Bengaluru City

ನನಗೆ ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದು: ಎಂಎಲ್‍ಸಿ ಶಂಕರ್

Published

on

Share this

ಬೆಂಗಳೂರು: ಬಿಜೆಪಿ ಸರ್ಕಾರ ಬರಲು ನಾನು ಸಹ ಕಾರಣ. ಸರ್ಕಾರ ಮಾಡಲು ಮಂತ್ರಿ ಸ್ಥಾನಕ್ಕೂ ರಾಜೀನಾಮೆ ಕೊಟ್ಟು ಮೊದಲು ಓಡೋಡಿ ಹೋದವನು ನಾನು. ಈಗ ನನಗೆ ಸಚಿವ ಸ್ಥಾನ ಕೊಡದಿದ್ರೆ ಹೇಗೆ ಅಂತ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಎಂಎಲ್‍ಸಿ ಶಂಕರ್ ಪ್ರಶ್ನೆ ಮಾಡಿದ್ದಾರೆ.

ನಾನು ಸಹ ಸಿಎಂ ಭೇಟಿ ಮಾಡಲು ದೆಹಲಿಗೆ ಹೋಗಿದ್ದೆ ಅಷ್ಟರಲ್ಲಿ ಅವರು ವಾಪಾಸ್ಸಾದ್ರು. 10 ಗಂಟೆಯವರೆಗೆ ಕಾಯಿರಿ ಅಂತ ಸಿಎಂ ಹೇಳಿದ್ದಾರೆ. ಆದ್ರೆ ಎಲ್ಲರಿಗೂ ಕೊಟ್ಟು ನನಗೆ ಹಾಗೂ ಶ್ರೀಮಂತ ಪಾಟೀಲ್ ಗೆ ಸಚಿವ ಸ್ಥಾನ ಕೊಡದಿದ್ರೆ ಹೇಗೆ ಅಂತ ಪ್ರಶ್ನೆ ಮಾಡಿದ್ರು. ನನಗೆ ಮಂತ್ರಿ ಮಾಡುವ ಭರವಸೆ ಇದೆ. ಸರ್ಕಾರ ಬರಲು ಕಾರಣಕರ್ತರಾದ ಎಲ್ಲರಿಗೂ ಸಚಿವ ಸ್ಥಾನ ಕೊಡಬೇಕು ಅಂತ ಹೈಕಮಾಂಡ್ ಗೆ ಮನವಿ ಮಾಡಿದ್ದೇನೆ ಅಂತ ಸಿಎಂ ಹೇಳಿದ್ರು. ನೋಡೋಣ ಕಾಯಿರಿ ಅಂತ ಹೇಳಿದ್ರು. ಸರ್ಕಾರ ಬರಲು ನಾನು ಕಾರಣ ಕೇಳೋದು ನನ್ನ ಧರ್ಮ ಕೊಡೋದು ಅವರ ಧರ್ಮ. ಯಾವ ತೀರ್ಮಾನ ತಗೋತಾರೋ ಕಾದು ನೋಡಬೇಕು ಎಂದರು.

ನಾವ್ ಹೋಗದಿದ್ರೆ ಸರ್ಕಾರ ಆಗ್ತಿರಲಿಲ್ಲ. ಸರ್ಕಾರ ಮಾಡಿದವರಿಗೆ ಎಲ್ಲರಿಗೂ ಕೊಟ್ಟು ಇಬ್ಬರಿಗೆ ಕೊಡಿದಿದ್ರೇ ಹೇಗೆ? ಆರ್ ಶಂಕರ್ ಹಾಗೂ ಶ್ರೀಮಂತ ಪಾಟೀಲ್ ಗೆ ಸಚಿವ ಸ್ಥಾನ ಕೊಡದಿದ್ರೆ ಹೇಗೆ? ನಮ್ಮನ್ನ ಗಣನೆಗೆ ತೆಗೆದುಕೊಂಡರೆ ಎಲ್ಲರಿಗೂ ಓಳ್ಳೆಯದು. ಸಿಎಂ ಭರವಸೆ ನೀಡಿದ್ದಾರೆ. ಸಾಕಷ್ಟು ಕಷ್ಟಪಟ್ಟು ಶಾಸಕ ಸಚಿವನಾಗಿದ್ದವ, ರಾಜೀನಾಮೆ ಕೊಟ್ಟಿದ್ದು ಹುಡುಗಾಟಿಕೆಗೆ ಅಲ್ಲ. ಪಕ್ಷೇತರನಾಗಿ ಗೆಲ್ಲಲು ಸಾಕಷ್ಟು ಶ್ರಮ ಹಾಕಿದ್ದೇನೆ. ಮಂತ್ರಿಯಾದಾಗ ಸರ್ಕಾರದಿಂದ ಕೆಲಸ ಕಾರ್ಯ ಮಾಡಲು ಆಗಲಿಲ್ಲ. ಅಭಿಮಾನಿಗಳು ನನಗೆ ಅನ್ಯಾಯ ಆಗಬಾರದು ಅಂತ ಅವಲತ್ತುಕೊಳ್ತಿದ್ದಾರೆ. ಎಲ್ಲರಿಗೂ ಮುಂಚೆ ಒಡೋಡಿ ಹೋಗಿ ಸರ್ಕಾರ ಮಾಡಿದವನು ಎಂದು ಹೇಳಿದರು. ಇದನ್ನೂ ಓದಿ: ಮೋಸ, ವಂಚನೆ, ವಸೂಲಿಯಿಂದ ಸಚಿವ ಸ್ಥಾನ ತಪ್ಪಿತು: ಸಿಎಂ ವಿರುದ್ಧವೇ ಗುಡುಗಿದ ಶಾಸಕ ಓಲೇಕಾರ್

Click to comment

Leave a Reply

Your email address will not be published. Required fields are marked *

Advertisement
Advertisement