Connect with us

ಕೊರೊನಾ ವೈರಸ್ ಚೀನಾದ ಜೈವಿಕ ಅಸ್ತ್ರ – ವಿಶ್ವದಲ್ಲೇ ಬಿರುಗಾಳಿ ಎಬ್ಬಿಸಿದ ವರದಿಯಲ್ಲಿ ಏನಿದೆ? ಅನುಮಾನ ಯಾಕೆ?

ಕೊರೊನಾ ವೈರಸ್ ಚೀನಾದ ಜೈವಿಕ ಅಸ್ತ್ರ – ವಿಶ್ವದಲ್ಲೇ ಬಿರುಗಾಳಿ ಎಬ್ಬಿಸಿದ ವರದಿಯಲ್ಲಿ ಏನಿದೆ? ಅನುಮಾನ ಯಾಕೆ?

ಕೋವಿಡ್ 19 ಆರಂಭದಲ್ಲೇ ಬಂದಿದ್ದರೂ ಪ್ರಪಂಚಕ್ಕೆ ಪದೇ ಸುಳ್ಳು ಹೇಳಿದ್ದ ಚೀನಾದ ಮೇಲೆ ಈಗ ಮತ್ತೆ ವಿಶ್ವದ ಕೆಂಗಣ್ಣು ಬಿದ್ದಿದೆ. ವಿಶ್ವದ 33 ಲಕ್ಷ ಜನರ ಪ್ರಾಣ ತೆಗೆದಿರುವ ಈ ವೈರಸ್ ಚೀನಾದ ಜೈವಿಕ ಅಸ್ತ್ರ ಎಂಬುದರ ಬಗ್ಗೆ ಈಗ ಭಾರೀ ಚರ್ಚೆಆಗುತ್ತಿದೆ. ಯಾಕೆ ಈ ಚರ್ಚೆ? ಚೀನಾದ ಮೇಲೆ ಅನುಮಾನ ಯಾಕೆ? ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಯಾಕೆ ಈಗ ಚರ್ಚೆ?
ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಜೈವಿಕ ಅಸ್ತ್ರವಾಗಿ ಬಳಸಲು ಕೊರೊನಾ ವೈರಸ್ ಅನ್ನು ಐದು ವರ್ಷಗಳ ಹಿಂದೆಯೇ ಅನ್ವೇಷಣೆ ಮಾಡಿದೆ. ಜೈವಿಕ ಶಸ್ತ್ರಾಸ್ತ್ರ ಬಳಸಿಯೇ ಮೂರನೇ ವಿಶ್ವಯುದ್ಧ ನಡೆಯಲಿದೆ ಎಂಬುದಾಗಿ ಪಿಎಲ್‍ಎ ಅಂದಾಜಿಸಿತ್ತು ಎಂದು ‘ದಿ ಅಸ್ಟ್ರೇಲಿಯನ್’ ಪತ್ರಿಕೆ ವರದಿ ಮಾಡಿದೆ. ಈ ವರದಿಯನ್ನು ಆಧಾರಿಸಿ ಇಂಗ್ಲೆಡಿನ ‘ದಿ ಸನ್’ ಪತ್ರಿಕೆ ಚೀನಾದ ವಿಜ್ಞಾನಿಗಳು ಸಾರ್ಸ್ ಕೊರೊನಾ ವೈರಸ್ ಎಂದು ವರ್ಣಿಸಿದ್ದರು. ಅವುಗಳಲ್ಲಿ ಕೋವಿಡ್ ಒಂದು ಉದಾಹರಣೆ. ಇದು, ಜೈವಿಕ ಶಸ್ತ್ರಾಸ್ತ್ರಗಳ ಹೊಸ ಯುಗ ಎಂದು ವರದಿ ಮಾಡಿತ್ತು. ಇದನ್ನೂ ಓದಿ: ಕೊರೊನಾ ವೈರಸ್‌ ಸೃಷ್ಟಿಯಾಗಿದ್ದು ಭಾರತದಲ್ಲಿ – ಚೀನಾದ ಮೊಂಡುವಾದ

ಸಾರ್ಸ್ ಕೊರೊನಾ ವೈರಸ್ ನನ್ನು ಜಾಗತಿಕ ಯುದ್ಧಕ್ಕೆ ‘ಜೈವಿಕ ಅಸ್ತ್ರ’ವಾಗಿ ಬಳಸಿಕೊಳ್ಳಬಹುದು. ಇಡೀ ಮಾನವ ಕುಲ ನಾಶಕ್ಕಾಗಿ ಈ ವೈರಸ್ ನನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಬಹುದು ಎಂದು ಚೀನಾದ ವಿಜ್ಞಾನಿಗಳು ಹಾಗೂ ಆರೋಗ್ಯ ಅಧಿಕಾರಿಗಳು ಬರೆದಿರುವ ಒಂದು ಸಂಶೋಧನಾ ಲೇಖನದ ಬಗ್ಗೆ ದಿ ಆಸ್ಟ್ರೇಲಿಯನ್ ಬೆಳಕು ಚೆಲ್ಲಿದೆ. ಇದನ್ನೂ ಓದಿ:ಕೋವಿಡ್‌ 19 – ಬೆಳಕಿಗೆ ಬಂತು ಚೀನಾದ ಮತ್ತೊಂದು ಮಹಾ ಕಳ್ಳಾಟ

ಚೀನಾದ ಪ್ರತಿಕ್ರಿಯೆ ಏನು?
ಇದೊಂದು ಸುಳ್ಳು ವರದಿಯಾಗಿದ್ದು, ದೇಶದ ಬಲವನ್ನು ಕುಗ್ಗಿಸುವ ಒಂದು ಯತ್ನವಾಗಿದೆ. ಚೀನಾಗೆ ಕೆಟ್ಟ ಹೆಸರು ತರುವ ಒಂದು ಭಾಗ. ಚೀನಾ ಎಂದಿಗೂ ಜೈವಿಕ ಅಸ್ತ್ರಗಳನ್ನು ಅಭಿವೃದ್ಧಿ ಪಡಿಸುತ್ತಿಲ್ಲ. ಜೈವಿಕ ಪ್ರಯೋಗಾಲಯಗಳ ಸುರಕ್ಷತೆಗೆ ನಾವು ಕಠಿಣವಾದ ಕಾನೂನುಗಳನ್ನು ರೂಪಿಸಿದ್ದೇವೆ ಎಂದು ಚೀನಾ ವಿದೇಶಾಂಗ ಇಲಾಖೆ ಹೇಳಿದೆ.

ಅನುಮಾನ ಯಾಕೆ?
ಕೊರೊನಾ ವೈರಸ್ ಮೂಲ ಎಲ್ಲಿದೆ ಎನ್ನುವ ವಿಚಾರ ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಇದು ಮನುಷ್ಯನಿಗೆ ಹರಡಿದ್ದು ಹೇಗೆ ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ವುಹಾನ್ ವೆಟ್ ಮಾರುಕಟ್ಟೆಯಿಂದ ಈ ವೈರಸ್ ಸೃಷ್ಟಿಯಾಗಿರಬಹುದು. ಈ ಮರುಕಟ್ಟೆಗೆ ವಿಶ್ವದ ಹಲವು ದೇಶಗಳಿಂದ ಮಾಂಸಗಳು ಬರುವ ಕಾರಣ ನಮ್ಮ ದೇಶದಲ್ಲೇ ಸೃಷ್ಟಿಯಾಗಿದೆ ಎಂದು ಹೇಳಲು ಬರುವುದಿಲ್ಲ ಎನ್ನುವುದು ಚೀನಾದ ವಾದ. ಇದನ್ನೂ ಓದಿ: 2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ವುಹಾನ್ ಪತ್ರಕರ್ತ

ಲ್ಯಾಬ್‍ನಿಂದ ಸೋರಿಕೆ?
ಏಷ್ಯಾದ ಅತಿ ದೊಡ್ಡ ವೈರಸ್ ಬ್ಯಾಂಕ್ ವುಹಾನ್ ನಗರದಲ್ಲಿದೆ. ಈ ಹಿಂದೆ”ಏಷ್ಯದ ಅತಿ ದೊಡ್ಡ ವೈರಸ್ ಬ್ಯಾಂಕಿನ ಚಿತ್ರವನ್ನು ವೀಕ್ಷಿಸಿ, ಮಧ್ಯ ಚೀನಾ ಹುಬೆ ಪ್ರಾಂತ್ಯದಲ್ಲಿರುವ ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಾಜಿ ಕೇಂದ್ರದಲ್ಲಿ 1,500 ವಿವಿಧ ವೈರಸ್ ಗಳನ್ನು ರಕ್ಷಿಸಲಾಗಿದೆ” ಎಂದು ಚೀನಾ ಡೈಲಿ 2018ರ ಮೇ 29 ಬೆಳಗ್ಗೆ 5:45ಕ್ಕೆ ಟ್ವೀಟ್ ಮಾಡಿತ್ತು. ಈ ಟ್ವೀಟ್ ಕಳೆದ ವರ್ಷ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು.

ವುಹಾನ್ ವಿಶೇಷತೆ ಏನು?
ಮಧ್ಯ ಚೀನಾದ ದೊಡ್ಡ ನಗರ ವುಹಾನ್ ಆಗಿದ್ದು ಇಲ್ಲಿ ಬಂದರು, ವಿಮಾನ ನಿಲ್ದಾಣಗಳಿವೆ. 35 ಶಿಕ್ಷಣ ಸಂಸ್ಥೆಗಳಿದ್ದು ಚೀನಾದ ಶೈಕ್ಷಣಿಕ ಹಬ್ ಎಂದು ವುಹಾನ್ ನಗರವನ್ನು ಕರೆಯಲಾಗುತ್ತದೆ. ಈ ಕಾರಣಕ್ಕೆ ಹಲವು ರಾಷ್ಟ್ರಗಳ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಚೀನಾ ಸರ್ಕಾರವೇ ಇಲ್ಲಿ ಹಲವು ಸಂಶೋಧನಾ ಕೇಂದ್ರಗಳನ್ನು ತೆರೆದಿದೆ. ಒಟ್ಟು ಇಲ್ಲಿ 350 ಸಂಶೋಧನಾ ಕೇಂದ್ರಗಳಿವೆ.

