Recent News

ಸಿದ್ದರಾಮಯ್ಯ ಮಣಿಸಲು ಸಿಎಂ ಅಖಾಡಕ್ಕೆ – ಖರ್ಗೆ ಮನೆಗೆ ಮುಖ್ಯಮಂತ್ರಿ ಭೇಟಿ

ಬೆಂಗಳೂರು: ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿರುವ ಬೆನ್ನಲ್ಲೇ ರಾಜ್ಯ ರಾಜಕೀಯ ವಲಯದಲ್ಲೂ ಗಮನಾರ್ಹ ಬೆಳವಣಿಗೆಗಳು ನಡೆದಿದೆ. ರಾಜ್ಯ ಮುಖ್ಯಮಂತ್ರಿಗಳು ದಿಢೀರ್ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.

ಮುಖ್ಯಮಂತ್ರಿಗಳು ಮಾಜಿ ಪ್ರಧಾನಿ ದೇವೇಗೌಡ ಅವರ ಸೂಚನೆ ಮೇರೆಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಬ್ಬರ ಭೇಟಿ ಸಂದರ್ಭದಲ್ಲಿ ಮೈತ್ರಿ ಸರ್ಕಾರ ಉಳಿವು, ಕಾಂಗ್ರೆಸ್ ಪಕ್ಷದ ನಾಯಕ ನಡೆಯ ಬಗ್ಗೆ ಖರ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಮುಖ್ಯಮಂತ್ರಿಗಳು ಇದೇ ಭೇಟಿಯಲ್ಲಿ ಖರ್ಗೆ ಅವರ ಎದುರು ಆಫರ್ ಒಂದನ್ನು ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಏನಿದು ಆಫರ್?
ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರ ನಡಾವಳಿಯನ್ನು ಖರ್ಗೆ ಅವರ ಎದುರು ಪ್ರಸ್ತಾಪ ಮಾಡಿರುವ ಸಿಎಂ, ರಾಜ್ಯ ರಾಜಕಾರಣಕ್ಕೆ ಮತ್ತೆ ಬಂದು ಬಿಡಿ. ನೀವು ರಾಜ್ಯ ರಾಜಕೀಯಕ್ಕೆ ಬಂದರೆ ಮೈತ್ರಿ ಸರ್ಕಾರದ ಎಲ್ಲಾ ಗೊಂದಲಗಳು ಸರಿ ಹೋಗಲಿದೆ. ಸಿದ್ದರಾಮಯ್ಯ ಅವರು ಪಕ್ಷದಲ್ಲಿ ಓನ್ ಮ್ಯಾನ್ ಶೋ ರೀತಿ ಗೇಮ್ ಆಡುತ್ತಿದ್ದಾರೆ. ಇದರಿಂದ ಮೂಲ ಕಾಂಗ್ರೆಸ್ಸಿಗರು ಯಾರೂ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ವೇದಿಕೆ ಸೃಷ್ಟಿ: ಒಂದೊಮ್ಮೆ ಖರ್ಗೆ ಅವರು ರಾಜಕಾರಣಕ್ಕೆ ಬರಲು ಇಚ್ಛಿಸಿದರೆ, ಈ ಸಂದರ್ಭಕ್ಕಾಗಿ ವೇದಿಕೆ ಸಿದ್ಧ ಪಡಿಸಲು ನಾವು ತಯಾರು ಇರುವುದಾಗಿ ಸಿಎಂ ತಿಳಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಆಗಲು, ಬೇಕಾದ ಎಲ್ಲ ತಯಾರಿಯನ್ನ ಹೈಕಮಾಂಡ್ ಮಟ್ಟದಲ್ಲಿ ಮಾಡಲು ಸಿದ್ಧರಾಗಿದ್ದೇವೆ ಎಂಬ ಆಶ್ವಾಸನೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ದೇವೇಗೌಡರು ಕೂಡ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬರುವ ಯೋಚನೆಯಲ್ಲಿದ್ದು ನಿಮ್ಮ ಗಮನಕ್ಕೆ ತರಲು ಹೇಳಿದ್ದಾರೆ. ನೀವು ಸಿದ್ಧ ಎಂದರೆ ಮೈತ್ರಿ ಸರ್ಕಾರ ಸೇಫ್ ಆಗುತ್ತೆ. ಸರ್ಕಾರಕ್ಕೆ ಸ್ವಲ್ಪ ಹೆಚ್ಚು ಕಮ್ಮಿಯಾದರು ನಾನು ಸಿಎಂ ತ್ಯಾಗಕ್ಕೂ ಸಿದ್ಧನಿರುತ್ತೇನೆ ಎಂದು ತಿಳಿಸಿರುವ ಮಾಹಿತಿ ಲಭಿಸಿದೆ. ಆದರೆ ಸಿಎಂ ಅವರ ಮಾತಿಗೆ ಯಾವುದೇ ಸಮ್ಮತಿ ಸೂಚಿಸದ ಖರ್ಗೆ ಅವರು, ಸಿಎಂರ ಈ ಯತ್ನಕ್ಕೆ ಹೈಕಮಾಂಡ್ ಒಪ್ಪಿಗೆ ನೀಡುವ ಅನುಮಾನ ಇದೆ. ಮುಂದಿನ ಹಂತದಲ್ಲಿ ಏನೆಲ್ಲಾ ಆಗುತ್ತೇ ನೋಡೋಣ. ನಾನು ಪಕ್ಷ ಹೇಳಿದಂತೆ ನಡೆಯುತ್ತೇನೆ ಎಂದು ಸ್ಪಷ್ಟ ಪಡಿಸಿದ್ದಾರೆ ಎನ್ನಲಾಗಿದೆ.

