Connect with us

Bengaluru City

ಹಳೆಯ ಫೋಟೋ ಹಂಚಿಕೊಂಡು ಅಣ್ಣನಿಗೆ ಧ್ರುವ ವಿಶ್

Published

on

– ಪ್ರೀತಿಯ ಜಗತ್ತಿಗೆ ಹ್ಯಾಪಿ ಹುಟ್ದಬ್ಬ ಅಂದ್ರು ಮೇಘನಾ

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿದ ಬಳಿಕ ಸರ್ಜಾ ಕುಟುಂಬದವರಿಗೆ ಇದು ಮೊದಲನೇ ಹುಟ್ಟುಹಬ್ಬವಾಗಿದ್ದು, ಅವರ ನೆನಪಿನಲ್ಲೇ 36ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಪತ್ನಿ ಮೇಘನಾ ರಾಜ್ ಸ್ಪೆಷಲ್ ವಿಡಿಯೋ ಹಂಚಿಕೊಂಡು ವಿಶ್ ಮಾಡಿದರೆ, ಧ್ರುವ ಚಿಕ್ಕ ವಯಸ್ಸಿನಲ್ಲಿ ಅಣ್ಣನೊಂದಿಗೆ ಕಾಲ ಕಳೆದ ಚಿತ್ರಗಳನ್ನು ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ಅಣ್ಣನೊಂದಿಗೆ ಇದ್ದ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಸ್ಟೇಟಸ್ ಹಾಕಿಕೊಂಡು ಧ್ರುವ ಸರ್ಜಾ ಅಣ್ಣನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಹ್ಯಾಪಿ ಬರ್ಥ್ ಡೇ ಲವ್ ಯು ಫಾರ್ ಎವರ್ ಎಂದು ಬರೆದುಕೊಂಡಿದ್ದಾರೆ. ಚಿಕ್ಕ ವಯಸ್ಸಿನ ಮೂರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಎರಡನೇ ಸ್ಟೇಟಸ್‍ನಲ್ಲಿ 3 ಫೋಟೋಗಳನ್ನು ಸೇರಿಸಿ ಸಣ್ಣವರಿದ್ದಾಗಿನ ಹಾಗೂ ಹಳೆಯ, ಇನ್ನೊಂದು ಇತ್ತೀಚಿನ ಫೋಟೋ ಪೋಸ್ಟ್ ಮಾಡಿದ್ದಾರೆ.

ಮತ್ತೊಂದು ಚಿರಂಜೀವಿ ಸರ್ಜಾ ಅವರ ರಾಜಮಾರ್ತಾಂಡ ಸಿನಿಮಾದ ಟೈಟಲ್ ಟ್ರ್ಯಾಕ್ ಹಂಚಿಕೊಂಡಿದ್ದಾರೆ. ಈ ಮೂಲಕ ಅಣ್ಣನಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ನಿನ್ನೆಯೂ ವಿಡಿಯೋ ಪೋಸ್ಟ್ ಮಾಡಿದ್ದ ಧ್ರುವ ಜೂನಿಯರ್ ಚಿರು ಕಮಿಂಗ್ ಸೂನ್ ಎಂದು ಹೇಳಿದ್ದರು. ಈ ಮೂಲಕ ಅವರ ಹುಟ್ಟುಹಬ್ಬದಂತೆ ಜೂನಿಯರ್ ಚಿರು ಬರಲಿದ್ದಾರೆ ಎಂಬ ಸುಳಿವು ನೀಡಿದ್ದರು.

ಚಿರು ಪತ್ನಿ ಮೆಘನಾ ರಾಜ್ ಸಹ ಫೋಟೋ ಹಂಚಿಕೊಂಡು ಸಾಲುಗಳನ್ನು ಬರೆದಿದ್ದು, ಹ್ಯಾಪಿ ಬರ್ತ್ ಡೇ ಮೈ ವಲ್ರ್ಡ್ ಐ ಲವ್ ಯು ಫಾರ್ ಎವರ್ ಆ್ಯಂಡ್ ಆಲ್‍ವೇಸ್ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಭಾವನಾತ್ಮಕವಾಗಿ ಶುಭಾಶಯ ಕೋರಿದ್ದಾರೆ.

