Chitradurga
ಬಹಿರ್ದೆಸೆಗೆ ತೆರಳಿದ್ದ ಮಗು ನದಿಗೆ ಬಿದ್ದು ಸಾವು

ಚಿತ್ರದುರ್ಗ: ಬಹಿರ್ದೆಸೆಗೆ ತೆರಳಿದ್ದ ಮಗು ಕಾಲು ಜಾರಿ ಕೆಲ್ಲೋಡು ಬ್ಯಾರೇಜ್ ಸಮೀಪದ ವೇದಾವತಿ ನದಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಮೃತ ಮಗುವನ್ನು ನಿಸರ್ಗ (2) ಎಂದು ಗುರುತಿಸಲಾಗಿದೆ. ಮಗುವನ್ನು ರಕ್ಷಿಸಲು ಹೋಗಿ ಪ್ರಾಣಾಪಾಯದಿಂದ ಪಾರಾಗಿರುವ ಮಹಿಳೆ ರಾಧಿಕಾ (24) ಆಗಿದ್ದಾಳೆ. ಇವರು ಹೊಸತಿಮ್ಮಪ್ಪನಹಟ್ಟಿ ಗ್ರಾಮದ ನಿವಾಸಿಗಳಾಗಿದ್ದಾರೆ.
ಬಹಿರ್ದೆಸೆಗೆ ತೆರಳಿದ್ದ ಮಗು ಕಾಲು ಜಾರಿ ಬಿದ್ದಿದೆ. ಈ ವೇಳೆ ತಾಯಿ ಮಗುವನ್ನು ರಕ್ಷಿಸಿಲು ಬ್ಯಾರೇಜ್ ಗೆ ಹಾರಿದ್ದಾಳೆ. ನೀರಿನಲ್ಲಿ ಬಿದ್ದು ಪ್ರಾಣರಕ್ಷಣೆಗೆ ಒದ್ದಾಡುತ್ತಿರುವ ಮಹಿಳೆಯನ್ನು ಕಂಡ ಸ್ಥಳೀಯರು ತಕ್ಷಣ ರಕ್ಷಣೆ ಮಡಿದ್ದಾರೆ. ಆದರೆ ನೀರಿನಲ್ಲಿ ಮಗುವಿನ ಸುಳಿವು ಸಿಗದೆ ರಕ್ಷಣೆ ಸಾಧ್ಯವಾಗಿಲ್ಲ. ಈ ಅವಘಡದಲ್ಲಿ ಮಗು ಮೃತಪಟ್ಟಿದೆ. ಮಗುವಿನ ತಾಯಿಯನ್ನು ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾಳೆ.
ನೀರಿನಲ್ಲಿ ಬಿದ್ದು ಮೃತ ಪಟ್ಟಿರುವ ಮಗುವಿನ ದೇಹವನ್ನು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬಂದು ಕಾರ್ಯಾಚರಣೆ ನಡೆಸಿ ನೀರಿನಿಂದ ಹೊರತೆಗೆದಿದ್ದಾರೆ. ಈ ಸಂಬಂಧ ಶ್ರೀರಾಂಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
