Crime
ಬೆಂಗ್ಳೂರಲ್ಲಿ ಮಹಿಳಾ ಸಿಐಡಿ ಡಿವೈಎಸ್ಪಿ ಆತ್ಮಹತ್ಯೆ- ಪರಿಚಿತರ ಮನೆಯಲ್ಲಿ ಸೂಸೈಡ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಿಳಾ ಡಿವೈಎಸ್ಪಿ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಿಐಡಿ ಡಿವೈಎಸ್ಪಿ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. ಇವರು ಪರಿಚಿತರ ಮನೆಗೆ ಊಟಕ್ಕೆ ಹೋದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನ್ನಪೂರ್ಣೆಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೂಲತಃ ಕೋಲಾರದ ಮಾಲೂರಿನವರಾಗಿರುವ ಲಕ್ಷ್ಮಿ ಕೋಣಕುಂಟೆಯಲ್ಲಿ ಫ್ಯಾಮಿಲಿಯೊಂದಿಗೆ ವಾಸವಾಗಿದ್ದು, 2014 ಬ್ಯಾಚ್ ನ ಅಧಿಕಾರಿ. ಇವರು 2017 ಕೆಲಸಕ್ಕೆ ಸೇರಿದ್ದರು. ಅಲ್ಲದೆ 6 ತಿಂಗಳ ಹಿಂದೆ ಸಿಐಡಿ ಸ್ಪೆಷನ್ ಎನ್ಕ್ವೈರಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ದೀರ್ಘಕಾಲ ಗೈರಾಗುತ್ತಿದ್ದರು.
ನಿನ್ನೆ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದರು. ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಈ ನಿರ್ಧಾರ ಕೈಗೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
