Connect with us

Bengaluru City

ಬಜೆಟ್ ಬಳಿಕವೂ ಮಠ ಮಂದಿರಗಳಿಗೆ ಯಡಿಯೂರಪ್ಪ ಭರ್ಜರಿ ಗಿಫ್ಟ್ – ತವರು ಜಿಲ್ಲೆಗೆ ಭರಪೂರ ಕೊಡುಗೆ

Published

on

– 436 ದೇಗುಲ ಮಠಗಳಿಗೆ 80 ಕೋಟಿ 25 ಲಕ್ಷ ಹಂಚಿಕೆ
– ಯಾವ ಮಠಕ್ಕೆ ಎಷ್ಟು ಅನುದಾನ?

ಬೆಂಗಳೂರು: ಬಜೆಟ್ ಬಳಿಕ ಸಿಎಂ ಬಿ.ಎಸ್.ಯಡಿಯೂರಪ್ಪ ಮಠ, ಮಂದಿರಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ತವರು ಜಿಲ್ಲೆ ಶಿವಮೊಗ್ಗಕ್ಕೆ ಭರಪೂರ ಕೊಡುಗೆ ನೀಡಿದ್ದಾರೆ. ಈ ಮೂಲಕ ಮೀಸಲಾತಿ ಕೇಳಿದ ಸಮುದಾಯಗಳ ಸಮಾಧಾನಕ್ಕೆ ಸಿಎಂ ಮುಂದಾಗಿದ್ದಾರೆ ಅನ್ನೋ ಚರ್ಚೆಗಳು ರಾಜಕೀಯ ಅಂಗಳದಲ್ಲಿ ಚರ್ಚೆ ಆರಂಭಗೊಂಡಿವೆ. 436 ದೇಗುಲ ಮಠಗಳಿಗೆ 80 ಕೋಟಿ 25 ಲಕ್ಷ ಹಂಚಿಕೆ ಮಾಡಲಾಗಿದೆ.

ಉಪಚುನಾವಣೆಯ ಘೋಷಣೆಯಾದ ಬೆಳಗಾವಿ ಜಿಲ್ಲೆಗೆ 7 ಕೋಟಿ 78 ಲಕ್ಷ ಹಂಚಿಕೆ ಮಾಡಲಾಗಿದೆ. ಗೋಕಾಕ್ ನಗರ ಹಿಂದೂ ಕ್ಷತ್ರೀಯ ಸಭಾದ ಸಭಾಭವನ ನಿರ್ಮಾಣಕ್ಕೆ 1 ಕೋಟಿ, ಉಪಚುನಾವಣೆ ಇರುವ ಬಸವಕಲ್ಯಾಣದ ಹಾವಗಿಲಿಂಗೇಶ್ವರ ಹಿರೇಮಠಕ್ಕೆ 10 ಲಕ್ಷ ರೂ. ಅನುದಾನ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆ 146 ಮಠ, ಮಂದಿರಗಳಿಗೆ 15 ಕೋಟಿ 33 ಲಕ್ಷ ಹಂಚಿಕೆ ಮಾಡಿದ್ರೆ, ಸ್ವಕ್ಷೇತ್ರ ಶಿಕಾರಿಪುರಕ್ಕೆ 2 ಕೋಟಿ 50 ಲಕ್ಷ ರೂ. ನೀಡಲಾಗಿದೆ. ಆದ್ರೆ ಕಾಂಗ್ರೆಸ್ ನ ಸಂಗಮೇಶ್ವರ್ ಪ್ರತಿನಿಧಿಸುವ ಭದ್ರಾವತಿಗೆ ಯಾವುದೇ ಅನುದಾನ ನೀಡಿಲ್ಲ.

ಹಾಸನಕ್ಕೆ 2 ಕೋಟಿ 31 ಲಕ್ಷ ರೂ. ನೀಡಿದ್ರೆ, ಮಾಜಿ ಸಚಿವರ ಹೆಚ್.ಡಿ.ರೇವಣ್ಣ ಕ್ಷೇತ್ರಕ್ಕೆ ಹೊಳೆನರಸೀಪುರ ಕ್ಷೇತ್ರಕ್ಕೆ ಅನುದಾನ ಶೂನ್ಯ. ಬಾಗಲಕೋಟೆ ಜಿಲ್ಲೆಗೆ 1 ಕೋಟಿ 5 ಲಕ್ಷ ನೀಡಲಾಗಿದ್ದು, ಆದ್ರೆ ಸಿದ್ದರಾಮಯ್ಯ ಕ್ಷೇತ್ರಕ್ಕೆ ಕೇವಲ 5 ಲಕ್ಷ ರೂ. ನೀಡಲಾಗಿದೆ.

ದಾವಣಗೆರೆ ಜಿಲ್ಲೆಗೆ 2 ಕೋಟಿ 89 ಲಕ್ಷ ನೀಡಲಾಗಿದ್ದು, ಅದರಲ್ಲಿ ಆಪ್ತ ರೇಣುಕಾಚಾರ್ಯ ಹೊನ್ನಾಳಿ ಕ್ಷೇತ್ರವೊಂದಕ್ಕೆ 2 ಕೋಟಿ 64 ರೂ. ಅನುದಾನ ನೀಡಿದ್ದಾರೆ. ಹೊನ್ನಾಳಿಯ ಹಿರೇಕಲ್ಮಠಕ್ಕೆ ಬರೋಬ್ಬರಿ 1 ಕೋಟಿ ರೂ. ನೀಡಿದ್ದಾರೆ. ವಿಜಯಪುರ ಜಿಲ್ಲೆಗೆ 2 ಕೋಟಿ 2 ಲಕ್ಷ ರೂ. ನೀಡಲಾಗಿದ್ದು, ಅದರಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಕ್ಷೇತ್ರಕ್ಕೆ 1 ಕೋಟಿ ಮೀಸಲಿರಿಸಲಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುವ ಕ್ಷೇತ್ರಕ್ಕೆ 1 ಕೋಟಿ ರೂ. ನೀಡಲಾಗಿದೆ.

ಕುಣಿಗಲ್ ನಲ್ಲಿರುವ ರಂಭಾಪುರಿ ಶಾಖಾಮಠಕ್ಕೆ 1 ಕೋಟಿ, ನೊಣವಿನಕೆರೆ ಕ್ಷೇತ್ರಕ್ಕೆ 50 ಲಕ್ಷ ರೂ. ನೀಡಲಾಗಿದೆ. ಬೆಂಗಳೂರಿನ ನಿಡುಮಾಮಿಡಿ ಮಠಕ್ಕೆ 25 ಲಕ್ಷ ರೂ. ನೀಡಲಾಗಿದೆ.

Click to comment

Leave a Reply

Your email address will not be published. Required fields are marked *