ಬಸವಣ್ಣನಂತೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ದೇಶಿಕೇಂದ್ರ ಮಹಾಸ್ವಾಮಿಜೀ

Advertisements

ಕಲಬುರಗಿ: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸಕಾ9ರದಲ್ಲಿ ಪರ್ಸೆಂಟೆಜ್ ವ್ಯವಹಾರ ನಡೆದಿಲ್ಲ. ಬಸವಣ್ಣನಂತೆ ಬೊಮ್ಮಾಯಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಜಗದ್ಗುರು ಶ್ರೀ ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿ ಶ್ರೀ ಶೈಲಂ ಹೇಳಿದರು.

Advertisements

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಠಗಳಿಗೆ ಅನುದಾನ ನೀಡಲು 30% ನೀಡಬೇಕು ಎಂಬ ಆರೋಪದ ಬಗ್ಗೆ ಮಹಾಸ್ವಾಮಿ ಶ್ರೀ ಶೈಲಂ ಅವರು ಮಾತನಾಡಿದ್ದು, ದಿಂಗಾಲೇಶ್ವರ ಸ್ವಾಮೀಜಿಗೆ ಟಾಂಗ್ ಕೊಟ್ಟರು. ಈ ವೇಳೆ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಕಲಬುರಗಿ ಜಿಲ್ಲೆಯ ಮಠಗಳಿಗೆ 6 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಅನುದಾನ ಬಿಡುಗಡೆಗೆ ನಾವು ನಯಾ ಪೈಸೆ ಕಮೀಷನ್ ಕೊಟ್ಟಿಲ್ಲ. ಬಳಿಕ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಈ ಭಾಗದ ಪ್ರೀಯಾಂಕ್ ಖರ್ಗೆ ಪ್ರವಾಸೋದ್ಯಮ ಇಲಾಖೆಯ ಸಚಿವರಾಗಿದ್ದರು. ಅವರು ಸಹ 25 ಕೋಟಿ ರೂ. ಅನುದಾನವನ್ನು ಎಲ್ಲ ಮಠಗಳಿಗೆ ನೀಡಿದ್ದು, ಅವರು ಸಹ ನಯಾ ಪೈಸೆ ಕಮೀಷನ್ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಾಮಾನ್ಯರ ಮೇಲಿರುವ ಬೆಲೆ ಏರಿಕೆ ಒತ್ತಡ ಕಡಿಮೆ ಮಾಡಲು ಯತ್ನ: ನಿರ್ಮಲಾ

Advertisements

ಯಡಿಯೂರಪ್ಪ ಸಿಎಂ ಅವಧಿಯಲ್ಲಿಯೂ ಸಹ ನಮ್ಮ ಮಠಕ್ಕೆ 20 ಲಕ್ಷ ರೂ. ಅನುದಾನ ಬಂದಿದೆ. ಆದರೆ ಯಾವತ್ತೂ ಸಹ ಕಮೀಷನ್ ಪಡೆದಿಲ್ಲ. ಅದೇ ಈಗ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸಕಾ9ರ ಸಾಕಷ್ಟು ಮಠಗಳಿಗೆ ಅನುದಾನ ನೀಡಿದ್ದು, ಒಂದು ದಿನವಾದರೂ ರಾಜ್ಯ ಸರ್ಕಾರ ಪರ್ಸೆಂಟೆಜ್ ಕೇಳಿಲ್ಲ ಎಂದು ಹೇಳಿದರು.

ಬೊಮ್ಮಾಯಿ ಅವರು ಸಿಎಂ ಆಗಲು ನಾವು ಕಾರಣವೆಂದು ಇತ್ತೀಚೆಗೆ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದರು. ಸದ್ಯ ಅಣ್ಣ ಬಸವಣ್ಣನವರಂತೆ ಬೊಮ್ಮಾಯಿ ಅವರು ಕೆಲಸವನ್ನು ಮಾಡುತ್ತಿದ್ದು, ಅವರ ಸರ್ಕಾರದಲ್ಲಿ ಕಮೀಷನ್ ಎಂಬ ವ್ಯವಹಾರ ನಡೆದಿಲ್ಲ ಎಂದು ನುಡಿದರು.

Advertisements

ಸ್ವಾಮಿಜೀಗಳು ಸೂಜಿಯಾಗಬೇಕೆ ವಿನಃ, ಕತ್ತರಿಯಾಗಬಾರದು ಎಂದು ಹೇಳಿದ್ದು, ಪರೋಕ್ಷವಾಗಿ ದಿಂಗಾಲೇಶ್ವರ ಸ್ವಾಮೀಜಿಯನ್ನು ಕತ್ತರಿಗೆ ಹೋಲಿಸಿದರು. ಈ ರೀತಿ ಹೇಳಿಕೆ ಕೊಡುವುದು ಸ್ವಾಮೀಜಿಗಳಿಗೆ ಶೋಭೆ ತರುವಂತಹದಲ್ಲ. ಕಮೀಷನ್ ಪಡೆದಿರುವ ಬಗ್ಗೆ ಏನಾದರೂ ದಾಖಲೆಗಳಿದ್ರೆ ಬಹಿರಂಗ ಪಡಿಸಲು ಆಗ್ರಹಿಸಿದರು. ಇದನ್ನೂ ಓದಿ:  KGF-2 ನೋಡುವ ವೇಳೆ ಕ್ಷುಲ್ಲಕ ಕಾರಣಕ್ಕೆ ಪೈರಿಂಗ್ – ಆರೋಪಿ ಪತ್ತೆಗೆ ಎರಡು ತಂಡ ರಚನೆ

ಮಠಾಧೀಶರಲ್ಲು ಸಹ ಎರಡು ಪಂಗಡಗಳಿವೆ. ಮಠಾಧೀಶರು ರಾಜಕೀಯ ಮಾಡುವುದನ್ನು ಬಿಟ್ಟು, ಮಠಕ್ಕೆ ಬಂದ ಭಕ್ತಾದಿಗಳಿಗೆ ಆಶೀರ್ವಾದ ಮಾಡುವುದನ್ನು ಕಲಿಯಬೇಕು ಎಂದು ಕಿವಿ ಮಾತನ್ನು ಹೇಳಿದರು.

Advertisements
Exit mobile version