 

View this post on Instagram

 

Happy Birthday My World! @chirusarja I LOVE YOU! Forever and Always!

A post shared by Meghana Raj Sarja (@megsraj) on

ನಿನ್ನೆ ವಿಡಿಯೋವನ್ನು ಸಹ ಮೇಘನಾ ಹಂಚಿಕೊಂಡಿದ್ದರು. ನಿನ್ನ ತಂದೆ ಸದಾ ಸಂಭ್ರಮ ನೀಡುವವರು ಪುಟಾಣಿ ಎಂದು ಬರೆದುಕೊಂಡಿದ್ದರು. ಇದಕ್ಕೂ ಮೊದಲು ಜೂ. ಚಿರುವಿಗೆ ಸ್ವಾಗತ ಕೋರಿ ಕುಟುಂಬಸ್ಥರು ಮಾಡಿರುವ ವೀಡಿಯೋವನ್ನು ಕೂಡ ಮೇಘನಾ ಹಾಗೂ ಧ್ರುವ ಸರ್ಜಾ ಶೇರ್ ಮಾಡಿಕೊಂಡಿದ್ದರು. ಈ ಕುರಿತು ಸಾಕಷ್ಟು ಚರ್ಚೆ ಸಹ ನಡೆದಿತ್ತು.

 

View this post on Instagram

 

@shalinismakeupprofile @makeover_by_raghu_nagaraj_n @classycaptures_official

A post shared by Meghana Raj Sarja (@megsraj) on

ಚಿರು ಹುಟ್ಟುಹಬ್ಬದ ವಿಶೇಷವಾಗಿ ಕುಟುಂಬಸ್ಥರು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನೆಲಗುಳಿ ಗ್ರಾಮದ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಕುಟುಂಬಸ್ಥರು ಚಿರು ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಚಿರಂಜೀವಿ ಸಮಾಧಿ ಬಳಿ ಧ್ರುವ ಸರ್ಜಾ ಅಜ್ಜಿ ಲಕ್ಷ್ಮಿ ದೇವಿ ಆಗಮಿಸಿ, ಮೊಮ್ಮಗನ ಸ್ಮಾರಕಕ್ಕೆ ಹೂವು ಹಾಕಿದ್ದಾರೆ.

ಸಮಾಧಿ ಬಳಿ ಪೂಜೆ ಹಾಗೂ ಅನ್ನದಾನ ಕಾರ್ಯಕ್ರಮ ನಡೆಸಲಿದ್ದಾರೆ. ಇನ್ನು ನೋವಿನಲ್ಲೇ ಖುಷಿಯನ್ನ ಕೂಡ ಬರಮಾಡಿಕೊಳ್ಳಲು ಸರ್ಜಾ ಫ್ಯಾಮಿಲಿ ಸಜ್ಜಾಗಿದೆ. ಚಿರು ಬರ್ತ್ ಡೇಗೆ ರಾಜಮಾರ್ತಾಂಡ ಚಿತ್ರತಂಡ ಗಿಫ್ಟ್ ನೀಡಿದೆ. ಹಿರೋ ಇಂಟ್ರೊಡಕ್ಷನ್ ಸಾಂಗ್ ರಿಲೀಸ್ ಆಗಿದೆ. ಜೊತೆಗೆ ಕ್ಷತ್ರಿಯ ಚಿತ್ರ ಟೀಸರ್ ಕೂಡ ಇಂದೇ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚಿರಂಜೀವಿ ಸರ್ಜಾ(39) ಅವರು ಜೂನ್ 7ರಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಚಿರಂಜೀವಿ ಸರ್ಜಾ ಅವರಿಗೆ ಶನಿವಾರ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಭಾನುವಾರ ಮಧ್ಯಾಹ್ನ 3:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in