Connect with us

Bengaluru City

ಸಿಎಂ ಕಾರಿನ ಮೇಲೆ ಬಿತ್ತು 2 ಕೇಸ್: ಇನ್ನೂ ಕಟ್ಟಿಲ್ಲ ದಂಡ

Published

on

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸಂಬಂಧ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರ ಕಾರಿನ ಮೇಲೆ ಎರಡು ದೂರು ದಾಖಲಾಗಿದೆ.

ಅತಿ ವೇಗ ಹಾಗೂ ಕಾರು ಚಾಲನೆ ವೇಳೆ ಮೊಬೈಲ್ ಬಳಕೆ ಹಿನ್ನೆಲೆ ಎರಡು ಕೇಸ್ ದಾಖಲಾಗಿದ್ದು, ಕೆಎ 42 ಪಿ 0002 ನಂಬರಿನ ಕಾರನ್ನು ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ಬಳಕೆ ಮಾಡುತ್ತಿದ್ದಾರೆ.

ಫೆ.10 ಮತ್ತು ಫೆ.22 ರ ಎರಡು ದಿನ ಕಾರಿನ ಮೇಲೆ ದೂರು ದಾಖಲಾಗಿದ್ದು, ಫೆಬ್ರವರಿ 22 ರ ಮಧ್ಯಾಹ್ನ 12.35 ಕ್ಕೆ ಬಸವೇಶ್ವರ ಸರ್ಕಲ್ ಬಳಿ ಓವರ್ ಸ್ಪೀಡ್ ಮಾಡಿರುವ ಹಿನ್ನೆಲೆಯಲ್ಲಿ 300 ರೂ. ದಂಡ ಹಾಗೂ ಫೆ.10 ರಂದು ಬೆಳಗ್ಗೆ 9.27ಕ್ಕೆ ಕಾರ್ ಡ್ರೈವಿಂಗ್ ಮಾಡುವ ವೇಳೆ ಮೊಬೈಲ್ ಬಳಕೆ ಮಾಡಿದ್ದಕ್ಕೆ 100 ರೂ. ದಂಡ ವಿಧಿಸಲಾಗಿದೆ.

ಕಾರಿನ ಮೇಲೆ ದೂರು ದಾಖಲಿಸಿ 20 ದಿನಗಳು ಕಳೆದು ಕೂಡ ದಂಡ ಪಾವತಿ ಮಾಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಸಿಎಂ ಕಾರಿನ ಮೇಲೆಯೇ ದಂಡ ವಿಧಿಸಿರುವುದು ಗಮನಾರ್ಹವಾಗಿದೆ. ಸಿಎಂ ಕುಮಾರಸ್ವಾಮಿ ಅವರು ತಮ್ಮದೇ ಕಾರನ್ನು ಬಳಕೆ ಮಾಡುತ್ತಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಡ್ರೈವರ್ ನಿಂದ ಸಿಎಂ ಕಾರಿಗೆ ಸಂಚಾರಿ ಪೊಲೀಸರು ದಂಡ ವಿಧಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.