Connect with us

Chikkamagaluru

ಮುಂದುವರಿದ ಸಿಎಂ ಟೆಂಪಲ್ ರನ್ – ಶೃಂಗೇರಿಯ ಶಾರದಾಂಭೆಗೆ ವಿಶೇಷ ಪೂಜೆ

Published

on

ಚಿಕ್ಕಮಗಳೂರು: ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಶೃಂಗೇರಿಗೆ ಭೇಟಿ ನೀಡಿದ್ದಾರೆ.

ಶುಕ್ರವಾರ ರಾತ್ರಿ 11 ಗಂಟೆಗೆ ಶೃಂಗೇರಿಗೆ ಬಂದಿರುವ ಕುಮಾರಸ್ವಾಮಿ, ರಾತ್ರಿ ಶೃಂಗೇರಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಬೆಳಗ್ಗೆ ಶಾರದಾಂಭೆಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬೆಳಗ್ಗೆ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

 

ಗುರುಗಳ ಆಶೀರ್ವಾದ ಪಡೆದು ನಂತರ ಚಿಕ್ಕಮಗಳೂರಿನಲ್ಲಿ ಅಧಿಕಾರಿಗಳ ಜೊತೆ ಜಿಲ್ಲೆಯ ಅತಿವೃಷ್ಠಿ ಹಾಗೂ ಅನಾವೃಷ್ಟಿಯ ಕುರಿತು ಸಭೆ ನಡೆಸಲಿದ್ದಾರೆ. ಕುಮಾರಸ್ವಾಮಿ ಇಂದು ಬೆಳಗ್ಗೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ ಬರಬೇಕಿತ್ತು. ಆದ್ರೆ, ಬೆಳಗ್ಗೆ 9 ರಿಂದ 10.30 ರವರೆಗೆ ರಾಹುಕಾಲವಿದ್ದು, ಬೆಂಗಳೂರಿನಿಂದ ಬಂದು ಪೂಜೆಗೆ ಹೋಗುವಷ್ಟರಲ್ಲಿ ರಾಹುಕಾಲ ಆರಂಭವಾಗುತ್ತೆಂದು, ನಿನ್ನೆ 350 ಕಿ.ಮೀ. ಕಾರಿನಲ್ಲಿ ಸಂಚಾರ ಮಾಡಿ ಶೃಂಗೇರಿಯಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ಹೇಳಲಾಗ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *