಚಿವರು ಬಯಸದ ಖಾತೆ ವಹಿಸಿಕೊಂಡಿದ್ದಾರೆ. ಈಗ ಸಂಪುಟ ಸರ್ಜರಿ ಹಿನ್ನೆಲೆಯಲ್ಲಿ ಹಿರಿಯ ಸಚಿವರು ಖಾತೆ ಬದಲಾವಣೆಗೆ ಮುಂದಾಗಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಯಾರಿಗೆ ಯಾವ ಖಾತೆ ಮೇಲೆ ಕಣ್ಣು?
ಗೃಹಸಚಿವರಾಗಿರುವ ಬೊಮ್ಮಾಯಿ ಇಂಧನ ಖಾತೆ ಮೇಲೆ ಕಣ್ಣು ಇಟ್ಟಿದ್ದರೆ ಕೈಗಾರಿಕಾ ಖಾತೆಯನ್ನು ನೋಡಿಕೊಳ್ಳುತ್ತಿರುವ ಜಗದೀಶ್ ಶೆಟ್ಟರ್ ಗ್ರಾಮೀಣಾಭಿವೃದ್ಧಿ ಮತ್ತು ಕಂದಾಯ ಇಲಾಖೆ ಮೇಲೆ ಕಣ್ಣಿಟ್ಟಿದ್ದಾರೆ.

ಆರ್. ಅಶೋಕ್ ಅವರು ಹಾಲಿ ಕಂದಾಯ ಸಚಿವರಾಗಿದ್ದು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಬಯಸಿದ್ದಾರೆ. ಸದ್ಯ ಸಿಎಂ ಯಡಿಯೂರಪ್ಪನವರು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ನೋಡಿಕೊಳ್ಳುತ್ತಿದ್ದಾರೆ.

ವಸತಿ ಇಲಾಖೆಯನ್ನು ನೋಡಿಕೊಳ್ಳುತ್ತಿರುವ ವಿ.ಸೋಮಣ್ಣ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಮೇಲೆ ಕಣ್ಣು ಹಾಕಿದ್ದರೆ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಕಂದಾಯ ಇಲಾಖೆ ಮೇಲೆ ಗಮನ ಹಾಕಿದ್ದಾರೆ.

ಶ್ರೀರಾಮುಲು ಅವರು ಸದ್ಯ ಸಮಾಜ ಕಲ್ಯಾಣ ಇಲಾಖೆಯನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ ಈಗ ಹೆಚ್ಚುವರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ಕೇಳಿದ್ದಾರೆ. ಹಾಲಿ ಅರಣ್ಯ ಸಚಿವ ಆನಂದ್ ಸಿಂಗ್ ಗಣಿ/ಭೂವಿಜ್ಞಾನ ಇಲಾಖೆಯ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

Click to comment

Leave a Reply

Your email address will not be published. Required fields are marked *