Tuesday, 19th November 2019

ಕನ್ನಡದ ಮನೆಮಗಳು ದೀಪಿಕಾಗೆ ರಕ್ಷಣೆ ನೀಡುವಂತೆ ಹರ್ಯಾಣ ಸಿಎಂಗೆ ಸಿದ್ದರಾಮಯ್ಯ ಕರೆ

ಬೆಂಗಳೂರು: ದೇಶಾದ್ಯಂತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಭಿನಯದ `ಪದ್ಮಾವತಿ’ ಚಿತ್ರ ಬಿಡುಗಡೆಗೆ ಮುನ್ನವೇ ಒಂದಿಲ್ಲೊಂದು ವಿಚಾರದಲ್ಲಿ ಭಾರೀ ಸುದ್ದಿ ಮಾಡುತ್ತಿದೆ.

ಈ ಹೊತ್ತಲ್ಲಿ ನಟಿ ದೀಪಿಕಾ ಪಡುಕೋಣೆಗೆ ರಕ್ಷಣೆ ನೀಡುವಂತೆ ಕೋರಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕೂಡ ದೀಪಿಕಾ ಪಡುಕೋಣೆ ಪರ ಬ್ಯಾಟಿಂಗ್ ಮಾಡಿದ್ದಾರೆ. ಹರಿಯಾಣ ಸಿಎಂ ಮನೋಹರಲಾಲ್ ಖಟ್ಟರ್‍ಗೆ ದೂರವಾಣಿ ಕರೆ ಮಾಡಿದ ಸಿಎಂ ಸಿದ್ದರಾಮಯ್ಯ ದೀಪಿಕಾ ಪಡುಕೋಣೆಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ, ಪದ್ಮಾವತಿ ನಿರ್ದೇಶಕರ ಶಿರಚ್ಛೇದ ಮಾಡಿದ್ರೆ 10 ಕೋಟಿ ರೂ.- ಬಿಜೆಪಿ ನಾಯಕ

ದೀಪಿಕಾ ಕನ್ನಡದ ಮನೆಮಗಳು. ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ನಟಿಯಾಗಿದ್ದಾರೆ. ದೀಪಿಕಾ ಜೊತೆ ಇಡೀ ಕರ್ನಾಟಕವೇ ಜೊತೆಗಿದೆ ಅಂತ ಸಿಎಂ ಬ್ಯಾಟಿಂಗ್ ಮಾಡಿದ್ದಾರೆ.

ಇದನ್ನೂ ಓದಿ: ವಿವಾದಗಳ ನಡುವೆ ಪದ್ಮಾವತಿ ರಿಲೀಸ್ ದಿನಾಂಕ ಬದಲಾಯ್ತು-ಸೆನ್ಸಾರ್ ಮಂಡಳಿಯಲ್ಲಿ ಅರ್ಜಿ ರಿಜೆಕ್ಟ್

ದೀಪಿಕಾ ಪಡುಕೋಣೆ ಪರವಾದ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಸುವರ್ಣಸೌಧದಲ್ಲಿ ಪ್ರತಿಕ್ರಿಯಿಸಿದ ಸಚಿವ ಡಿ ಕೆ ಶಿವಕುಮಾರ್, ಆಕೆ ನಮ್ಮ ನೆಲದ ಹೆಣ್ಣು ಮಗಳು. ಅವರ ತಂದೆ ಅಂತರಾಷ್ಷ್ರೀಯ ಕ್ರೀಡಾಪಟು ನಮ್ಮ ರಾಜ್ಯದವರು. ಅವರ ರಕ್ತ ದೀಪಿಕಾ ಪಡುಕೋಣೆ. ಅಂತಹ ಹೆಣ್ಣು ಮಗಳನ್ನು ಕೊಲ್ಲುವ ಮಾತನಾಡಿದ್ದಾರೆ. ಇದು ಅಕ್ಷಮ್ಯ ಅಪರಾಧ. ಭೂಮಿಯನ್ನೆ ತಾಯಿ ಅನ್ನೋ ಸಂಸ್ಕಾರ ನಮ್ಮದು. ಇವರು ತಲೆ ಕಡಿರಿ ಮೂಗು ಕುಯ್ರಿ ಎನ್ನುತ್ತಿದ್ದಾರೆ. ಕೂಡಲೆ ಕೇಂದ್ರ ಸರ್ಕಾರ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಬೇಕು. ಈ ಕುರಿತು ರಾಜ್ಯದಲ್ಲಿ ಸಿಎಂ ಹಾಗೂ ಗೃಹ ಸಚುವರಿಗೂ ಮನವಿ ಮಾಡಿದ್ದೇನೆ ಅಂದ್ರು.

ಇದನ್ನೂ ಓದಿ: ಕರ್ಣಿ ಸೇನೆಯ ಬೆದರಿಕೆಗೆ ದೀಪಿಕಾ ಹೇಳಿದ್ದು ಹೀಗೆ!

ಒಂದು ವೇಳೆ ಅವರು ಇಲ್ಲಿಗೆ ಬಂದಾಗ ವಿಪಕ್ಷದವರು ಏನಾದರು ತೊಂದರೆ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರಬಹುದು. ಆದ್ದರಿಂದ ಸೂಕ್ತ ರಕ್ಷಣೆ ಕೊಡಿ ಎಂದಿದ್ದೇನೆ ಅಂತ ಡಿಕೆಶಿ ಹೇಳಿದ್ದಾರೆ.

ಇದನ್ನೂ ಓದಿ: ಪದ್ಮಾವತಿ ಫಿಲ್ಮ ರಿಲೀಸ್ ಆದ್ರೆ, ದೀಪಿಕಾ ಮೂಗನ್ನು ಕಟ್ ಮಾಡ್ತೀವಿ

 

 

Leave a Reply

Your email address will not be published. Required fields are marked *