ಚೀನಾವೇ ಸೃಷ್ಟಿಸಿದ ವೈರಸ್?
ಕೊರೊನಾ ವೈರಸ್ ವೇಗವಾಗಿ ಹರಡುತ್ತಿರುವುದನ್ನು ಗಮನಿಸಿ ಈಗ ಚೀನಾವೇ ಈ ವೈರಸ್ ಸೃಷ್ಟಿ ಮಾಡಿತೇ ಎನ್ನುವ ಶಂಕೆ ಎದ್ದಿದೆ. ವೈರಸ್ ಅಧ್ಯಯನ ಮಾಡಲೆಂದೇ ವುಹಾನ್ ನಗರದಲ್ಲಿ ಚೀನಾ ಸರ್ಕಾರ ಸಂಶೋಧನಾ ಕೇಂದ್ರಗಳನ್ನು ತೆರೆದಿದೆ. ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಾಜಿ ಎಂಬ ಸಂಸ್ಥೆಯಲ್ಲಿ ಸಾರ್ಸ್ ಸೇರಿದಂತೆ ಹಲವು ವೈರಸ್ ಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಈಗ ಕೊರೊನಾ ವೈರಸ್ ಸೃಷ್ಟಿಯಾದ ಕೇಂದ್ರ ಸ್ಥಳ ವುಹಾನ್ ಆಗಿದೆ. ವುಹಾನ್ ವಿಶ್ವವಿದ್ಯಾಲಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪೀಡಿತರಾಗಿದ್ದರು.

ವೈರಾಲಾಜಿ ಸಂಸ್ಥೆಯಲ್ಲಿ ಏನು ಪ್ರಯೋಗ ಕೈಗೊಳ್ಳಲಾಗುತ್ತದೆ ಎನ್ನುವುದು ಈಗಲೂ ರಹಸ್ಯವಾಗಿದೆ. ಯುದ್ಧದ ಮೂಲಕ ದೇಶಗಳ ಜೊತೆ ಹೋರಾಡುವುದು ಇಂದು ಬಹಳ ಕಷ್ಟ. ಹೀಗಾಗಿ ಚೀನಾ ಜೈವಿಕ ಅಸ್ತ್ರವನ್ನು ತಯಾರು ಮಾಡುತ್ತದೆ ಎನ್ನುವ ಆರೋಪ ಈ ಹಿಂದಿನಿಂದಲೂ ಕೇಳಿ ಬಂದಿತ್ತು. ಸಾರ್ಸ್ ಆರಂಭದಲ್ಲಿ ಕಂಡು ಬಂದಿದ್ದು ಇದೇ ವುಹಾನ್ ನಲ್ಲಿ. 2002ರಲ್ಲಿ ಕಾಣಿಸಿಕೊಂಡಾಗ ಚೀನಾ ಈ ವಿಚಾರವನ್ನು ಮುಚ್ಚಿಟ್ಟಿತ್ತು. ಆದರೆ ವಿದೇಶಗಳಿಗೆ ಹರಡಿದಾಗ ಕೊನೆಗೆ ಸತ್ಯವನ್ನು ಒಪ್ಪಿಕೊಂಡಿತ್ತು. ಈಗಲೂ ಕೆಲ ವಿಜ್ಞಾನಿಗಳು ಇದು ಯಾವುದೋ ಪ್ರಾಣಿಯಿಂದ, ಪಕ್ಷಿಯಿಂದ ಕೊರೋನಾ ವೈರಸ್ ಸೃಷ್ಟಿಯಾಗಿಲ್ಲ. ಜೈವಿಕ ಅಸ್ತ್ರವನ್ನು ಪರೀಕ್ಷೆ ಮಾಡುತ್ತಿದ್ದಾಗ ಹೇಗೋ ಸೋರಿಕೆಯಾಗಿ ಈಗ ಜಗತ್ತಿಗೆ ಹರಡುತ್ತಿದೆ ಎಂದು ವಾದವನ್ನು ಮುಂದಿಡುತ್ತಿದ್ದಾರೆ. ಭಾರತದಲ್ಲಿ ಮೊದಲು ಕೇರಳದ ಮೂರು ಮಂದಿ ವಿದ್ಯಾರ್ಥಿ ಕೊರೋನಾ ವೈರಸ್ ಪತ್ತೆಯಾಗಿತ್ತು. ಈ ಮೂವರು ವುಹಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಆಗಿದ್ದರು ಎನ್ನುವುದು ವಿಶೇಷ.

Advertisement
Advertisement