Monday, 24th February 2020

ಕಾಮನ್‍ಮ್ಯಾನ್‍ನನ್ನು ಎಚ್ಚರಿಸಿದ ಖಾಕಿ ಸಿನಿಮಾ

ಮಾಸ್ ಟೀಸರ್, ಟ್ರೈಸರ್ ಮೂಲಕ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ್ದ ಯುವ ಸಾಮ್ರಾಟ್ ಚಿರು ಸರ್ಜಾ ಅಭಿನುಯದ ‘ಖಾಕಿ’ ಚಿತ್ರ ಇಂದು ರಾಜ್ಯಾದ್ಯಂತ ಯಶಸ್ವಿಯಾಗಿ ಬಿಡುಗಡೆಯಾಗಿದೆ. ಮೊದಲ ದಿನ ಚಿತ್ರಕ್ಕೆ ಹೌಸ್ ಫುಲ್ ರೆಸ್ಪಾನ್ಸ್ ಸಿಕ್ಕಿದ್ದು ಚಿರು ಮಾಸ್ ಅಭಿನಯಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ.

ನವೀನ್ ರೆಡ್ಡಿ ಮೊದಲ ಬಾರಿ ಆ್ಯಆಕ್ಷನ್ ಕಟ್ ಹೇಳಿರುವ ಈ ಚಿತ್ರ ಯುವ ಸಾಮ್ರಾಟ್‍ಗೆ ಹೊಸ ಇಮೇಜ್ ತಂದುಕೊಡೋದ್ರಲ್ಲಿ ಡೌಟೇ ಇಲ್ಲ. ಆ ರೀತಿ ತಮ್ಮ ಅಭಿನಯವನ್ನು ತೆರೆ ಮೇಲೆ ತೋರಿದ್ದಾರೆ ಚಿರು ಸರ್ಜಾ. ರೆಗ್ಯುಲರ್ ಆಗಿ ಶುರುವಾಗೋ ಸಿನಿಮಾದಲ್ಲಿ ಪ್ಯಾರಲಲ್
ಪೊಲೀಸ್ ಎಂಬ ಡಿಫರೆಂಟ್ ಕನ್ಸೆಪ್ಟ್ ತರೋ ಮೂಲಕ ನಿರ್ದೇಶಕ ನವೀನ್ ರೆಡ್ಡಿ ಗೆದ್ದಿದ್ದಾರೆ. ಎಲ್ಲೂ ಬೋರ್ ಹೊಡಿಸದೆ ಅಚ್ಚುಕಟ್ಟಾಗಿ ಚಿತ್ರಕಥೆ ಹೆಣೆದಿದ್ದಾರೆ ನಿರ್ದೇಶಕರು.

ಕಾಮನ್‍ಮ್ಯಾನ್ ಪವರ್ ಏನು ಅನ್ನೋದನ್ನ ನಾಯಕ ನಟನ ಪಾತ್ರದ ಮೂಲಕ ಮನದಟ್ಟು ಮಾಡುವ ಮೂಲಕ ಪ್ರತಿಯೊಬ್ಬರೂ ವ್ಯವಸ್ಯೆಯಲ್ಲಾಗುವ ಅವ್ಯವಸ್ಥೆ ವಿರುದ್ಧ ಹೋರಾಟಕ್ಕೆ ನಿಂತ್ರೆ ಸಮಾಜದಲ್ಲಿ ಎಲ್ಲವನ್ನು ಸರಿದಾರಿಗೆ ತರಬಹುದು ಅನ್ನೋದನ್ನ ಖಾಕಿ ಚಿತ್ರ ಕಮರ್ಶಿಯಲ್ ಎಳೆಯಲ್ಲಿ ಹೇಳ ಹೊರಟಿದೆ. ಚಿರು ಆ ಪಾತ್ರವನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಮಾಸ್ ಡೈಲಾಗ್‍ಗಳು ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ನಾಯಕಿ ಪಾತ್ರದಲ್ಲಿ ನಟಿಸಿರುವ ತಾನ್ಯ ಹೋಪ್ ನಾಯಕನಿಗೆ ಪ್ರತಿಹಂತದಲ್ಲಿ ಸಪೋರ್ಟ್ ಮಾಡುವ ಕ್ಯಾರೆಕ್ಟರ್ ಜೊತೆ ನಾಯಕನ ಮನದರಿಸಿಯಾಗಿ ಮಿಂಚಿದ್ದಾರೆ. ಛಾಯಾಸಿಂಗ್, ದೇವ್ ಗಿಲ್, ಶಿವಮಣಿ ತಮ್ಮ ಅಮೋಘ ಅಭಿನಯದಿಂದ ಮನಸೆಳೆಯುತ್ತಾರೆ. ಹಾಡುಗಳು ಚಿತ್ರದ ಪ್ಲಸ್ ಪಾಯಿಂಟ್ ಆಗಿದೆ. ಒಟ್ಟಿನಲ್ಲಿ ಖಾಕಿ ಚಿತ್ರ ಒಂದೊಳ್ಳೆ ಸಂದೇಶದ ಜತೆ ಚಿರು ಅಭಿಮಾನಿಗಳಿಗೆ ಭರಪೂರ ಮನರಂಜನೆಯನ್ನು ನೀಡುತ್ತೆ.

ಚಿತ್ರ: ಖಾಕಿ
ನಿರ್ದೇಶಕ: ನವೀನ್ ರೆಡ್ಡಿ.ಬಿ
ಸಂಗೀತ: ರಿತ್ವಿಕ್ ಮುರಳೀಧರ್
ಛಾಯಾಗ್ರಹಣ: ಬಾಲಾ
ನಿರ್ಮಾಪಕ: ತರುಣ್ ಶಿವಪ್ಪ
ತಾರಾಬಳ: ಚಿರಂಜೀವಿ ಸರ್ಜಾ, ತಾನ್ಯಾ ಹೋಪ್, ಛಾಯಾ ಸಿಂಗ್, ದೇವ್ ಗಿಲ್, ಶಿವಮಣಿ,
ಇತರರು.

ರೇಟಿಂಗ್: 3.5/5

Leave a Reply

Your email address will not be published. Required fields are marked *