ಖರ್ಗೆ ಹೇಳಿದ್ದೇನು?
ಸಿಎಂ ಭೇಟಿ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಲೋಕಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ಸಿಎಂ ಭೇಟಿ ಮಾಡಲು ಆಗಮಿಸಿದ್ದಾರೆ. ದಿನೇಶ್ ಗುಂಡೂರಾವ್ ಅವರು ಕೂಡ ನಿನ್ನೆ ಆಗಮಿಸಿದ್ದರು. ಗುಲ್ಬರ್ಗಾ ಭಾಗದ ಗುರುಮಿಟ್ಕಲ್, ಚಂಡರಕಿ ಗ್ರಾಮ ವಾಸ್ತವ್ಯಕ್ಕೆ ಸಿಎಂ ಅವರು ಹೋಗುತ್ತಿದ್ದು, ಅಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ಅಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಬರದ ಸಮಸ್ಯೆ ಇದೆ. ಈ ಬಗ್ಗೆ ಅವರಿಗೆ ಮನವಿ ಮಾಡಿದ್ದು, ಭೇಟಿ ಸಂದರ್ಭದಲ್ಲಿ ರಾಜಕೀಯ ಚರ್ಚೆ ನಡೆಸಿಲ್ಲ. ನನ್ನ ಚುನಾವಣೆಯನ್ನು ನಾನು ಕಳೆದುಕೊಂಡಿರುವದರಿಂದ ರಾಜಕೀಯ ಸಲಹೆ ನೀಡಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ಟು ಕೆಲವು ಗೊಂದಲ ಇದ್ದು, ಈ ಬಗ್ಗೆ ಒಟ್ಟಾಗಿ ಕೆಲಸ ಮಾಡಲು ಸೂಚಿಸಿದ್ದೇನೆ. ಸಿದ್ದರಾಮಯ್ಯ ಅವರು ಹೈಕಮಾಂಡ್ ಭೇಟಿ ಮಾಡುತ್ತಿರುವ ವಿಚಾರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Leave a Reply

Your email address will not be published. Required fields are marked *