Connect with us

Cinema

ಡಿ ಬಾಸ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಸಾಂಗ್

Published

on

ಬೆಂಗಳೂರು: ನಾಳೆ ಡಿ ಬಾಸ್ ದರ್ಶನ್ ಹುಟ್ಟುಹಬ್ಬ. ಈಗಾಗಲೇ ಕೆಲವು ದಿನಗಳಿಂದ ಅಭಿಮಾನಿಗಳು ಕಾಮನ್ ಡಿಪಿ ಮೂಲಕವಾಗಿ ವಿಶ್ ಮಾಡುತ್ತಿದ್ದರು. ಬರ್ತ್ ಡೇ ಸಾಂಗ್ ಉಡುಗೊರೆ ನೀಡುವ ಮೂಲಕವಾಗಿ ಸಖತ್ ಡಿಫರೆಂಟ್ ಆಗಿ ವಿಶ್ ಮಾಡಿದ್ದಾರೆ.

ಅಭಿಮಾನಿಗಳು ಈಗಾಗಲೇ ಕಾಮನ್ ಡಿಪಿ ಮೂಲಕವಾಗಿ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಲು ಪ್ರಾರಂಭಿಸಿದ್ದರು. ಅಭಿಮಾನಿಗಳು ಹುಟ್ಟುಹಬ್ಬಕ್ಕಾಗಿ ವಿಶೇಷ ಹಾಡೊಂದನ್ನು ಬಿಡುಗಡೆ ಮಾಡಿ ಅಭಿಮಾನ ಮೆರೆದಿದ್ದಾರೆ.

ಅಭಿಮಾನಿಗಳು ಈ ಬಾರಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ. ನೆಚ್ಚಿನ ನಟನ ಹುಟ್ಟುಹಬ್ಬಕ್ಕಾಗಿ ಹಾಡುಗಳನ್ನ ಸಮರ್ಪಿಸುತ್ತಿದ್ದಾರೆ. ಸುಪ್ರೀತ್ ಗಾಂಧಾರ ಅಂಡ್ ಟೀಮ್ ‘ಬಾಕ್ಸ್ ಆಫೀಸ್ ಸುಲ್ತಾನ’ ಎಂಬ ಹಾಡನ್ನು ರೆಡಿ ಮಾಡುತ್ತಿದ್ದಾರೆ. ಸುಪ್ರೀತ್ ಗಾಂಧಾರ ಅವರೇ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿಗೆ ಸಿದ್ಧಾರ್ಥ್ ಗೌಡ ಸಾಹಿತ್ಯ ಬರೆದಿದ್ದಾರೆ.

ಹುಟ್ಟುಹಬ್ಬಕ್ಕೆಂದು ವಿಶೇಷವಾಗಿ ವಿನ್ಯಾಸ ಮಾಡಿರುವ ಕಾಮನ್ ಡಿಪಿ ಈಗಾಗಲೇ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದಿದೆ. ಕಾಮನ್ ಡಿಪಿ ಅಭಿಮಾನಿಗಳ ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸುತ್ತಿವೆ. ವಿಶೇಷ ಎಂದರೇ ಸ್ಯಾಂಡಲ್‍ವುಡ್‍ನ ನಟ ರಿಷಬ್ ಶೆಟ್ಟಿ, ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಹಲವು ನಟರು ಕೂಡ ದರ್ಶನ್ ಅವರ ಈ ಕಾಮನ್ ಡಿಪಿಯನ್ನು ಟ್ವಿಟ್ಟರ್‍ನಲ್ಲಿ ಹಾಕಿಕೊಂಡು ವಿಶ್ ಮಾಡಿದ್ದಾರೆ.

ಪ್ರತಿ ಬಾರಿ ನಟ ದರ್ಶನ್ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಹಾಡೊಂದನ್ನು ಬಿಡುಗಡೆ ಮಾಡುತ್ತಾರೆ. ಈ ಬಾರಿ ಬಾಕ್ಸ್ ಆಫೀಸ್ ಸುಲ್ತಾನ ಎಂಬ ಹೆಸರಿನ ಹಾಡು ಬಿಡುಗಡೆಯಾಗಿದೆ.

Click to comment

Leave a Reply

Your email address will not be published. Required fields are marked *