Connect with us

Bengaluru City

‘ಖಾಕಿ’ ಇದು ಪೊಲೀಸ್ ಸ್ಟೋರಿ ಅಲ್ಲ!

Published

on

ಬೆಂಗಳೂರು: ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸುತ್ತಿರುವ ಮುಂದಿನ ಚಿತ್ರ `ಖಾಕಿ’ ಸಿನಿಮಾದ ಮುಹೂರ್ತ ಇಂದು ರಾಜಾಜಿನಗರ ಗಣೇಶ ದೇವಸ್ಥಾನದಲ್ಲಿ ನೆರವೇರಿತು.

ಚಿತ್ರಕ್ಕೆ ಪತ್ನಿ ಮೇಘನಾರಾಜ್ ಅವರೇ ಕ್ಲ್ಯಾಪ್ ಮಾಡಿ ಶುಭಕೋರಿದ್ದು, ಮನಸಾ ತರುಣ್ ಕ್ಯಾಮೆರಾಗೆ ಚಾಲನೆ ನೀಡಿದರು. ಖಾಕಿ ಹೆಸರಿನ ಖಡಕ್ ಟೈಟಲ್ ಮೂಲಕ ನವೀನ್ ರೆಡ್ಡಿ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ದ ಪವರ್ ಆಫ್ ಕಾಮನ್ ಮ್ಯಾನ್ ಟ್ಯಾಗ್ ಲೈನನ್ನು ಸಿನಿಮಾಗೆ ನೀಡಿದ್ದಾರೆ.

ಕೇಬಲ್ ಆಪರೇಟರ್ ಆಗಿ ಕಾರ್ಯನಿರ್ವಹಿಸುವ ಸಾಮಾನ್ಯ ಯುವಕನ ಪಾತ್ರದಲ್ಲಿ ಸರ್ಜಾ ಕಾಣಿಸಿಕೊಳ್ಳುತ್ತಿದ್ದಾರೆ. ಒಬ್ಬ ಸಾಮಾನ್ಯ ಯುವಕ ಸಂದರ್ಭವೊಂದರಲ್ಲಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ನಿಂತು ಹೋರಾಡುವ, ಭ್ರಷ್ಟ ಪೋಲಿಸರು ಹಾಗೂ ರಾಜಕೀಯ ಶಕ್ತಿಗಳಿಂದ ತನ್ನವರನ್ನು ರಕ್ಷಿಸಿಕೊಳ್ಳುವ ನಾಯಕನ ಹೋರಾಟ ಕಂಡು ಮತ್ತಷ್ಟು ಯುವಕರು ಪ್ರೇರಣೆ ಪಡೆಯುವ ಕಥಾ ಹಂದರವನ್ನು ಸಿನಿಮಾ ಹೊಂದಿದೆ. ಚಿತ್ರಕ್ಕೆ ರಿತ್ವಿಕ್ ಸಂಗೀತ ಹಾಗೂ ಬಾಲು ಕ್ಯಾಮೆರಾವಿದ್ದು ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv